ಇನ್ಫೋಸಿಸ್ ತೊರೆದ ವಿಶಾಲ್ ಸಿಕ್ಕಾ ಪತ್ನಿ ವಂದನಾ
Update: 2017-08-29 18:23 IST
ಹೊಸದಿಲ್ಲಿ, ಆ.29: ಇನ್ಫೋಸಿಸ್ ನ ಮಾಜಿ ಸಿಇಒ ಮತ್ತು ಎಂ.ಡಿ. ವಿಶಾಲ್ ಸಿಕ್ಕಾರ ಪತ್ನಿ ವಂದನಾ ಸಿಕ್ಕಾ ಇನ್ಫೋಸಿಸ್ ಫೌಂಡೇಶನ್ ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಮೆರಿಕಾದ ಇನ್ಫೋಸಿಸ್ ಫೌಂಡೇಶನ್ ನ ಅಧ್ಯಕ್ಷೆಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು.
“ಇನ್ಫೋಸಿಸ್ ಫೌಂಡೇಶನ್ ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ನಾನು ಈ ಪತ್ರದ ಮೂಲಕ ತಿಳಿಸುತ್ತಿದ್ದೇನೆ. ಆದರೆ ನಮಗೆಲ್ಲರಿಗೂ ತಿಳಿದಂತೆ ಒಬ್ಬ ವ್ಯಕ್ತಿಯ ಆಸಕ್ತಿಗಳು ಒಂದು ಸಂಸ್ಥೆಯ ವ್ಯಾಪ್ತಿಗೆ ಮೀಸಲಾಗಿರುವುದಿಲ್ಲ” ಎಂದು ಸಿಕ್ಕಾ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಆಶ್ಚರ್ಯಕಾರಿ ಬೆಳವಣಿಗೆಯೊಂದರಲ್ಲಿ ವಿಶಾಲ್ ಸಿಕ್ಕಾ ಕೆಲ ದಿನಗಳ ಮೊದಲು ಇನ್ಫೋಸಿಸ್ ನ ಸಿಇಒ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಆನಂತರ ನಂದನ್ ನಿಲೇಕಣಿ ಇನ್ಫೋಸಿಸ್ ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.