×
Ad

‘ಝಡ್’ ಶ್ರೇಣಿಯ ಭಾರತದ ಮೊದಲ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ

Update: 2017-08-29 18:41 IST

 ಹೊಸದಿಲ್ಲಿ, ಆ. 30: ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರ ಉತ್ತರಾಧಿಕಾರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿರುವ ನ್ಯಾಯಮೂರ್ತಿ ದೀಪಕ್ ಮಿಶ್ರಾ ದೇಶದ ಮೊದಲ ಝಡ್ ಶ್ರೇಣಿ ಭದ್ರತೆ ಹೊಂದಿರುವ ಭಾರತೀಯ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.

 1993ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿ ಯಾಕೂಬ್ ಮೆಮನ್‌ಗೆ ನ್ಯಾಯಾಲಯ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು. 30 ಜುಲೈ 2015 ಮುಂಜಾನೆ ಮರಣದಂಡನೆಗೆ ಸಮಯ ನಿಗದಿಪಡಿಸಲಾಗಿತ್ತು. ಅದಕ್ಕಿಂತ ಹಿಂದಿನ ರಾತ್ರಿ ಯಾಕೂಬ್ ಮೆಮನ್ ಮನವಿ ಸಲ್ಲಿಸಿ ಮರಣದಂಡನೆ ಶಿಕ್ಷೆ ಕಡಿತಗೊಳಿಸುವಂತೆ ಕೋರಿದ್ದ. ಆದರೆ, ನ್ಯಾಯಮೂರ್ತಿ ಮಿಶ್ರಾ ನೇತೃತ್ವದ ಪೀಠ ಈ ಮನವಿ ತಿರಸ್ಕರಿಸಿತ್ತು. ಇದಾದ ಬಳಿಕ ಮಿಶ್ರಾ ಅವರ ಅಧಿಕೃತ ನಿವಾಸದಲ್ಲಿ ಅನಾಮಿಕನೋರ್ವ ಬೆದರಿಕೆ ಪತ್ರ ಎಸೆದು ಹೋಗಿದ್ದ. ಈ ಹಿನ್ನೆಲೆಯಲ್ಲಿ ಅವರಿಗೆ ಝಡ್ ಶ್ರೇಣಿಯ ಭದ್ರತೆ ನೀಡಲಾಗಿತ್ತು. ಪೊಲೀಸ್ ಬೆಂಗಾವಲು ವಾಹನದೊಂದಿಗೆ ಬುಲ್ಲೆಟ್ ಪ್ರೂಫ್ ಅಂಬಾಸಿಡರ್ ಕಾರನ್ನು ಬಳಸುವ ಸುಪ್ರೀಂ ಕೋರ್ಟ್‌ನ ಏಕೈಕ ನ್ಯಾಯಮೂರ್ತಿ ದೀಪಕ್ ಮಿಶ್ರಾ. ಅವರು ಮುಂದಿನ ವರ್ಷ ಅಕ್ಟೋಬರ್ 2ರಂದು ನಿವೃತ್ತರಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News