ಮಧುಮೇಹ,ಅಸ್ತಮಾ,ಅನೀಮಿಯಾ ಇತ್ಯಾದಿಗಳಿಗೆ ರಾಮಬಾಣವಾಗಿರುವ ಈ ತರಕಾರಿ ಗೊತ್ತೇ?

Update: 2017-08-30 09:40 GMT

ತರಕಾರಿ ಅಂಗಡಿಗಳಲ್ಲಿ ಸಾಮಾನ್ಯವಾಗಿರುವ ಬೆಂಡೆ ಮಧುಮೇಹ, ಅಸ್ತಮಾ, ಅನೀಮಿಯಾ, ಮಂಜಾಗುತ್ತಿರುವ ಕಣ್ಣಿನ ದೃಷ್ಟಿ ಸೇರಿದಂತೆ ಹಲವಾರು ರೋಗಗಳಿಗೆ ರಾಮಬಾಣವಾಗಿದೆ ಎಂದರೆ ಅಚ್ಚರಿ ಪಡಬೇಡಿ. ಅದೇಕೋ,ಕೆಲವರಿಗೆ ಬೆಂಡೆಯನ್ನು ಕಂಡರಾಗುವುದಿಲ್ಲ. ಆದರೆ ಅದರಷ್ಟು ಆರೋಗ್ಯಲಾಭಗಳನ್ನು ಒದಗಿಸುವ ತರಕಾರಿ ಇನ್ನೊಂದಿಲ್ಲ.

ಕಡಿಮೆ ಕ್ಯಾಲೊರಿಗಳನ್ನು ಒಳಗೊಂಡಿರುವ ಬೆಂಡೆ ಸಮೃದ್ಧ ಪೋಷಕಾಂಶಗಳನ್ನು ಹೊಂದಿದೆ. ನಾರು, ವಿಟಾಮಿನ್ ಎ ಮತ್ತು ಬಿ ಹಾಗೂ ಫಾಲಿಕ್ ಆ್ಯಸಿಡ್‌ಗಳ ಉತ್ತಮ ಮೂಲವಾಗಿದೆ. ವಿಟಾಮಿನ್ ಕೆ ಮತ್ತು ಬಿ, ಕಬ್ಬಿಣ, ಪೊಟ್ಯಾಷಿಯಂ, ಸತುವು, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಮ್ಯಾಗ್ನೇಷಿಯಂ ಕೂಡ ಹೇರಳವಾಗಿವೆ. ಬೆಂಡೆ ಎಂಬ ಈ ಸಾಮಾನ್ಯ ತರಕಾರಿ ರೋಗಗಳನ್ನು ವಾಸಿ ಮಾಡುವಲ್ಲಿ ಹೇಗೆ ನೆರವಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ....

ಅನೀಮಿಯಾ ಅಥವಾ ರಕ್ತಹೀನತೆ: 

ಬೆಂಡೆಯನ್ನು ಆಹಾರದಲ್ಲಿ ನಿಯಮಿತವಾಗಿ ಬಳಸಿದರೆ ಅದು ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ.

ಕ್ಯಾನ್ಸರ್:

ಅದು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದ್ದು, ಶರೀರದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಫ್ರೀ ರ್ಯಾಡಿಕಲ್ಸ್‌ಗಳಿಂದ ರಕ್ಷಣೆ ನೀಡುತ್ತದೆ ಮತ್ತು ಜೀವಕೋಶಗಳ ವಿಭಜನೆಯನ್ನು ತಡೆಯುತ್ತದೆ. ತನ್ಮೂಲಕ ಕ್ಯಾನ್ಸರ್ ನಿರೋಧಕವಾಗಿ ಪರಿಣಾಮಕಾರಿ ಕಾರ್ಯವನ್ನು ನಿರ್ವಹಿಸುತ್ತದೆ.

ಅಸ್ತಮಾ:

ಬೆಂಡೆಯಲ್ಲಿ ಹೇರಳ ಪ್ರಮಾಣದಲ್ಲಿರುವ ವಿಟಾಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಅಸ್ತಮಾವನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತವೆ.

ಎಲುಬುಗಳು:

ಇದರಲ್ಲಿರುವ ಫೊಲೇಟ್ ಎಲುಬುಗಳನ್ನು ಗಟ್ಟಿಯಾಗಿಸುವ ಜೊತೆಗೆ ಅಸ್ಥಿರಂಧ್ರತೆಯನ್ನು ತಡೆಯುತ್ತದೆ. ಇದು ಬೆಂಡೆಯ ಅತ್ಯುತ್ತಮ ಆರೋಗ್ಯಲಾಭಗಳ ಲ್ಲೊಂದಾಗಿದೆ.

ಕೊಲೆಸ್ಟ್ರಾಲ್:

ಇದು ಕರಗಬಲ್ಲ ನಾರನ್ನೊಳಗೊಂಡಿದ್ದು, ರಕ್ತಸಾರದಲ್ಲಿಯ ಕೊಲೆಸ್ಟ್ರಾಲ್ ನ್ನು ತಗ್ಗಿಸುವುಲ್ಲಿ ನೆರವಾಗುತ್ತದೆ ಮತ್ತು ತನ್ಮೂಲಕ ಹೃದ್ರೋಗಗಳ ಅಪಾಯವನ್ನು ಕಡಿಮೆಗೊಳಿಸುತ್ತದೆ.

ಮಲಬದ್ಧತೆ:

ಬೆಂಡೆಯಲ್ಲಿನ ನಾರು, ಅಂಟು ಮತ್ತು ವಿರೇಚಕ ಅಂಶಗಳು ಮಲ ವಿಸರ್ಜನೆಯನ್ನು ಸುಲಭಗೊಳಿಸುತ್ತವೆ. ಬೆಂಡೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಮಲಬದ್ಧತೆಯನ್ನು ನಿವಾರಿಸಬಹುದು ಮತ್ತು ದೊಡ್ಡಕರುಳಿನ ಕ್ಯಾನ್ಸರ್ ಅಪಾಯವನ್ನು ತಗ್ಗಿಸಬಹುದು.

ಮಧುಮೇಹ:

ಬೆಂಡೆಯು ಇನ್ಸುಲಿನ್‌ನಂತೆ ವರ್ತಿಸುವ ಗುಣವನ್ನು ಹೊಂದಿರುವುದ ರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ಮಧುಮೇಹಿಗಳು ಪ್ರತಿದಿನ 6-8 ಎಳೆಯ ಬೆಂಡೆಕಾಯಿಗಳನ್ನು ಹಸಿಯಾಗಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.

ಕಣ್ಣಿನ ದೃಷ್ಟಿ:

ಈ ತರಕಾರಿ ಬೀಟಾ ಕ್ಯಾರೊಟಿನ್, ಲುಟೀನ್ ಮತು ಝಾಂತಿನ್‌ಗಳ ಸಮೃದ್ಧ ಮೂಲವಾಗಿದ್ದು, ಇವು ಕಣ್ಣಿನ ದೃಷ್ಟಿಯ ಆರೋಗ್ಯಕ್ಕೆ ಅತ್ಯುತ್ತಮವಾಗಿವೆ. ಕ್ಯಾಟರಾಕ್ಟ್ ಮತ್ತು ಗ್ಲುಕೋಮಾದಂತಹ ಕಣ್ಣಿನ ಸಮಸ್ಯೆಗಳನ್ನು ತಡೆಯುವಲ್ಲಿ ಬೆಂಡೆ ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News