ಗಾಝಾ ದಿಗ್ಬಂಧನೆ ತೆರವುಗೊಳಿಸಿ: ಇಸ್ರೇಲ್‌ಗೆ ವಿಶ್ವಸಂಸ್ಥೆ ಮುಖ್ಯಸ್ಥ ಕರೆ

Update: 2017-08-31 18:03 GMT

ಬೇಟ್ ಲಹಿಯ (ಗಾಝಾ ಪಟ್ಟಿ), ಆ. 31: ಗಾಝಾ ಮೇಲಿನ ದಿಗ್ಬಂಧನೆಯನ್ನು ತೆರವುಗೊಳಿಸುವಂತೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಬುಧವಾರ ಇಸ್ರೇಲ್‌ಗೆ ಕರೆ ನೀಡಿದ್ದಾರೆ.

ವಿಶ್ವಸಂಸ್ಥೆ ಮುಖ್ಯಸ್ಥರಾಗಿ ಅಧಿಕಾರ ವಹಿಸಿದ ಬಳಿಕ ಮೊದಲ ಬಾರಿಗೆ ಇಸ್ರೇಲ್ ಮತ್ತು ಫೆಲೆಸ್ತೀನ್ ಪ್ರದೇಶಗಳಿಗೆ ನೀಡಿದ ಭೇಟಿಯ ಕೊನೆಯಲ್ಲಿ ಅವರು ಈ ಹೇಳಿಕೆ ನೀಡಿದರು.

ಜನರಿಂದ ತುಂಬಿಹೋಗಿರುವ ಹಾಗೂ ಬಡತನದ ಬೇಗುದಿಯಲ್ಲಿ ಸಿಲುಕಿರುವ ಗಾಝಾಪಟ್ಟಿಯ ಪರಿಸ್ಥಿತಿಯಿಂದ ತಾನು ವಿಚಲಿತನಾಗಿದ್ದೇನೆ ಎಂದು ಗುಟರಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News