ಶ್ರೀಸಾಮಾನ್ಯನ ಜೊತೆ ಜಪಾನ್ ರಾಜಕುಮಾರಿಯ ನಿಶ್ಚಿತಾರ್ಥ

Update: 2017-09-03 18:11 GMT

ಟೋಕಿಯೊ,ಸೆ.3: ಜಪಾನ್ ರಾಜಕುಮಾರಿ ಹಾಗೂ ಆಕೆಯ ದೀರ್ಘಕಾಲದ ಶ್ರೀಸಾಮಾನ್ಯ ಸ್ನೇಹಿತ, ತಾವಿಬ್ಬರೂ ವಿವಾಹನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ರವಿವಾರ ಪ್ರಕಟಿಸಿದ್ದಾರೆ. ಶ್ರೀಸಾಮಾನ್ಯನನ್ನು ವಿವಾಹವಾಗಲಿರುವ ಮೂಲಕ ರಾಜಕುಮಾರಿ ಮಾಕೊ ತನ್ನ ಅರಸೊತ್ತಿಗೆಯ ಸ್ಥಾನಮಾನವನ್ನು ಕಳೆದುಕೊಳ್ಳುವುದು ಈಗ ಖಚಿತವಾದಂತಾಗಿದೆ.

  ಮಾಕೊ ಅವರು ಜಪಾನ್ ಚಕ್ರವರ್ತಿ ಅಖಿಹಿಟೊ ಅವರ ಹಿರಿಯ ಮೊಮ್ಮಗಳಾಗಿದ್ದಾರೆ. ಜಪಾನ್ ಅರಸೊತ್ತಿಗೆಯ ಸಂಪ್ರದಾಯದ ಪ್ರಕಾರ ರಾಜಕುಟುಂಬದ ಮಹಿಳಾ ಸದಸ್ಯೆಯರು ಶ್ರೀಸಾಮಾನ್ಯನನ್ನು ವಿವಾಹವಾದಲ್ಲಿ ರಾಜಮನೆತನದ ಸ್ಥಾನಮಾನಗಳನ್ನು ಕಳೆದುಕೊಳ್ಳುತ್ತಾರೆ. ಆದರೆ ಈ ಕಾನೂನು ರಾಜಕುಟುಂಬದ ಪುರುಷ ಸದಸ್ಯರಿಗೆ ಅನ್ವಯವಾಗುವುದಿಲ್ಲ.

 ಆದರೆ ತಾನು ಶ್ರೀಸಾಮಾನ್ಯನನ್ನು ವರಿಸಲಿರುವುದು ತನಗೆ ತುಂಬಾ ಸಂತಸತಂದಿದೆಯೆಂದು ಮಾಕೊ ಟಿವಿಯಲ್ಲಿ ಪ್ರಸಾರವಾದ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.ಈವರೆಗೆ ಚಕ್ರವರ್ತಿಯ ಕೆಲಸಕಾರ್ಯಗಳಲ್ಲಿ ತಾನು ನೆರವಾಗಿದ್ದೆ ಹಾಗೂ ರಾಜಕುಟುಂಬದ ಸದಸ್ಯೆಯಾಗಿಯೂ ನನ್ನ ಕರ್ತವ್ಯಗಳನ್ನು ಸಾಧ್ಯವಿದ್ದಷ್ಟು ಮಟ್ಟಿಗೆ ಈಡೇರಿಸಿದ್ದೇನೆ.ನ ನನ್ನ ಜೀವನವನ್ನು ನಾನೇ ಆಸ್ವಾದಿಸುತ್ತಿದ್ದೇನೆ’’ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News