×
Ad

6ನೇ ಅಣ್ವಸ್ತ್ರ ಪರೀಕ್ಷೆ ನಡೆಸಿದ ಉತ್ತರ ಕೊರಿಯ

Update: 2017-09-03 23:47 IST

ಸಿಯೋಲ್, ಸೆ. 3: ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಉತ್ತರ ಕೊರಿಯಾ ಹೇಳಿದೆ. ಇದರಿಂದ ಉಂಟಾದ ಭೂಕಂಪನದ ಆಧಾರದಲ್ಲಿ ಇದು ಇದುವರೆಗಿನ ಅತ್ಯಂತ ಪ್ರಬಲ ಸ್ಫೋಟ ಎಂದು ಅದು ತಿಳಿಸಿದೆ.

ಈ ನ್ಯೂಕ್ಲಿಯರ್ ಸ್ಫೋಟದ ಸಾಮರ್ಥ್ಯ 50 ಹಾಗೂ 60 ಕಿಲೋಟನ್‌ಗಳ ನಡುವೆ ಇದೆ ಅಥವಾ 2016ರಲ್ಲಿ ಉತ್ತರ ಕೊರಿಯ ನಡೆಸಿದ 5ನೇ ಪರೀಕ್ಷೆಗಿಂತ 6 ಪಟ್ಟು ಪ್ರಬಲವಾಗಿದೆ ಎಂದು ಎಂದು ದಕ್ಷಿಣ ಕೊರಿಯಾದ ಹವಾಮಾನ ಸಂಸ್ಥೆ ಅಂದಾಜಿಸಿದೆ.

ಅಮೆರಿಕದಲ್ಲಿ ಯಾವುದೇ ಸ್ಥಳಗಳಲ್ಲಿ ದಾಳಿ ಮಾಡುವ ಸಾಮರ್ಥ್ಯ ಇರುವ ನ್ಯೂಕ್ಲಿಯರ್ ಕ್ಷಿಪಣಿ ಹೊಂದುವ ಮೂಲಕ ಉತ್ತರ ಕೊರಿಯಾ ಇನ್ನೊಂದು ಆಕಾಂಕ್ಷೆಯ ಹೆಜ್ಜೆ ಇರಿಸಿದಂತಾಗಿದೆ.

ಪರೀಕ್ಷೆ ಸಂಪೂರ್ಣ ಯಶಸ್ವಿ. ಎರಡು ಹಂತದ ಥರ್ಮೊನ್ಯೂಕ್ಲಿಯರ್ ಆಯುಧ ಅಭೂತಪೂರ್ವ ಸಾಮರ್ಥ್ಯ ಹೊಂದಿದೆ ಎಂದು ಉತ್ತರ ಕೊರಿಯಾದ ಸುದ್ದಿವಾಹಿನಿ ಹೇಳಿದೆ.

  ಈ ಹಿಂದೆ ಉತ್ತರ ಕೊರಿಯಾ ಉತ್ತರ ಹಮ್‌ಗ್ಯೋಂಗ್ ಪ್ರಾಂತ್ಯದ ಕಿಲಿಜುವಿನಲ್ಲಿ ನ್ಯೂಕ್ಲಿಯರ್ ಪರೀಕ್ಷೆ ನಡೆಸಿದ ಬಳಿಕ ಸ್ಥಳೀಯ ಸಮಯ ಅಪರಾಹ್ನ 12.29ರ ಹೊತ್ತಿಗೆ 5.7 ಕೃತಕ ಭೂಕಂಪನ ಸಂಭವಿಸಿತ್ತು ಎಂದು ಸಿಯೋಲ್‌ನ ಹವಾಮಾನ ಸಂಸ್ಥೆ ಹಾಗೂ ಸಂಬಂಧಿಗಳ ಜಂಟಿ ಮುಖ್ಯಸ್ಥರು ಹೇಳಿದ್ದಾರೆ.

ಆದರೆ, ಈ ಬಾರಿ ಪರೀಕ್ಷೆಯ ನಂತರ ಸಂಭವಿಸಿದ ಭೂಕಂಪನ ಮಾಪಕದಲ್ಲಿ 6.5ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕಾದ ಭೂವಿಜ್ಞಾನ ಸಮೀಕ್ಷೆ ತಿಳಿಸಿದೆ.

ಅಮೆರಿಕದ ವಿದೇಶಾಂಗ ಸಚಿವಾಲಯದಿಂದ ತತ್‌ಕ್ಷಣ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ದಕ್ಷಿಣ ಕೊರಿಯಾದ ಅಧ್ಯಕ್ಷರ ಕಚೇರಿ, ಅಧ್ಯಕ್ಷ ಜೇಯ್-ಇನ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆ ನಡೆಸಲಾಗುವುದು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News