ಲುಕಾಕು ನೆರವು: ಬೆಲ್ಜಿಯಂ ವಿಶ್ವಕಪ್‌ಗೆ ತೇರ್ಗಡೆ

Update: 2017-09-04 18:46 GMT

ಅಥೆನ್ಸ್, ಸೆ.4: ರೊಮೆಲು ಲುಕಾಕು ಹೆಡರ್ ಮೂಲಕ ದಾಖಲಿಸಿದ ಗೋಲು ನೆರವಿನಲ್ಲಿ ಗ್ರೀಸ್ ವಿರುದ್ಧ ಬೆಲ್ಜಿಯಂ ತಂಡ 2-1 ಅಂತರದಲ್ಲಿ ಗೆಲುವು ದಾಖಲಿಸಿದೆ. ಇದರೊಂದಿಗೆ ಬೆಲ್ಜಿಯಂ ಮುಂದಿನ ವರ್ಷದ ವಿಶ್ವಕಪ್‌ಗೆ ತೇರ್ಗಡೆಯಾದ ಯುರೋಪಿನ ಮೊದಲ ಫುಟ್ಬಾಲ್ ತಂಡವಾಗಿದೆ.

ಬೆಲ್ಜಿಯಂ ಈವರೆಗೆ ವಿಶ್ವಕಪ್‌ಗೆ ತೇರ್ಗಡೆ ಯಾದ 6ನೆ ತಂಡವಾಗಿದೆ. ಬ್ರೆಝಿಲ್, ಜಪಾನ್, ಇರಾನ್, ಮೆಕ್ಸಿಕೊ, ಆತಿಥೇಯ ರಷ್ಯಾ ಈಗಾಗಲೇ ವಿಶ್ವಕಪ್‌ಗೆ ತೇರ್ಗಡೆಯಾಗಿವೆೆ. ಬೆಲ್ಜಿಯಂ ‘ಎಚ್’ ಗುಂಪಿನಲ್ಲಿ 22 ಪಾಯಿಂಟ್ಸ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ವಿಶ್ವಕಪ್‌ನಲ್ಲಿ ಆಡುವ ಅವಕಾಶ ದೃಢಪಡಿಸಿದೆ. ಯುರೋಪಿನ 9 ಗ್ರೂಪ್‌ಗಳಲ್ಲಿ ಅಗ್ರ ಸ್ಥಾನ ಪಡೆದ ತಂಡಗಳು ನೇರವಾಗಿ ವಿಶ್ವಕಪ್‌ಗೆ ತೇರ್ಗಡೆಯಾಗಲಿವೆೆ. ಎರಡನೆ ಸ್ಥಾನ ಪಡೆದ 8 ತಂಡಗಳು ಉಳಿದ 4 ಸ್ಥಾನಗಳಿಗಾಗಿ ಹಣಾಹಣಿ ನಡೆಸಲಿವೆೆ.

  ಬೆಲ್ಜಿಯಂ ತಂಡದ ಡಿಫೆಂಡರ್ ವಿನ್ಸೆಂಟ್ ಕೊಂಪನಿ ಅವರು ಜಬ್ರಾಲ್ಟರ್ ತಂಡದ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಆಡಿದ್ದರು. ಈ ಪಂದ್ಯದಲ್ಲಿ ಬೆಲ್ಜಿಯಂ 7-0 ಅಂತರದಲ್ಲಿ ಜಯ ಗಳಿಸಿತ್ತು. ಗ್ರೀಸ್ ತಂಡದ ವಿರುದ್ಧ ಅವರು ಆಡಿರಲಿಲ್ಲ.

 ಡಿಫೆಂಡರ್ ಜಾನ್ ವೆರ್ಟೆನ್‌ೆನ್ 70ನೆ ನಿಮಿಷದಲ್ಲಿ ಗೋಲು ದಾಖಲಿಸಿ ಬೆಲ್ಜಿಯಂಗೆ 1-0 ಮುನ್ನಡೆ ದೊರಕಿಸಿಕೊಟ್ಟಿದ್ದರು. 73ನೆ ನಿಮಿಷದಲ್ಲಿ ಪೋರ್ಚುಗಲ್ ಮೂಲದ ಝೆಕಾ ಗೋಲು ದಾಖಲಿಸಿ ಗ್ರೀಕ್‌ಗೆ 1-1 ಸಮಬಲ ಸಾಧಿಸಲು ಸಹಾಯ ಮಾಡಿದರು. ಒಂದು ನಿಮಿಷ ಕಳೆಯುವಷ್ಟರಲ್ಲಿ ಬೆಲ್ಜಿಯಂನ ಲುಕಾಕು ಹೆಡರ್ ಮೂಲಕ ಚೆಂಡನ್ನು ಗುರಿಯತ್ತ ತಲುಪಿಸುವಲ್ಲಿ ಯಶಸ್ವಿಯಾದರು. ಬೆಲ್ಜಿ ಯಂ 2-1 ಮುನ್ನಡೆಯೊಂದಿಗೆ ಗೆಲುವಿನ ದಡ ಸೇರಿತು. ತವರಿನಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಗ್ರೀಸ್ ಕೇವಲ 1 ಅಂಕ ಪಡೆದಿದ್ದು, ಒಟ್ಟು 13 ಅಂಕಗಳೊಂದಿಗೆ 3ನೆ ಸ್ಥಾನ ಗಳಿಸಿದೆ. ಬೊಸ್ನೀಯಾ ಎರಡನೆ ಸ್ಥಾನ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News