×
Ad

ಮ್ಯಾನ್ಮಾರ್‌ನಲ್ಲಿ ಮೋದಿ 2 ದಿನಗಳ ದ್ವಿಪಕ್ಷೀಯ ಭೇಟಿಗಾಗಿ ಪ್ರಯಾಣ

Update: 2017-09-05 23:06 IST

ನೇ ಪಿ ಟಾವ್ (ಮ್ಯಾನ್ಮಾರ್), ಸೆ. 5: ಚೀನಾದ ಕ್ಸಿಯಾಮೆನ್‌ನಲ್ಲಿ ಮಂಗಳವಾರ ‘ಬ್ರಿಕ್ಸ್’ ಸಮ್ಮೇಳನ ಮುಕ್ತಾಯಗೊಂಡ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ನೇರವಾಗಿ ಮ್ಯಾನ್ಮಾರ್‌ಗೆ ಪ್ರಯಾಣಿಸಿದ್ದಾರೆ.

ಎರಡು ದಿನಗಳ ಪ್ರವಾಸಕ್ಕಾಗಿ ಬಂದ ಮೋದಿಯನ್ನು ಆತಿಥೇಯ ಅಧ್ಯಕ್ಷ ಹಟಿನ್ ಕ್ಯಾವ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಇದು ಮ್ಯಾನ್ಮಾರ್‌ಗೆ ಮೋದಿ ನೀಡುತ್ತಿರುವ ಪ್ರಥಮ ದ್ವಿಪಕ್ಷೀಯ ಭೇಟಿಯಾಗಿದೆ.

  ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯ ಅಲ್ಪಸಂಖ್ಯಾತರ ವಿರುದ್ಧ ಅಲ್ಲಿನ ಸೇನೆ ನಡೆಸುತ್ತಿರುವ ಭೀಕರ ದಮನ ಕಾರ್ಯಾಚರಣೆಯ ಸಂದರ್ಭದಲ್ಲಿ ಮೋದಿ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಹಿಂಸಾಚಾರಕ್ಕೆ ಬೆದರಿ ಜೀವ ಉಳಿಸಿಕೊಳ್ಳುವುದಕ್ಕಾಗಿ ಒಂದು ವಾರದ ಅವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ರೊಹಿಂಗ್ಯ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News