ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ : ಒಂದೇ ದಿನ 10 ಪದಕ ಜಯಿಸಿದ ಭಾರತ

Update: 2017-09-06 18:45 GMT

ಹೊಸದಿಲ್ಲಿ, ಸೆ.6: ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಮೂರನೆ ದಿನವಾದ ಬುಧವಾರ ಭಾರತದ ವೇಟ್‌ಲಿಫ್ಟರ್‌ಗಳು ಮೂರು ಚಿನ್ನ ಸಹಿತ ಒಟ್ಟು 10 ಪದಕಗಳನ್ನು ಜಯಿಸಿದ್ದಾರೆ.

62 ಕೆಜಿ ಯೂತ್ ಬಾಯ್ಸ ವಿಭಾಗದಲ್ಲಿ ಎಂ.ರಾಜಾ ಒಟ್ಟು 260 ಕೆಜಿ(110ಕೆಜಿ+150)ಎತ್ತಿ ಹಿಡಿಯುವ ಮೂಲಕ ಚಿನ್ನದ ಪದಕ ಜಯಿಸಿದರು. ರಾಜಾ 62ಕೆಜಿ ಜೂನಿಯರ್ ಪುರುಷರ ವಿಭಾಗದಲ್ಲಿ ಒಟ್ಟು 260 ಕೆಜಿ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡರು.

ಹಿರಿಯ ಮಹಿಳೆಯರ 58 ಕೆಜಿ ತೂಕ ವಿಭಾಗದಲ್ಲಿ ಒಟ್ಟು 179 ಕೆಜಿ ಎತ್ತಿದ ಸರಸ್ವತಿ ರಾವುತ್ ಮೂರನೆ ದಿನದಾಟದ ಆರಂಭದಲ್ಲಿ ಭಾರತಕ್ಕೆ ಕಂಚು ಗೆದ್ದುಕೊಟ್ಟರು. ಎರ್ರಾ ದೀಕ್ಷಿತಾ 58 ಕೆಜಿ ಜೂನಿಯರ್ ಮಹಿಳೆಯರ ವಿಭಾಗದಲ್ಲಿ ಒಟ್ಟು 167 ಕೆಜಿ (73ಕೆಜಿ+94ಕೆಜಿ) ಎತ್ತುವುದರೊಂದಿಗೆ ಚಿನ್ನ ಜಯಿಸಿದರು.

ದೀಪಕ್ ಲಾಥೆರ್ ಒಟ್ಟು ಮೂರು ಪದಕಗಳನ್ನು ಜಯಿಸುವುದರೊಂದಿಗೆ ಉತ್ತಮ ಪ್ರದರ್ಶನ ನೀಡಿದರು. ಯೂತ್ ಬಾಯ್ಸ ಹಾಗೂ ಜೂನಿಯರ್ ಪುರುಷರ 69 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದ ದೀಪಕ್ ಹಿರಿಯ ಪುರುಷರ ವಿಭಾಗದ 69 ಕೆಜಿ ವಿಭಾಗದಲ್ಲಿ ಒಟ್ಟು 295 ಕೆಜಿ(138ಕೆಜಿ+157ಕೆಜಿ) ತೂಕ ಎತ್ತಿ ಹಿಡಿದಿದ್ದಾರೆ.

ವಂದನಾ ಗುಪ್ತಾ ಹಿರಿಯ ಮಹಿಳೆಯರ 63 ಕೆಜಿ ವಿಭಾಗದಲ್ಲಿ ಕಂಚು, ಉಮೇಶ್ವರಿ ಯೂತ್ ಗರ್ಲ್ಸ್‌ಹಾಗೂ ಜೂನಿಯರ್ ಮಹಿಳೆಯರ 63 ಕೆಜಿ ವಿಭಾಗದಲ್ಲಿ ತಲಾ ಒಂದು ಬೆಳ್ಳಿ ಗೆದ್ದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News