ಒಂದು ತಿಂಗಳು ಪ್ರತಿದಿನ ಬೆಳಿಗ್ಗೆ ಜೇನುನೀರು ಸೇವಿಸಿ, ಏನಾಗುತ್ತದೆ ನೋಡಿ......

Update: 2017-09-07 09:10 GMT

ಬೆಳಿಗ್ಗೆ ಒಂದು ಗ್ಲಾಸ್ ಬೆಚ್ಚಗಿನ ನೀರು ಕುಡಿದರೆ ಒಳ್ಳೆಯದು ಎನ್ನುವುದು ಹೆಚ್ಚಿನವರಿಗೆ ಗೊತ್ತು. ಚರ್ಮದ ಆರೋಗ್ಯಕ್ಕೆ ಜೇನು ತುಂಬ ಒಳ್ಳೆಯದು ಎನ್ನುವುದನ್ನೂ ಹೆಚ್ಚಿನವರು ಕೇಳಿರಬಹುದು. ಆದರೆ ಬೆಚ್ಚಗಿನ ನೀರನ್ನು ಜೇನಿನೊಂದಿಗೆ ಸೇವಿಸಿದರೆ ದೊರೆಯುವ ಆರೋಗ್ಯಲಾಭಗಳ ಬಗ್ಗೆ ನಿಮಗೆ ಗೊತ್ತೇ? ಜೇನುನೀರು ಎಂದು ಕರೆಯಲಾಗುವ ಈ ಪೇಯ ಆರೋಗ್ಯಕ್ಕೆ ಅತ್ಯುಪಯುಕ್ತವಾಗಿದೆ.

ಜೇನು ಇತರ ಆಹಾರಗಳಿಗಿಂತ ಶ್ರೇಷ್ಠ ಎನ್ನುವುದನ್ನು ಆಹಾರ ತಜ್ಞರು ಒಪ್ಪಿಕೊಂಡಿ ದ್ದಾರೆ. ಅದು ನೈಸರ್ಗಿಕವಾದ ಹಿತಾನುಭವ ನೀಡುವುದರೊಂದಿಗೆ ನಮ್ಮ ಚರ್ಮ ಮತ್ತು ತಲೆಗೂದಲಿಗೆ ಹೊಸ ಚೈತನ್ಯವನ್ನು ನೀಡುತ್ತದೆ.

ಜೇನುನೀರನ್ನು ಪ್ರತಿದಿನ ಬೆಳಿಗ್ಗೆ ಕುಡಿಯುವುದರಿಂದ ದೊರೆಯುವ ಆರೋಗ್ಯ ಲಾಭಗಳ ಬಗ್ಗೆ ಮಾಹಿತಿ ಇಲ್ಲಿದೆ......

ತೂಕ ಇಳಿಕೆ

ಪ್ರತಿ 100 ಗ್ರಾಂ ಜೇನು 305 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಒಂದು ಚಮಚ ಜೇನು ಸೇವನೆಯಿಂದ ಶರೀರದ ತೂಕವನ್ನು ಇಳಿಸಿಕೊಳ್ಳಬಹುದು. ಅದು ನೈಸರ್ಗಿಕ ಸಕ್ಕರೆಯ ಅತ್ಯುತ್ತಮ ಮೂಲವಾಗಿದ್ದು, ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸು ತ್ತದೆ.

ಮಲವಿಸರ್ಜನೆ ಸುಗಮ

ಜೀರ್ಣ ವ್ಯವಸ್ಥೆಗೆ ಜೇನು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ಅದು ನಂಜು ನಿರೋಧಕ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳನ್ನು ಹೊಂದಿದ್ದು, ಬೆಳಿಗ್ಗೆ ಎದ್ದ ತಕ್ಷಣ ಸೇವಿಸಿದರೆ ಹೊಟ್ಟೆಯನ್ನು ವಾಯು ಸಮಸ್ಯೆಗಳಿಂದ ಮುಕ್ತಗೊಳಿಸುತ್ತದೆ ಮತ್ತು ಮಲವಿಸರ್ಜನೆ ಸಲೀಸಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕಚ್ಚಾ ಜೇನು ಸಮೃದ್ಧ ಕಿಣ್ವಗಳನ್ನು ಹೊಂದಿದ್ದು, ವಿಟಾಮಿನ್‌ಗಳು ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ನಮ್ಮ ಶರೀರ ವ್ಯವಸ್ಥೆಯನ್ನು ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ರಕ್ಷಿಸುವಲ್ಲಿ ಅದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅತ್ಯುತ್ತಮ ಉತ್ಕರ್ಷಣ ನಿರೋಧಕವಾಗಿರುವ ಅದು ಚರ್ಮಕ್ಕೆ ಉತ್ತಮ ಆರೋಗ್ಯ ನೀಡುತ್ತದೆ.

ಅಲರ್ಜಿ ತಡೆಯುತ್ತದೆ

ನಿರ್ದಿಷ್ಟ ಪ್ರದೇಶದ ಕಚ್ಚಾ ಜೇನನ್ನು ಸೇವಿಸುವುದರಿಂದ ನಮ್ಮ ಶರೀರವು ಆ ಪ್ರದೇಶದಲ್ಲಿನ ಪರಾಗಗಳಿಗೆ ಹೊಂದಿಕೊಳ್ಳುತ್ತದೆ. ಇದರಿಂದಾಗಿ ಪ್ರಕೃತಿಯಿಂದ ಉಂಟಾಗುವ ಅಲರ್ಜಿಗಳು ಹೆಚ್ಚಾಗಿ ಬಾಧಿಸುವುದಿಲ್ಲ.

ತಕ್ಷಣ ಶಕ್ತಿ ನೀಡುತ್ತದೆ

ಬೆಳಿಗ್ಗೆ ಎದ್ದ ತಕ್ಷಣ ಜೇನುನೀರನ್ನು ಸೇವಿಸುವುದರಿಂದ ನಮ್ಮ ಆಲಸ್ಯ ಮತ್ತು ಅಲರ್ಜಿ ಲಕ್ಷಣಗಳು ನಿವಾರಣೆಯಾಗುತ್ತವೆ. ಇದರಿಂದ ನಮ್ಮ ಶರೀರ ಮತ್ತು ಮನಸ್ಸು ದಿನವಿಡೀ ತಾಜಾ ಆಗಿ ಇರುತ್ತವೆ.

ಕೆಮ್ಮು ಮತ್ತು ಗಂಟಲು ನೋವು ಶಮನ

ಜೇನು ಸೇವನೆಯಿಂದ ಕೆಮ್ಮು ಮತ್ತು ಗಂಟಲು ನೋವಿಗೆ ಶಮನ ದೊರೆಯುತ್ತದೆ. ಪ್ರತಿದಿನ ಬೆಳಿಗ್ಗೆ ಜೇನುನೀರಿನ ಸೇವನೆಯಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ.

ಹೃದಯದ ಆರೋಗ್ಯಕ್ಕೆ ಉತ್ತಮ

ಜೇನುನೀರಿನ ಸೇವನೆ ಒಳ್ಳೆಯ ಕೊಲೆಸ್ಟ್ರಾಲ್‌ನ್ನು ಹೆಚ್ಚಿಸುತ್ತದೆ ಮತ್ತು ಹೃದ್ರೋಗಗಳನ್ನು ತಡೆಯುತ್ತದೆ. ಅಧಿಕ ರಕ್ತದೊತ್ತಡವನ್ನು ತಗ್ಗಿಸುವಲ್ಲಿ ನೆರವಾಗುತ್ತದೆ. ಇದು ಪ್ರತಿದಿನ ಬೆಳಿಗ್ಗೆ ಜೇನುನೀರು ಸೇವನೆಯ ಅತ್ಯುತ್ತಮ ಆರೋಗ್ಯ ಲಾಭಗಳಲ್ಲೊಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News