‘ಇರ್ಮಾ' ಚಂಡಮಾರುತ: ಕೆರಿಬಿಯನ್ ನಲ್ಲಿ 10 ಸಾವು

Update: 2017-09-07 18:14 GMT

ಸಾನ್ ಜುವಾನ್, ಸೆ. 7: ಉತ್ತರ ಕೆರಿಬಿಯನ್ ದ್ವೀಪಗಳಿಗೆ ಅಪ್ಪಳಿಸಿರುವ ‘ಇರ್ಮಾ’ ಚಂಡಮಾರುತ ಪ್ರಕೋಪಕ್ಕೆ ಗುರುವಾರ ಕನಿಷ್ಠ 10 ಮಂದಿ ಬಲಿಯಾಗಿದ್ದಾರೆ, ಹಲವಾರು ಕಟ್ಟಡಗಳು ನಾಶವಾಗಿವೆ ಹಾಗೂ ಮರಗಳು ಉರುಳಿವೆ.

ಅಟ್ಲಾಂಟಿಕ್ ಸಾಗರದ ಈವರೆಗಿನ ಚಂಡಮಾರುತಗಳಲ್ಲೇ ಅತ್ಯಂತ ಪ್ರಬಲ ‘ಇರ್ಮಾ’ ಗುರುವಾರ ಬೆಳಗ್ಗಿನ ವೇಳೆ ತನ್ನ ಪ್ರಕೋಪವನ್ನು ಕೊಂಚ ಸಡಿಲಿಸಿತು. ಆದಾಗ್ಯೂ, ಗಂಟೆಗೆ 285 ಕಿ.ಮೀ. ವೇಗದಲ್ಲಿ ಪ್ರಬಲ ಕೆಟಗರಿ 5 ಬಿರುಗಾಳಿಯಾಗಿ ಅದು ಅಮೆರಿಕದ ಫ್ಲೋರಿಡ ರಾಜ್ಯದತ್ತ ಮುನ್ನುಗ್ಗಿದೆ ಎಂದು ಅಮೆರಿಕದ ರಾಷ್ಟ್ರೀಯ ಚಂಡಮಾರುತ ಕೇಂದ್ರ ಹೇಳಿದೆ.

ಬಿರುಗಾಳಿಯು ಭಾರೀ ಜನಸಾಂದ್ರತೆಯ ಸೌತ್ ಫ್ಲೋರಿಡಕ್ಕೆ ರವಿವಾರ ಮುಂಜಾನೆ ಅಪ್ಪಳಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ, ಫ್ಲೋರಿಡ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಹಾಗೂ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವಂತೆ ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News