ಸೂಕಿಯ ನೋಬೆಲ್ ವಾಪಸ್ ಪಡೆಯಲು ಸಾಧ್ಯವಿಲ್ಲ: ಅಕಾಡಮಿ

Update: 2017-09-10 09:23 GMT

ಯಾಂಗೂನ್,ಸೆ. 10: ಮ್ಯಾನ್ಮಾರ್ ನಾಯಕಿ ಆಂಗ್‍ಸಾನ್ ಸೂಕಿಗೆ ನೀಡಿರುವ ನೋಬೆಲ್ ಪಾರಿತೋಷಕವನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ನೋಬೆಲ್ ಇನ್ಸ್‍ಟಿಟ್ಯೂಟ್ ಹೇಳಿದೆ. ಸೂಕಿಗೆ ಪ್ರದಾನಿಸಿರುವ ನೋಬೆಲ್ ಪ್ರಶಸ್ತಿ ವಾಪಾಸು ಪಡೆಯಬೇಕೆಂದು  ಆಗ್ರಹಿಸಿ, 3,86,000 ಮಂದಿ ಸಹಿಹಾಕಿದ ಮನವಿ ಕಳೆದ ದಿವಸ ಸಂಸ್ಥೆಗೆ ಲಭಿಸಿತ್ತು. ನೋಬೆಲ್ ಪುರಸ್ಕಾರದ ಸ್ಥಾಪಕರಾದ ಆಲ್ಫ್ರೆಡ್ ನೋಬೆಲ್‍ರ ಉಯಿಲು ಪ್ರಕಾರ ಮತ್ತು ನೋಬೆಲ್ ಫೌಂಡೇಷನ್ ನಿಯಮದ ಪ್ರಕಾರವು ಒಮ್ಮೆ ಪ್ರಶಸ್ತಿ ನೀಡಿದರೆ ಅದನ್ನು ವಾಪಾಸು ಪಡೆಯಲು ಆಗುವುದಿಲ್ಲ ಎಂದು ನೋಬೆಲ್ ಇನ್ಸ್‍ಟಿಟ್ಯೂಟ್ ಮುಖ್ಯಸ್ಥರು ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳಿಗಾಗಿ ಅಹಿಂಸೆಯ ದಾರಿಯಲ್ಲಿ ಮ್ಯಾನ್ಮಾರಿನ ಸೈನಿಕಾಡಳಿತದ ವಿರುದ್ಧ ಹೋರಾಡಿದ್ದಕ್ಕಾಗಿ 1991ರಲ್ಲಿ ಸೂಕಿಗೆ ನೊಬೆಲ್ ಪಾರಿತೋಷಕ ನೀಡಲಾಗಿತ್ತು.  ರೋಹಿಂಗ್ಯನ್ ಮುಸ್ಲಿಮರ ವಿರುದ್ಧ ಮ್ಯಾನ್ಮಾರ್ ಸರಕಾರದ ದೌರ್ಜನ್ಯದಲ್ಲಿ ಸೂಕಿ ಘೋರ ಮೌನವಹಿಸಿದ್ದನ್ನು ಪ್ರತಿಭಟಿಸಿ change.org 386,000 ಮಂದಿ ಸಹಿಹಾಕಿದ ಆನ್‍ಲೈನ್ ಮನವಿಯನ್ನು ಸಂಸ್ಥೆಗೆ ಸಲ್ಲಿಸಿತ್ತು.  ಆದರೆ ಒಮ್ಮೆ ನೀಡಿದ ನೊಬೆಲ್ ಪ್ರಶಸ್ತಿಯನ್ನು ಮರಳಿ ಪಡೆಯಲು ಅವಕಾಶವಿಲ್ಲ ಎಂದು ಸಂಸ್ಥೆಯ ಮುಖ್ಯಸ್ಥರು, ಅಸೋಸಿಯೇಟೆಡ್ ಪ್ರೆಸ್‍ಗೆ ನೀಡಿದ ಇಮೇಲ್‍ನಲ್ಲಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News