ಯುಎಸ್ ಮಹಿಳೆಯರ ಡಬಲ್ಸ್‌ನಲ್ಲಿ ಹಿಂಗಿಸ್ - ಚಾನ್‌ಗೆ ಕಿರೀಟ

Update: 2017-09-11 18:38 GMT

ನ್ಯೂಯಾರ್ಕ್, ಸೆ.11: ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಮತ್ತು ಚೀನಾ ತೈಪೆಯ ಯಂಗ್ ಜಾನ್ ಚಿನ್ ಅವರು ಯುಎಸ್ ಓಪನ್ ಮಹಿಳೆಯರ ಡಬಲ್ಸ್ ಕಿರೀಟವನ್ನು ಬಾಚಿಕೊಂಡಿದ್ದಾರೆ.

  ಹಿಂಗಿಸ್ ಮತ್ತು ಜಾನ್ ಚಿನ್ ಮಹಿಳೆಯರ ಡಬಲ್ಸ್‌ನ ಫೈನಲ್‌ನಲ್ಲಿ ಝೆಕ್ ಗಣರಾಜ್ಯದ ಲೂಸಿ ಹ್ಯಾರಾಸೆಕಾ ಮತ್ತು ಕಟೆರಿನಾ ಸಿನಿಯಕೋವಾ ವಿರುದ್ಧ 6-3, 6-2 ನೇರ ಸೆಟ್‌ಗಳಿಂದ ಸುಲಭದ ಗೆಲುವಿನೊಂದಿಗೆ ಪ್ರಶಸ್ತಿ ಎತ್ತಿದರು.

ಚಾನ್‌ಗೆ ಇದು ಪ್ರಥಮ ಗ್ರಾನ್ ಸ್ಲಾಮ್ ಕಿರೀಟವಾಗಿದೆ. ಆದರೆ ಹಿಂಗಿಸ್ ಹಲವು ಸಮಯಗಳ ಬಳಿಕ ಎರಡನೆ ಡಬಲ್ಸ್ ಕಿರೀಟ ಸಿಕ್ಕಿದೆ. ಮಿಕ್ಸಿಡ್ ಡಬಲ್ಸ್‌ನಲ್ಲಿ ಹಿಂಗಿಸ್ ಶನಿವಾರ ಬ್ರಿಟನ್‌ನ ಜೆಮಿ ಮರ್ರೆ ಜೊತೆಗೂಡಿ ಪ್ರಶಸ್ತಿ ಎತ್ತಿದ್ದರು.

ಹಿಂಗಿಸ್ ಇದರೊಂದಿಗೆ ವೃತ್ತಿ ಬದುಕಿನಲ್ಲಿ ಜಯಿಸಿರುವ ಗ್ರಾನ್ ಸ್ಲಾಮ್‌ಗಳ ಸಂಖ್ಯೆಯನ್ನು 25ಕ್ಕೆ ಏರಿಸಿದ್ದಾರೆ. ಇದರಲ್ಲಿ 5 ಸಿಂಗಲ್ಸ್ ಮತ್ತು 13 ಡಬಲ್ಸ್ ಮತ್ತು 7 ಮಿಕ್ಸಿಡ್ ಡಬಲ್ಸ್ ಪ್ರಶಸ್ತಿಗಳು ಒಳಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News