ಕಾರ್ಗಿಲ್ ಅನ್ನು ಮರೆಯುವುದರಿಂದ ಇನ್ನಷ್ಟು ಒಳ್ಳೆಯ ನಿದ್ದೆಗೆ ಸಹಾಯವಾಗುತ್ತದೆ...

Update: 2017-09-16 18:10 GMT

ಗುರ್‌ಮೆಹರ್ ಕೌರ್‌ರ ತಂದೆ, ಕ್ಯಾಪ್ಟನ್ ಮನ್‌ದೀಪ್‌ಸಿಂಗ್, ಅದೇ ವರ್ಷ, 1999ರಲ್ಲಿ, ಆಗಸ್ಟ್ 6ರಂದು ಕಾರ್ಯ ನಿರತರಾಗಿದ್ದಾಗ ಶತ್ರುಸೈನಿಕರಿಂದ ಕೊಲ್ಲಲ್ಪಟ್ಟರು. ಇದು ಗುರ್‌ಮೆಹರ್ ಕೌರ್, ದ್ವಿವೇದಿಯ ಪುಸ್ತಕ, ‘ಲೆಟರ್ಸ್‌ ಫ್ರಂ ಕಾರ್ಗಿಲ್’, ಓದಿದ ಬಳಿಕ ಬರೆದ ಪ್ರತಿಕ್ರಿಯೆ.

ಆಗ ಎಂಟು ವರ್ಷದ ಹುಡುಗಿಯಾಗಿದ್ದ ದೀಕ್ಷಾ ದ್ವಿವೇದಿಗೆ, 1999ರ ಜುಲೈ 2ರಂದು, ತನ್ನ ತಂದೆ ಮೇಜರ್ ಸಿ.ಬಿ. ದ್ವಿವೇದಿ ಕಾರ್ಗಿಲ್‌ನಲ್ಲಿ ಯುದ್ಧ ಮಾಡುತ್ತಿದ್ದಾಗ ಮೃತಪಟ್ಟರೆಂದು ಗೊತ್ತಾಯಿತು. ಆ ಯುದ್ಧಗಳಲ್ಲಿ ಹೋರಾಡಿ ಮಡಿದ 527 ಭಾರತೀಯ ಸೈನಿಕರ ಕತೆಗಳು ಜನರ ಮನಸ್ಸಿನಿಂದ ಮರೆಯಾಗಿ ಹೋಗಿವೆ ಎಂದು, ವರ್ಷಗಳುರುಳಿದಂತೆ, ದ್ವಿವೇದಿಗೆ ಮನವರಿಕೆಯಾಯಿತು. ಆ ಸೈನಿಕರಲ್ಲಿ ಕೆಲವರ ಬಗ್ಗೆ ಅವಳೊಂದು ಪುಸ್ತಕ ಬರೆಯಲು ನಿರ್ಧರಿಸಿದಳು. ಅದು ಅವರು ತಮ್ಮ ಕುಟುಂಬಗಳಿಗೆ ಬರೆದ ಪತ್ರಗಳ ಮೂಲಕ ಹೇಳಲಾದ ಒಂದು ಕತೆ.

ಮೊದಲ ಬಾರಿ ನಾನು ದೀಕ್ಷಾ ದ್ವಿವೇದಿಯ ಜತೆ ಮಾತಾಡಿದ್ದು ಫೇಸ್‌ಬುಕ್‌ನಲ್ಲಿ. ಅವಳು ಅವಳ ತಂದೆ ಬಗ್ಗೆ ಬರೆದಿದ್ದ ಲೇಖನವನ್ನು ಓದಿದ ಬಳಿಕ ಅವಳ ಭಾವನೆಗಳನ್ನು, ನಮ್ಮ ಹಾಗೆ, ಯುದ್ಧದಲ್ಲಿ ಮಡಿದ ಸೈನಿಕರ ಕುಟುಂಬದ ಹಲವಾರು ಮಂದಿಯ ಹೃದಯದಲ್ಲಿ ಮಿಡಿಯುವ ಭಾವನೆಗಳನ್ನು-ಅಲ್ಲಿ ವ್ಯಕ್ತಪಡಿಸಿದ್ದಕ್ಕಾಗಿ ಅವಳಿಗೆ ಕೃತಜ್ಞತೆ ಸಲ್ಲಿಸಿ ನಾನು ಒಂದು ದೀರ್ಘವಾದ ಸಂದೇಶ (ಮೆಸೇಜ್)ವನ್ನು ಬರೆದೆ.

ನಾವು ಪರಸ್ಪರ ಫೇಸ್‌ಬುಕ್ ಗೆಳೆಯರ ಪಟ್ಟಿಯಲ್ಲಿದ್ದಾಗ, ಮುಂದಿನ ಸಲ ನಾವು ಸರಿಯಾಗಿ ಮಾತನಾಡಿದ್ದು, ಎಲ್ಲ ನಡೆದು ಹೋದ ನಂತರ ನಾನು ವಿಪಸನ ದಿಂದ ಮರಳಿ ಬಂದ ಮೇಲೆ ‘‘ಎಲ್ಲ ಸರಿಯಾಗುತ್ತದೆ. ಚಿಂತಿಸಬೇಡ’’ ಎಂದು ಹೇಳುವ ಒಂದು ಸಂದೇಶ ನನ್ನ ಇನ್‌ಬಾಕ್ಸ್‌ನಲ್ಲಿತ್ತು. ನಾನು ವರಿಮಾಡಬಾರದು ಮತ್ತು ಅವಳು ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದಾಗ, ಅವಳ ದಿಲ್ಲಿಯ ಮನೆ ಸದಾ ನನಗೆ ತೆರೆದಿರುತ್ತದೆ ಎಂದು ಆ ಸಂದೇಶದಲ್ಲಿ ಅವಳು ಬರೆದಿದ್ದಳು.

2017ರ ಫೆಬ್ರವರಿಯಲ್ಲಿ ನಡೆದ ಘಟನೆಗಳ ಬಗ್ಗೆ ಸೇನಾ ವಲಯದೊಳಗೇ ಪರಸ್ಪರ ಒಂದಕ್ಕೊಂದು ವಿರುದ್ಧವಾದ ಅಭಿಪ್ರಾಯಗಳಿದ್ದಾಗ, ದ್ವಿವೇದಿ ಸಹೋದರಿಯರು ನ್ಯೂಸ್ ಚ್ಯಾನೆಲ್‌ಗಳಲ್ಲಿ ನನ್ನ ಪರವಾಗಿ ಮಾತನಾಡುತ್ತಿದ್ದರು. ನನಗೆ ದೀಕ್ಷಾಳ ಸಂದೇಶಗಳು ಗಾಯಕ್ಕೆ ಹಚ್ಚಿದ ಶಮನಕಾರಿ ಮುಲಾಮಿನಂತಿದ್ದವು. ಆವತ್ತು ನಾವು ಬದುಕು ಮತ್ತು ಅನುಭವಗಳ ಬಗ್ಗೆ ಮಾತನಾಡುತ್ತಲೇ ನಮ್ಮ ಸಂಭಾಷಣೆಯನ್ನು ಮುಗಿಸಿದೆವು. ಅವಳು ನನಗಿಂತ ವಯಸ್ಸಿನಲ್ಲಿ ತುಂಬ ಹಿರಿಯಳು ಮತ್ತು ಯುದ್ಧಕ್ಕೆ ಸಂಬಂಧಿಸಿದ ಅವಳ ಅನುಭವ ನನ್ನ ಅನುಭವಕ್ಕಿಂತ ತೀರ ಭಿನ್ನವಾಗಿತ್ತು. ಆದರೆ ನಮ್ಮ ಇಬ್ಬರ ಬದುಕುಗಳ ನಡುವೆ ಒಂದು ಸಂಪೂರ್ಣ ಸಮಾನವಾದ ವಿಷಯವಿತ್ತು. ಅದು ಯಾವುದೆಂದರೆ ನಾವು ಬೆಳೆಯುತ್ತ ಬೆಳೆಯುತ್ತ ನಾವು ಅನುಭವಿಸಿದ ಶೂನ್ಯತೆ. ಅವಳು ಮಾಡುತ್ತಿರುವ ಕೆಲಸದ ಬಗ್ಗೆ ಅವಳು ನನ್ನೊಡನೆ ಹೇಳಿದಾಗ ನನಗೇನೂ ಆಶ್ಚರ್ಯವಾಗಲಿಲ್ಲ. ‘ಅಕ್ಕ ಬಕ್ಕರ್’ ಹೆಸರಿನ, ಕತೆಹೇಳುವ ಒಂದು ವೆಬ್‌ಸೈಟನ್ನು ಅವಳು ಸ್ಥಾಪಿಸಿದ್ದಳು. ಹಾಗಾಗಿ, ಆಶ್ಚರ್ಯಕ್ಕೆ ಎಲ್ಲಿ ಅವಕಾಶ ಇತ್ತು?

ಪ್ರಾಮಾಣಿಕವಾಗಿ ಹೇಳುತ್ತೇನೆ-ನನಗೆ ಆರಾಮವಾಗಿ ಪುಸ್ತಕವನ್ನು ಓದಲು ಆಗಲಿಲ್ಲ. ಅಲ್ಲಿರುವ ಕತೆಗಳು ತುಂಬಾ ನಿಜ, ಆ ಬಿಂದುವಿನಲ್ಲಿ, ಅವುಗಳು ನನ್ನಲ್ಲಿ ಉಂಟುಮಾಡಿದ ಭಾವನೆಗಳನ್ನು ನಿಭಾಯಿಸಲು ನಾನು ಸಿದ್ಧಳಾಗಿರಲಿಲ್ಲ.

ನಾನು ನನ್ನದೇ ಆದ ಪುಸ್ತಕ ಬರೆಯುವುದರಲ್ಲಿ ತಲ್ಲೀನಳಾಗಿದ್ದೆ. ನಾನು ಡೆಡ್‌ಲೈನ್‌ನೊಳಗೆ ಬರೆದು ಮುಗಿಸಬೇಕಾಗಿತ್ತು. ಆವತ್ತು ನಾನು ಕೂತು ಅಳುವ ಹಾಗೆ ಇರಲಿಲ್ಲ. ನನ್ನ ಎಲ್ಲ ಬದ್ಧತೆಗಳನ್ನು ಮುಗಿಸಿದ ನಂತರ ನಾನು ಪುನಃ ‘ಲೆಟರ್ಸ್‌ ಫ್ರಂ ಕಾರ್ಗಿಲ್’ಗೆ ಮರಳಿದೆ.

ಆವತ್ತು ರಾತ್ರಿ ಆ ಪುಸ್ತಕ ಓದುತ್ತಿದ್ದಂತೆ, ಹಿಂದೆ ಎಂದೂ ಅಳದ ರೀತಿಯಲ್ಲಿ ನಾನು ಬಿಕ್ಕಿ ಬಿಕ್ಕಿ ಅತ್ತೆ. ಅಮೆರಿಕದಲ್ಲಿದ್ದ ಗುಲಾಮಗಿರಿಯ ಬಗ್ಗೆ ಟೋನಿ ಮೋರಿಗನ್ ಬರೆದ ‘ಬಿಲೌಡ್’ ಪುಸ್ತಕ ಓದಿದಾಗಲೂ ನಾನು ನನ್ನ ಭಾವನೆಗಳನ್ನು ನಿಯಂತ್ರಿಸಿಕೊಂಡಿದ್ದೆ. ಆದರೆ ದೀಕ್ಷಾಳ ಕತೆಯನ್ನೋದಿದಾಗ ಮತ್ತು ಅವಳು ನಮಗೆ ಓದಲು ತಂದಿರುವ ಹಲವು ಪತ್ರಗಳನ್ನೋದಿದಾಗ ಮಾತ್ರ ನನ್ನಿಂದ ಅಳುವನ್ನು ತಡೆದುಕೊಳ್ಳಲಾಗಲಿಲ್ಲ. ದುಃಖದ ಕಟ್ಟೆಯೊಡೆದು ನಾನು ಒಂದೇ ಸವನೆ ಅತ್ತುಬಿಟ್ಟೆ.

ದೀಕ್ಷಾ ಇನ್ನೂ ಸ್ವಲ್ಪ ಮೊದಲೇ ಈ ಪುಸ್ತಕ ಬರೆಯಬೇಕಾಗಿತ್ತು. ಯಾಕೆಂದರೆ ಹನ್ನೊಂದು ವರ್ಷದ ನನಗೆ ನಿಜವಾಗಿಯೂ ಅದರ ಅಗತ್ಯವಿತ್ತು. ಅವಳ ಈ ಎಲ್ಲ ಭಾವನೆಗಳನ್ನು, ಪುನಃ ಪುನಃ ಬದುಕಿ ಬರೆಯುವುದು ತುಂಬದ ಕಷ್ಟದ ಕೆಲಸ, ಎಷ್ಟೊಂದು ಕಷ್ಟದ ಕೆಲಸವೆಂದು ನಾನು ಕಲ್ಪಿಸಿಕೊಳ್ಳಲಾರೆ.

ಇದು, 18 ಗರವಾಲ್ ರೈಫಲ್ಸ್ ನ ಕ್ಯಾಪ್ಟನ್ ಸುಮೀತ್ ರಾ(vrc) ಬರೆದ ಒಂದು ಪತ್ರ. ಪುಸ್ತಕದಲ್ಲಿ ಈ ಪತ್ರ ಪ್ರಕಟವಾಗಿಲ್ಲ.

‘‘26 ಜೂನ್ 99

ಸಿ/3 56 ಎಪಿಒ

ಪ್ರೀತಿಯ ಅಮ್ಮಾ

ನೀನು ಮತ್ತು ಬಾಬಾ ಚೆನ್ನಾಗಿದ್ದೀರೆಂದು ಭಾವಿಸುತ್ತೇನೆ. ಆರಂಭದಲ್ಲಿ ನಮಗೆ ಸ್ವಲ್ಪ ಕಷ್ಟಕಾಲ ಇತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಇನ್ನೊಂದು ಬೆಟ್ಟಕ್ಕೆ ನಮ್ಮನ್ನು ಕಳುಹಿಸಲಾಗುತ್ತಿದೆ. ಹವೆ ಬೆಚ್ಚಗಿದೆ. ಆದರೆ ರಾತ್ರಿಗಳು ತುಂಬ ಚಳಿ. ಸಮುದ್ರಮಟ್ಟದಿಂದ 10,000ದಿಂದ 18,000 ಅಡಿಗಳಷ್ಟು ಎತ್ತರದ ಪ್ರದೇಶ ಇದು.

ಈಗ ದೇಶಾದ್ಯಂತದಿಂದ ನಮಗೆ ‘ಬೆಸ್ಟ್ ಆಫ್ ಲಕ್’ ಕಾರ್ಡ್‌ಗಳು ಬರುತ್ತಿವೆ. ‘ಮುನಿರ್ಕಾ ವಿಹಾರ’ದ ನಿವಾಸಿಗಳು ಕೂಡ ನಮಗೆ ಒಣ ಹಣ್ಣುಗಳ ಪ್ಯಾಕೆಟ್‌ಗಳನ್ನು ಕಳುಹಿಸಿಕೊಟ್ಟಿದ್ದಾರೆ. ಆದ್ದರಿಂದ ನಮ್ಮ ನೈತಿಕ ಸ್ಥೈರ್ಯ ತುಂಬ ಉನ್ನತಮಟ್ಟದಲ್ಲಿದೆ. ಬಾಕಿ ಎಲ್ಲವೂ ಇಲ್ಲಿ ಚೆನ್ನಾಗಿದೆ. ಚಿಂತೆ ಮಾಡಬೇಡಿ. ನಾನು ನನ್ನ ಬಗ್ಗೆ ಸಾಕಷ್ಟು ಜಾಗ್ರತೆಯಾಗಿ ಇದ್ದೇನೆ ಮತ್ತು ನಾನೀಗ ಅತ್ಯಂತ ಹೆಚ್ಚು ಅನುಭವಿಗಳಲ್ಲಿ ಒಬ್ಬ.

ಟೇಕ್ ಕೇರ್ ಕೂಡಲೆ ಉತ್ತರಿಸು.

                  ತುಂಬಾ ಪ್ರೀತಿಯಿಂದ ಕುಚ್ಚಿ

Writer - ಗುರ್‌ಮೆಹರ್ ಕೌರ್

contributor

Editor - ಗುರ್‌ಮೆಹರ್ ಕೌರ್

contributor

Similar News

ಜಗದಗಲ
ಜಗ ದಗಲ