ದ್ರಾವಿಡ ಮುನ್ನೇಟ್ರ ಕಳಗಂ ಪಕ್ಷ ಸ್ಥಾಪನೆ

Update: 2017-09-16 18:37 GMT

ಸೆ.17, 1949ರ ಈ ದಿನ ತಮಿಳುನಾಡು ಮತ್ತು ಪಾಂಡೀಚೇರಿಯ ವ್ಯಾಪ್ತಿ ಹೊಂದಿರುವ ಪ್ರಾದೇಶಿಕ ಪಕ್ಷ ದ್ರಾವಿಡ ಮುನ್ನೇಟ್ರ ಕಳಗಂ (ದ್ರಾವಿಡ ಪ್ರಗತಿ ಒಕ್ಕೂಟ)ಪಕ್ಷ ಸ್ಥಾಪಿಸಲ್ಪಟ್ಟಿತು. ಸಿ. ಎನ್. ಅಣ್ಣಾದೊರೈ ಈ ಪಕ್ಷದ ಸ್ಥಾಪಕ. ಭಾರತದ ಒಕ್ಕೂಟ ಪಕ್ಷಗಳಲ್ಲೊಂದಾಗ ಯುಪಿಎನ ಭಾಗವಾಗಿರುವ ಡಿಎಂಕೆಯನ್ನು ಈಗ ಕರುಣಾನಿಧಿ ಮುನ್ನಡೆಸುತ್ತಿದ್ದಾರೆ. ಈ ಪಕ್ಷದ ಚುನಾವಣೆ ಚಿಹ್ನೆ ಉದಯಿಸುತ್ತಿರುವ ಸೂರ್ಯ.

* 1598ರಲ್ಲಿ ಈ ದಿನ ಡಚ್ ನಾವಿಕರು ಮಾರಿಷಸ್ ದ್ವೀಪ ಪ್ರದೇಶವನ್ನು ಶೋಧಿಸಿದರು.

* 1789ರ ಈ ದಿನ ಖಗೋಳಶಾಸ್ತ್ರಜ್ಞ ವಿಲಿಯಮ್ ಹರ್ಷೆಲ್ ಶನಿಗ್ರಹದ ಉಪಗ್ರಹ ಮೀಮಸ್‌ನ್ನು ಕಂಡುಹಿಡಿದರು.

* 1862ರ ಈ ದಿನ ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಅಮೆರಿಕನ್ ಆಂತರಿಕ ಯುದ್ಧಗಳ ಸಮಯದಲ್ಲಿ ‘ಆ್ಯಂಟೀಟಾಮ್ ಕದನ’ದಲ್ಲಿ ಅಂದಾಜು 22,717 ಜನ ತಮ್ಮ ಪ್ರಾಣ ಕಳೆದುಕೊಂಡರು. ಹಲವು ಜನ ಗಾಯಗೊಂಡರು. ಒಂದೇ ದಿನದ ಈ ಯುದ್ಧ ಅತ್ಯಂತ ರಕ್ತಸಿಕ್ತವಾಗಿತ್ತು ಎಂದು ಇತಿಹಾಸಕಾರರು ಬಣ್ಣಿಸಿದ್ದಾರೆ.

* 1916ರಲ್ಲಿ ನೆದರ್ಲೆಂಡ್‌ನ ಆ್ಯಮಸ್ಟರ್‌ಡ್ಯಾಮ್‌ನಲ್ಲಿ 40,000 ಜನ ಮತದಾನದ ಹಕ್ಕು ಒದಗಿಸಲು ಆಗ್ರಹಿಸಿ ಧರಣಿ ನಡೆಸಿದರು.

* 1941ರ ಈ ದಿನ ಕೋಪನ್‌ಹೇಗನ್‌ನಲ್ಲಿ ಡೆನ್ಮಾರ್ಕ್ ಭೌತಶಾಸ್ತ್ರಜ್ಞ ನೀಲ್ಸ್ ಬೋರ್ ಮತ್ತು ಜರ್ಮನಿಯ ಅಣುಶಕ್ತಿ ಯೋಜನೆಯ ಮುಖ್ಯಸ್ಥ ವೆರ್ನರ್ ಹೈಸೆನ್‌ಬರ್ಗ್ ಮಧ್ಯೆ ಪರಮಾಣು ಆಯುಧಗಳ ಕುರಿತು ಮಹತ್ವದ ಮಾತುಕತೆ ನಡೆಯಿತು.

* 1982ರಲ್ಲಿ ಭಾರತ ಮತ್ತು ಸಿಲೋನ್(ಈಗಿನ ಶ್ರೀಲಂಕಾ) ತಂಡಗಳು ತಮ್ಮ ಪ್ರಥಮ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಆಡಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News