ಈ ಜ್ಯೂಸ್ ಕುಡಿದರೆ ಹೃದ್ರೋಗ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ

Update: 2017-09-18 08:21 GMT

ಇತರ ಯಾವುದೇ ಕಾಯಿಲೆಗಿಂತ ಹೃದಯಾಘಾತ ಮತ್ತು ಮಿದುಳಿನ ಆಘಾತ ಹೆಚ್ಚಿನ ಸಾವುಗಳಿಗೆ ಕಾರಣವಾಗಿವೆ. ಪ್ರತಿ ವರ್ಷ ಹೃದ್ರೋಗಗಳಿಗೆ ಹಲವಾರು ಜನರು ಬಲಿಯಾಗುತ್ತಾರೆ. ಹೃದಯಕ್ಕೆ ರಕ್ತ ಸಾಗಿಸುವ ಮತ್ತು ಹೃದಯದಿಂದ ಶರೀರದ ಇತರ ಅಂಗಗಳಿಗೆ ರಕ್ತವನ್ನು ಪೂರೈಸುವ ರಕ್ತನಾಳಗಳಲ್ಲಿ ಉಂಟಾಗುವ ತಡೆ ಇದಕ್ಕೆ ಮುಖ್ಯ ಕಾರಣವಾಗಿದೆ. ಜೀವನಶೈಲಿ ಮತ್ತು ಕೊಬ್ಬಿನಿಂದ ಕೂಡಿದ, ಸಂಸ್ಕರಿತ ಆಹಾರದ ಅತಿಯಾದ ಸೇವನೆ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಆಹಾರದಲ್ಲಿನ ಅತಿಯಾದ ಕೊಬ್ಬಿನ ಕಣಗಳು ರಕ್ತನಾಳದೊಳಗೆ ಶೇಖರಗೊಂಡು ರಕ್ತದ ಸುಗಮ ಸಂಚಾರಕ್ಕೆ ತಡೆಯನ್ನುಂಟು ಮಾಡುತ್ತವೆ. ಇದರಿಂದಾಗಿ ಹೃದಯ ಮತ್ತು ಮಿದುಳಿಗೆ ರಕ್ತದ ಪೂರೈಕೆ ಕುಂಠಿತಗೊಳ್ಳುತ್ತದೆ. ಹೀಗಾಗಿ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸಾಗಿಸುವ ರಕ್ತವು ವಿವಿಧ ಅಂಗಾಂಗಗಳಿಗೆ ಮತ್ತು ಅಂಗಾಂಶಗಳಿಗೆ ತಲುಪುವುದಿಲ್ಲ ಮತ್ತು ಇದರಿಂದಾಗಿ ಅಂಗಾಂಗಗಳಿಗೆ ತೀವ್ರ ಹಾನಿಯುಂಟಾಗುತ್ತದೆ.

ಹೃದ್ರೋಗಗಳನ್ನು ತಡೆಯಲು ರಾಮಬಾಣದಂತಹ ಸರಳ ಉಪಾಯವಿಲ್ಲಿದೆ. ಇದಕ್ಕಾಗಿ ಅಗತ್ಯ ಜ್ಯೂಸೊಂದನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾಗಿದೆ. ಇದು ಶರೀರದಲ್ಲಿಯ ನಂಜುಗಳನ್ನು ನಿವಾರಿಸುವ ಜೊತೆಗೆ ರಕ್ತನಾಳಗಳಲ್ಲಿ ಶೇಖರಗೊಂಡಿರುವ ಎಲ್ಲ ಕೊಬ್ಬನ್ನು ತೆಗೆದುಹಾಕಿ ಸ್ವಚ್ಛಗೊಳಿಸುತ್ತದೆ.

ಜ್ಯೂಸ್ ತಯಾರಿಕೆಗೆ ಅಗತ್ಯ ಸಾಮಗ್ರಿಗಳು:

ಅಜವಾನ ಗಿಡದ ಎರಡು ದಂಟುಗಳ ಸಣ್ಣ ತುಂಡುಗಳು

ಒಂದು ಕಪ್ ತಾಜಾ ಟೊಮೆಟೊ ಜ್ಯೂಸ್

ಒಂದು ಚಮಚ ಶುಂಠಿ ಚೂರುಗಳು,

1/4 ಕಪ್ ಲಿಂಬೆರಸ

ಒಂದು ಹಸಿಮೆಣಸು

1/4 ಚಮಚ ಕಾಳುಮೆಣಸು

 ಈ ಎಲ್ಲ ಸಾಮಗ್ರಿಗಳನ್ನು ಮಿಕ್ಸರ್‌ನಲ್ಲಿ ಹಾಕಿ ತಿರುಗಿಸಿದರೆ ಒಂದು ಕಪ್ ಜ್ಯೂಸ್ ದೊರೆಯುತ್ತದೆ. ನಿಮ್ಮ ಊಟಗಳ ನಡುವೆ ಈ ರಸವನ್ನು ಸೇವಿಸುತ್ತಿದ್ದರೆ ರಕ್ತನಾಳಗಳಲ್ಲಿಯ ಎಲ್ಲ ತಡೆಗಳು ನಿವಾರಣೆಯಾಗುತ್ತವೆ. ಆದರೆ ಈ ರಸವನ್ನು ಅತಿಯಾಗಿ ಸೇವಿಸಬಾರದು. ಹೆಚ್ಚೆಂದರೆ ದಿನಕ್ಕೆ ಮೂರು ಕಪ್ ಸೇವಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News