ರುಚಿರುಚಿಯಾದ ‘ಲಸೂನಿ ಝಿಂಗಾ’ ಸವಿದು ನೋಡಿ

Update: 2017-09-19 10:24 GMT

ಯಾವುದೇ ರೆಸ್ಟೋರಂಟ್‌ನಲ್ಲಿ ಸೀಫುಡ್ ಮೆನುವಿನಲ್ಲಿ ಲಸೂನಿ ಝಿಂಗಾ ಅತ್ಯಂತ ಜನಪ್ರಿಯ ಖಾದ್ಯವಾಗಿದೆ. ಇದನ್ನು ಇಷ್ಟ ಪಡದವರು ಇಲ್ಲವೇ ಇಲ್ಲ ಎಂದು ಹೇಳಬಹುದು. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.

ತಯಾರಿಸಲು ಬೇಕಾಗುವ ಸಮಯ:ಮೂರು ಗಂಟೆಗಳು

ಅಗತ್ಯ ಸಾಮಗ್ರಿಗಳು(ನಾಲ್ಕು ಜನರಿಗೆ ಸಾಲುವಷ್ಟು)

ಟೈಗರ್ ಸಿಗಡಿ 6

ಮೊಸರು ಅರ್ಧ ಕಪ್

ಗರಂ ಮಸಾಲಾ ಎರಡು ಚಮಚ

ಬೆಳ್ಳುಳ್ಳಿ ಪೇಸ್ಟ್ 4-5 ಚಮಚ

ಚಾಟ್ ಮಸಾಲಾ ರುಚಿಗೆ ತಕ್ಕಷ್ಟು

ಗೋಡಂಬಿ ಪೇಸ್ಟ್ 4-5 ಚಮಚ

ಸಾಸಿವೆ ಎಣ್ಣೆ ಅರ್ಧ ಕಪ್ ಮೆಣಸಿನ ಹುಡಿ ಅಗತ್ಯಕ್ಕೆ ತಕ್ಕಂತೆ

ಉಪ್ಪು ರುಚಿಗೆ ತಕ್ಕಷ್ಟು

ತಯಾರಿಕೆಯ ವಿಧಾನ

ಟೈಗರ್ ಸಿಗಡಿಗಳನ್ನು ಸ್ವಚ್ಛ ಮಾಡಿಕೊಳ್ಳಿ.

ಬೌಲ್‌ನಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಸಾಸಿವೆ ಎಣ್ಣೆ , ಚಾಟ್ ಮಸಾಲಾ, ಗೋಡಂಬಿ ಪೇಸ್ಟ್ ಹಾಕಿ ಹುರಿಯಿರಿ. ಬಳಿಕ ಸಿಗಡಿಗಳನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಸುಮಾರು 30 ಸೆಕೆಂಡ್‌ಗಳ ಕಾಲ ಕಾಯಿಸಿ. ಈಗ ಸಿಗಡಿಗಳನ್ನು ಗರಂ ಮಸಾಲಾದೊಂದಿಗೆ ಮ್ಯಾರಿನೇಟ್ ಮಾಡಿ ಬಳಿಕ ಒಂದು ಗಂಟೆ ಫ್ರಿಡ್ಝ್‌ನಲ್ಲಿಡಿ.

ಈಗ ಉಳಿದ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಮತ್ತು ಮೆಣಸಿನ ಹುಡಿಯನ್ನು ಮೊಸರಿನೊಂದಿಗೆ ಬೆರೆಸಿ. ಫ್ರಿಡ್ಝ್‌ನಿಂದ ಸಿಗಡಿಗಳನ್ನು ಹೊರಗೆ ತೆಗೆದು ಅವುಗಳಿಗೆ ಈ ಮಿಶ್ರಣವನ್ನು ಲೇಪಿಸಿ. ಸಿಗಡಿಗಳನ್ನು ಮತ್ತೆ ಫ್ರಿಡ್ಝ್‌ನಲ್ಲಿ ಒಂದು ಗಂಟೆ ಇಡಿ.

ತನ್ಮಧ್ಯೆ ತಂದೂರ್ ಅಥವಾ ಓವೆನ್‌ನ್ನು 200 ಡಿ.ಸೆ.ನಲ್ಲಿ ಬಿಸಿ ಮಾಡಿಕೊಳ್ಳಿ. ಸಿಗಡಿಗಳನ್ನು ಬೇಯಿಸಿ ಸುಮಾರು 10-15 ನಿಮಿಷಗಳ ಕಾಲ ಗ್ರಿಲ್ ಮಾಡಿ.

ಈಗ ಕೊತ್ತಂಬರಿ ಸೊಪ್ಪಿನಿಂದ ಲಸೂನಿ ಝಿಂಗಾವನ್ನು ಅಲಂಕರಿಸಿ ಹಸಿರು ಚಟ್ನಿ ಮತ್ತು ಲಿಂಬೆ ತುಂಡಿನೊಂದಿಗೆ ಉಣಬಡಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News