×
Ad

ಟ್ರಂಪ್ ಮಾತುಗಳು ಅಸ್ವೀಕಾರಾರ್ಹ: ಕ್ಯೂಬ

Update: 2017-09-20 23:28 IST

ಹವಾನ (ಕ್ಯೂಬ), ಸೆ. 20: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಯೂಬದ ಬಗ್ಗೆ ಇತ್ತೀಚೆಗೆ ನೀಡಿರುವ ಹೇಳಿಕೆಗಳು ‘ಅವಮಾನಕರ, ಅಸ್ವೀಕಾರಾರ್ಹ ಮತ್ತು ಹಸ್ತಕ್ಷೇಪಕಾರಿ’ ಎಂದು ಕ್ಯೂಬ ಹೇಳಿದೆ. ಅದೇ ವೇಳೆ, ಹವಾನದಲ್ಲಿನ ಅಮೆರಿಕನ್ ರಾಜತಾಂತ್ರಿಕರಿಗೆ ಹಾನಿಯನ್ನುಂಟು ಮಾಡಿದ ಘಟನೆಗಳಲ್ಲಿ ತಾನು ಶಾಮೀಲಾಗಿಲ್ಲ ಎಂದಿದೆ.

ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಲು ವಾಶಿಂಗ್ಟನ್‌ನಲ್ಲಿ ಅಮೆರಿಕ ಮತ್ತು ಕ್ಯೂಬದ ನಿಯೋಗಗಳು ಭೇಟಿಯಾದ ಬಳಿಕ ಕ್ಯೂಬ ವಿದೇಶ ಸಚಿವಾಲಯ ಈ ಕಟು ಹೇಳಿಕೆಯನ್ನು ಹೊರಡಿಸಿದೆ.

ಟ್ರಂಪ್ ಜನವರಿಯಲ್ಲಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಈ ಎರಡು ದೇಶಗಳ ನಡುವೆ ನಡೆದ ಮೊದಲ ಉನ್ನತ ಮಟ್ಟದ ಸಭೆ ಇದಾಗಿದೆ.

ಅದೇ ದಿನ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾತನಾಡಿದ ಟ್ರಂಪ್, ಕ್ಯೂಬವನ್ನು ‘ಭ್ರಷ್ಟ ಮತ್ತು ಅಸ್ಥಿರಕಾರಕ ದೇಶ’ ಎಂಬುದಾಗಿ ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News