ಭಾರತದಲ್ಲಿ ಶಿಶು ಮರಣ ದರದಲ್ಲಿ ಇಳಿಕೆ: ಅಧ್ಯಯನ ವರದಿ

Update: 2017-09-20 18:02 GMT

ಟೊರಾಂಟೊ (ಕೆನಡ), ಸೆ. 20: ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾವಿನ ದರದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, 2005ರ ಬಳಿಕ ಭಾರತದಲ್ಲಿ ಸುಮಾರು 10 ಲಕ್ಷ ಮಕ್ಕಳು ಸಾವಿನ ದವಡೆಯಿಂದ ಪಾರಾಗಿದ್ದಾರೆ ಎಂದು ಪ್ರತಿಷ್ಠಿತ ಪತ್ರಿಕೆ ‘ಲ್ಯಾನ್ಸೆಟ್’ನಲ್ಲಿ ಪ್ರಕಟಗೊಂಡ ನೂತನ ಅಧ್ಯಯನವೊಂದು ತಿಳಿಸಿದೆ.

ಜಾಗತಿಕ ಆರೋಗ್ಯ ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿರುವ ಪ್ರಭಾತ್ ಝಾ ನೇತೃತ್ವದ ಸಂಶೋಧನಾ ತಂಡ ಭಾರತವನ್ನು ಗುರಿಯಾಗಿಸಿ ನಡೆಸಿದ ಸಂಶೋಧನೆಯಲ್ಲಿ ಈ ಅಂಶ ಹೊರಬಿದ್ದಿದೆ.

ಒಂದು ತಿಂಗಳಗಿಂತ ಕಡಿಮೆ ಪ್ರಾಯದ ಶಿಶುಗಳ ಮರಣ ದರದಲ್ಲಿ 3.3 ಶೇಕಡ ಇಳಿಕೆಯಾಗಿದೆ ಹಾಗೂ ಒಂದು ಮತ್ತು 59 ತಿಂಗಳ ನಡುವಿನ ಮಕ್ಕಳ ಮರಣ ದರದಲ್ಲಿ 5.4 ಶೇಕಡ ಇಳಿಕೆಯಾಗಿದೆ ಎಂದು ಅಧ್ಯಯನ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News