‘ಫೋರ್ಬ್ಸ್’ನ ಶ್ರೇಷ್ಠ ಉದ್ಯಮಿಗಳ ಪಟ್ಟಿಯಲ್ಲಿರುವ ಮೂವರು ಭಾರತೀಯರು ಯಾರು ಗೊತ್ತೇ?

Update: 2017-09-20 18:30 GMT

ನ್ಯೂಯಾರ್ಕ್, ಸೆ. 20: ಜಗತ್ತಿನಲ್ಲಿರುವ 100 ಶ್ರೇಷ್ಠ ಉದ್ಯಮಿಗಳ ‘ಫೋರ್ಬ್ಸ್’ನ ವಿಶೇಷ ಪಟ್ಟಿಯಲ್ಲಿ ಮೂವರು ಭಾರತೀಯ ವಾಣಿಜ್ಯ ದಿಗ್ಗಜರಾದ ಲಕ್ಷ್ಮಿ ಮಿತ್ತಲ್, ರತನ್ ಟಾಟಾ ಮತ್ತು ವಿನೋದ್ ಖೋಸ್ಲ ಸ್ಥಾನ ಪಡೆದಿದ್ದಾರೆ.

ಲಕ್ಷ್ಮಿ ಮಿತ್ತಲ್ ಏರ್ಸಲರ್‌ ಮಿತ್ತಲ್ ಕಂಪೆನಿಯ ಅಧ್ಯಕ್ಷ ಮತ್ತು ಸಿಇಒ, ರತನ್ ಟಾಟಾ ಟಾಟಾ ಸಮೂಹದ ಚೇರ್ಮನ್ ಎಮರಿಟಸ್ ಮತ್ತು ವಿನೋದ್ ಖೋಸ್ಲ ಸನ್ ಮೈಕ್ರೋಸಿಸ್ಟಮ್ಸ್‌ನ ಸಹಸಂಸ್ಥಾಪಕರಾಗಿದ್ದಾರೆ.

ಪಟ್ಟಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇದ್ದಾರೆ. ಅವರನ್ನು ಟ್ರಂಪ್ ಆರ್ಗನೈಸೇಶನ್‌ನ ಮಾಲಕರು ಮತ್ತು ಅಮೆರಿಕದ 45ನೆ ಅಧ್ಯಕ್ಷರು ಎಂಬುದಾಗಿ ’ಫೋರ್ಬ್ಸ್ ಬಣ್ಣಿಸಿದೆ.

ಅಮೆಝಾನ್ ಸ್ಥಾಪಕ ಜೆಫ್ ಬೆಝಾಸ್, ವರ್ಜಿನ್ ಗ್ರೂಪ್ ಸ್ಥಾಪಕ ರಿಚರ್ಡ್ ಬ್ರಾನ್ಸನ್, ಬರ್ಕ್‌ಶಯರ್ ಹ್ಯಾತ್‌ಅವೇ ಸಿಇಒ ವಾರನ್ ಬಫೆಟ್, ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ನ್ಯೂಸ್ ಕಾರ್ಪ್ ಕಾರ್ಯಕಾರಿ ಅಧ್ಯಕ್ಷ ರೂಪರ್ಟ್ ಮರ್ಡೋಕ್ ಪಟ್ಟಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News