ಅಹ್ಮದ್‌ನಗರ ಅಣೆಕಟ್ಟು ಕುಸಿತ: ಅರಂಗಾನ್ ಗ್ರಾಮ ಜಲಾವೃತ

Update: 2017-09-21 14:49 GMT

 ಅಹ್ಮದ್‌ನಗರ, ಸೆ.21: ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಬುಧವಾರ ಅಣೆಕಟ್ಟು ಕುಸಿದುಬಿದ್ದ ಪರಿಣಾಮ ಅರಂಗಾನ್ ಗ್ರಾಮ ಜಲಾವೃತಗೊಂಡಿದ್ದು 50 ಕುಟುಂಬಗಳು ನೆರೆನೀರಿನಲ್ಲಿ ಸಿಲುಕಿಕೊಂಡಿವೆ.

     ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸ್ಥಳಕ್ಕೆ ಧಾವಿಸಿದ್ದು ಸುಮಾರು 150 ಜನರನ್ನು ರಕ್ಷಿಸಲಾಗಿದೆ. ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದ ಪರಿಹಾರ ಕಾರ್ಯಾಚರಣೆಗೆ ತೊಂದರೆಯಾಗಿದೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಪಿಂಪಲ್ಡೋಹ್ ಜಲಾಶಯದ ಕಟ್ಟೆ ಒಡೆದು ಅರಂಗಾನ್ ಗ್ರಾಮ ಜಲಾವೃತಗೊಂಡಿತ್ತು. ಈ ಪ್ರದೇಶದಲ್ಲಿ ಕಳೆದ 48 ಗಂಟೆಗಳಿಂದ ನಿರಂತರ ಮಳೆ ಸುರಿಯುತ್ತಿದ್ದು ಏಕಾಏಕಿ ನೀರು ನುಗ್ಗಿ ಅಣೆಕಟ್ಟೆಯ ಗೋಡೆ ಬಿರುಕು ಬಿಟ್ಟ ಕಾರಣ ಅಣೆಕಟ್ಟು ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News