ತ್ರಿಪುರ ಪತ್ರಕರ್ತನ ಹತ್ಯೆ: ಇಬ್ಬರ ಬಂಧನ
Update: 2017-09-21 20:37 IST
ಅಗರ್ತಲ, ಸೆ. 21: ವಿರೋಧಿ ಬುಡಕಟ್ಟು ಗುಂಪುಗಳ ನಡುವೆ ನಡೆದ ಸಂಘರ್ಷದ ಸಂದರ್ಭ ಟಿ.ವಿ. ವರದಿಗಾರ ಶಂತನು ಭೌಮಿಕ್ ಅವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ತ್ರಿಪುರಾ ಪೊಲೀಸರು ಇಬ್ಬರನ್ನು ಬುಧವಾರ ಬಂಧಿಸಿದ್ದಾರೆ.
ಭೌಮಿಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶ್ಯಾಮಲ್ ದೆಬ್ಬಾರ್ಮಾ ಹಾಗೂ ಬಿಕಾಶ್ ದೆಬ್ಬಾರ್ಮಾ ಅವರನ್ನು ಮಾಂಡ್ವಾಯಿಯಿಂದ ಬಂಧಿಸಿದ್ದೇವೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತ್ರಿಪುರ ಪಶ್ಚಿಮ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.