ಎನ್‌ಎಚ್‌ಆರ್‌ಸಿ ಮಾನವೀಯ ನೆಲೆಯಲ್ಲಿ ರೊಹಿಂಗ್ಯಾ ವಿಷಯ ಕೈಗೆತ್ತಿಕೊಂಡಿದೆ: ನ್ಯಾ.ದತ್ತು

Update: 2017-09-21 15:13 GMT

ಹೊಸದಿಲ್ಲಿ,ಸೆ.21: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ)ವು ಮಾನವೀಯ ನೆಲೆಯಲ್ಲಿ ರೊಹಿಂಗ್ಯಾ ವಿಷಯವನ್ನು ಕೈಗೆತ್ತಿಕೊಂಡಿದೆ ಎಂದು ಗುರುವಾರ ಇಲ್ಲಿ ತಿಳಿಸಿದ ಆಯೋಗದ ಅಧ್ಯಕ್ಷ ನ್ಯಾ.(ನಿವೃತ್ತ) ಎಚ್.ಎಲ್.ದತ್ತು ಅವರು, ರೊಹಿಂಗ್ಯಾಗಳು ಅಕ್ರಮ ವಲಸಿಗರಾಗಿದ್ದು, ಅವರನ್ನು ಗಡಿಪಾರು ಮಾಡಲಾಗುವುದು ಎಂಬ ಸರಕಾರದ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಅವರು ಎನ್‌ಎಚ್‌ಆರ್‌ಸಿ ಆಯೋಜಿಸಿದ್ದ ವಿಚಾರ ಸಂಕಿರಣವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ರೊಹಿಂಗ್ಯಾಗಳು ಅಕ್ರಮ ವಲಸಿಗರಾಗಿದ್ದಾರೆ. ಅವರು ನಿರಾಶ್ರಿತರಲ್ಲ. ಅವರನ್ನು ಗಡಿಪಾರು ಮಾಡಲಾಗುವುದು ಎಂದು ಗೃಹಸಚಿವ ರಾಜನಾಥ ಸಿಂಗ್ ಅವರು ವಿಚಾರ ಸಂಕಿರಣದಲ್ಲಿ ಹೇಳಿದ ಬೆನ್ನಿಗೇ ನ್ಯಾ.ದತ್ತು ಅವರು ಈ ಹೇಳಿಕೆ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News