ನ್ಯಾಯಾಂಗ, ಸಾಮಾಜಿಕ ವ್ಯವಸ್ಥೆಯ ಹುಳುಕಿನಿಂದಾಗಿಯೇ ಉಲ್ಬಣಿಸಿದ ಹಿಂಸಾ ಪ್ರವೃತ್ತಿ

Update: 2017-09-21 18:21 GMT

ಜಗತ್ತಿನಾದ್ಯಂತ ಅಪರಾಧ ಪ್ರಮಾಣಗಳಲ್ಲಿ ಏರಿಕೆಯಾಗಿದ್ದಲ್ಲಿ ಅದಕ್ಕೆ ಕಾರಣವಾದ ಪ್ರಮುಖ ಮೂರು ಅಂಶಗಳೆಂದರೆ ಆಧುನಿಕ ನ್ಯಾಯಾಂಗ ವ್ಯವಸ್ಥೆಯ ಸಂಪೂರ್ಣ ವೈಫಲ್ಯ, ಲೈಂಗಿಕವಾಗಿ ಪ್ರಚೋದನಕಾರಿಯಾದ ವಾತಾವರಣಕ್ಕೆ ಉತ್ತೇಜನ ನೀಡುವ ಸಾಮಾಜಿಕ ವ್ಯವಸ್ಥೆ ಹಾಗೂ ಎಲ್ಲಾ ರೀತಿಯ ದುರ್ವ್ಯಸನಗಳು. ನಮ್ಮನ್ನು ಆಳುವವರು ಜನತೆಯ ಆರೋಗ್ಯ ಹಾಗೂ ಸುರಕ್ಷತೆಗಿಂತ ತಮ್ಮ ಆರ್ಥಿಕ ಹಾಗೂ ರಾಜಕೀಯ ಯಜಮಾನಿಕೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

 ಇತ್ತೀಚಿನ ತಿಂಗಳುಗಳಲ್ಲಿ ದಿನಂಪ್ರತಿ ವರದಿಯಾಗುತ್ತಿರುವ ಸುದ್ದಿಗಳು ವಾಕರಿಕೆ ಹುಟ್ಟಿಸುವಂತಿವೆ. ಹಿಂಸೆ, ದ್ವೇಷ ಹಾಗೂ ಅತ್ಯಾಚಾರ ಇವನ್ನು ಬಿಟ್ಟರೆ ಬೇರ್ಯಾವುದೇ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿಲ್ಲ. ಮೊದಲಿಗೆ, ಗೋರಕ್ಷಣೆಯ ಹೆಸರಿನಲ್ಲಿ ನಡೆದ ಹಿಂಸಾಚಾರದ ಘಟನೆಗಳು. ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ‘ಗೋಮಾತೆ’ಗೆ ಯಾವುದೇ ರೀತಿಯಲ್ಲಿ ಅಪಮಾನವುಂಟು ಮಾಡುವಂತಹ ಕೃತ್ಯದಲ್ಲಿ ತೊಡಗಿದ್ದಾರೆಂಬ ಎಳ್ಳಷ್ಟು ಸಂಶಯ ಬಂದರೂ ಸಾಕು, ಅವರನ್ನು ಕೊಂದೇ ಬಿಡಲು ಗೋರಕ್ಷಕರು ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳುವ ಮೂಲಕ ಗೋಮಾತೆಗೆ ಗೌರವ ಸಲ್ಲಿಸುವುದರಲ್ಲಿ ಮಗ್ನರಾಗಿದ್ದಾರೆ. ಆನಂತರ ದೇವಮಾನವ ರಾಮ್‌ರಹೀಮ್ ನಡೆಸಿದ್ದನೆನ್ನಲಾದ ಅತ್ಯಾಚಾರ ಹಾಗೂ ಕೊಲೆಗಳ ಕೊನೆಯಿಲ್ಲದ ಕಥೆಗಳು ಚಾನೆಲ್‌ಗಳಲ್ಲಿ ರಾರಾಜಿಸಿದವು. ಕಾನೂನು ಅನುಷ್ಠಾನ ಸಂಸ್ಥೆಗಳನ್ನು ಲೆಕ್ಕಿಸದೆ ‘ದೇವಮಾನವ’ನು ತನ್ನ ‘ಸಾಧ್ವಿ’ಗಳನ್ನು ಅತ್ಯಾಚಾರ ನಡೆಸಿದ ಹಾಗೂ ‘ವಿಶ್ವಾಸದ್ರೋಹಿ’ಗಳನ್ನು ಕೊಲೆ ಮಾಡಲು ತನಗಿರುವ ‘ವಿಶೇಷ ಶಕಿ’್ತಗಳನ್ನು ಹೇಗೆ ಬಳಸಿಕೊಂಡನೆಂಬ ಬಗ್ಗೆ ಅತ್ಯಂತ ಭಯಾನಕವಾದ ವಿವರಣೆಗಳನ್ನು ನೀಡುವುದರಲ್ಲೇ ಚಾನೆಲ್‌ಗಳು ಬ್ಯುಸಿಯಾಗಿದ್ದವು. ಲೌಕಿಕವಾದ ನ್ಯಾಯಾಲಯವೊಂದು ‘ದೇವಮಾನವ’ನ ವಿರುದ್ಧ ನೀಡಿದ ತೀರ್ಪನ್ನು ಸಹಿಸದ ಅವನ ಅನುಯಾಯಿಗಳು ಸಾವಿನ ಆಟದಲ್ಲಿ ತೊಡಗಿದ್ದರಿಂದ 20ಕ್ಕೂ ಅಧಿಕ ಮಂದಿ ‘ಹುತಾತ್ಮ’ರಾದರು. ಆನಂತರ ನಡೆದ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆಯು ಇಡೀ ದೇಶವನ್ನೇ ದಿಗ್ಭ್ರಾಂತಗೊಳಿಸಿತು. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಡ ಹಾಗೂ ಬಲಪಂಥೀಯರೆಂಬ ಎರಡು ತೀವ್ರವಾದಿ ಸಿದ್ಧ್ದಾಂತಗಳ ನಡುವೆ ಆರೋಪಗಳು ಹಾಗೂ ಪ್ರತ್ಯಾರೋಪಗಳು ವಿನಿಮಯಗೊಳ್ಳುತ್ತಲೇ ಇವೆ. ಈ ಘಟನೆೆ ಇನ್ನೂ ಹಸಿಯಾಗಿರುವಾಗಲೇ ಗುರುಗ್ರಾಮದಲ್ಲಿ ಶಾಲಾ ಬಾಲಕನ ಕೊಲೆ ಹಾಗೂ ದಿಲ್ಲಿಯಲ್ಲಿ ಶಾಲಾಬಾಲಕಿಯೊಬ್ಬಳ ಅತ್ಯಾಚಾರ ಪ್ರಕರಣಗಳು ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿತು. ಈಗ ಮಾಧ್ಯಮಗಳು ಕಳೆದ ಕೆಲವು ದಿನಗಳಿಂದ ರ್ಯಾನ್ ಶಾಲೆಯ ಬೇಟೆಯಾಡುತ್ತಿವೆ ಹಾಗೂ ಮಗುವಿನ ಬರ್ಬರ ಕೊಲೆಗೆ ಅದನ್ನು ಹೊಣೆಗಾರನನ್ನಾಗಿ ಮಾಡುತ್ತಿವೆ. ಶಾಲೆಯ ಕಡೆಯಿಂದ ಆದ ಪ್ರತಿಯೊಂದು ಲೋಪಗಳು ಹಾಗೂ ಶಾಲೆಯನ್ನು ನಡೆಸುತ್ತಿರುವ ಪಿಂಟೋ ಕುಟುಂಬದ ‘ಅಕ್ರಮ’ ವ್ಯವಹಾರಗಳ ಬಗ್ಗೆ ಇಂಚಿಂಚೂ ಬಿಡದೆ ಚರ್ಚಿಸುತ್ತಿವೆ. ಆದರೆ ಇತಹ ಚರ್ಚೆಗಳಲ್ಲಿ ಕೊಲೆ ಹಾಗೂ ಅತ್ಯಾಚಾರದ ಘಟನೆಗಳು ವ್ಯಾಪಕವಾಗುವುದಕ್ಕೆ ಪೂರಕವಾಗುವಂತಹ ವಾತಾವರಣ ಸೃಷ್ಟಿಯಾಗಲು ಪ್ರಾಥಮಿಕವಾಗಿ ಹೊಣೆಯಾಗಿರುವ ಕಾನೂನು ಹಾಗೂ ಸಾಮಾಜಿಕ ವ್ಯವಸ್ಥೆಯ ಕುರಿತಾದ ಯಾವುದೇ ಟೀಕೆ ಅಥವಾ ಅಭಿಪ್ರಾಯಗಳು ನಾಪತ್ತೆಯಾಗಿವೆ.

 ಪ್ರಸಕ್ತ ಸಾಮಾಜಿಕ ಹಾಗೂ ಕಾನೂನು ವ್ಯವಸ್ಥೆಯನ್ನು ಸೃಷ್ಟಿಸಿರುವ ಮತ್ತು ಅದನ್ನು ಉಳಿಸಿಕೊಂಡಿರುವವವರು ಇಂತಹ ಘಟನೆಗಳಿಗೆ ಕಾರಣರಾದ ವ್ಯಕ್ತಿಗಳನ್ನು ದೂರುವುದರಲ್ಲಿ ಮಾತ್ರವೇ ಮಗ್ನರಾಗಿರುತ್ತಾರೆ. ಹಿಂಸಾಚಾರ, ಲೈಂಗಿಕ ಹಲ್ಲೆ ಇತ್ಯಾದಿ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟುವ ವಿಷಯಕ್ಕೆ ಬಂದಾಗ ನಮ್ಮ ವ್ಯವಸ್ಥೆಗೆ ಗರಬಡಿದಿರುವ ಬಗ್ಗೆ ಅವರು ಯಾವತ್ತೂ ಚರ್ಚಿಸುವುದಿಲ್ಲ. ಒಂದು ವೇಳೆ ಜಗತ್ತಿನಾದ್ಯಂತ ಅಪರಾಧ ಪ್ರಮಾಣಗಳಲ್ಲಿ ಏರಿಕೆಯಾಗಿದ್ದಲ್ಲಿ ಅದಕ್ಕೆ ಕಾರಣವಾದ ಪ್ರಮುಖ ಮೂರು ಅಂಶಗಳೆಂದರೆ ಆಧುನಿಕ ನ್ಯಾಯಾಂಗ ವ್ಯವಸ್ಥೆಯ ಸಂಪೂರ್ಣ ವೈಫಲ್ಯ, ಲೈಂಗಿಕವಾಗಿ ಪ್ರಚೋದನಕಾರಿಯಾದ ವಾತಾವರಣಕ್ಕೆ ಉತ್ತೇಜನ ನೀಡುವ ಸಾಮಾಜಿಕ ವ್ಯವಸ್ಥೆ ಹಾಗೂ ಎಲ್ಲಾ ರೀತಿಯ ದುರ್ವ್ಯಸನಗಳು. ಹೀಗೆೆ ನಮ್ಮನ್ನು ಆಳುವವರು ಜನತೆಯ ಆರೋಗ್ಯ ಹಾಗೂ ಸುರಕ್ಷತೆಗಿಂತ ತಮ್ಮ ಆರ್ಥಿಕ ಹಾಗೂ ರಾಜಕೀಯ ಯಜಮಾನಿಕೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

 ಇದರ ಪರಿಣಾಮವೇ ಹೆಚ್ಚು ‘ಪ್ರಗತಿ’ ಸಾಧಿಸಿದ ರಾಷ್ಟ್ರವೆಂಬ ಹೆಗ್ಗಳಿಕೆ ಹೊತ್ತ ಭಾರತವು ಕೊಲೆಪಾತಕ ದಾಳಿಗಳು, ಲೈಂಗಿಕ ದೌರ್ಜನ್ಯಗಳು ಹಾಗೂ ಆತ್ಮಹತ್ಯೆ ಪ್ರಮಾಣದಲ್ಲಿಯೂ ಮುನ್ನಡೆಯಲ್ಲಿದೆ. ಭಾರತವು ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಗುಂಪಿಗೆ ಸೇರ್ಪಡೆಯಾಗುವ ಸ್ಪರ್ಧೆಯಲ್ಲಿರು ವಾಗ, ಅಪರಾಧ ಹಾಗೂ ಅತ್ಯಾಚಾರ ಪ್ರಮಾಣದಲ್ಲಿಯೂ ಅದು ಯಾಕೆ ಹಿಂದುಳಿಯಬೇಕು?.

  ಭಾರತದಲ್ಲಿ ಕೊಲೆ ಕೃತ್ಯಗಳ ಪ್ರಮಾಣವು ಶೇ.7.39ರಷ್ಟು ಹೆಚ್ಚಳವಾಗಿದೆ (1953ರಲ್ಲಿ 2.61 ದರದಲ್ಲಿ 9803ರಷ್ಟು ಕೊಲೆ ಪ್ರಕರಣಗಳು ವರದಿಯಾಗಿದ್ದು, 2006ರ ವೇಳೆಗೆ ಅದು 2.81 ದರದಲ್ಲಿ 1 ಲಕ್ಷಕ್ಕೇರಿತ್ತು).

ಇತ್ತೀಚೆಗೆ ನಾನು ಕುತೂಹಲಕಾರಿ ಲೇಖನವೊಂದನ್ನು ಓದಿದ್ದೆೆ. ಕಳೆದ ಹಲವಾರು ವರ್ಷಗಳಿಂದ ನಾನು ಬೆಳಕು ಚೆಲ್ಲಲು ಯತ್ನಿಸುತ್ತಿದ್ದ ವಿಷಯವನ್ನೇ ಅದು ಪ್ರತಿಪಾದಿಸುತ್ತಿತ್ತು. ‘‘ಭಾರತವನ್ನು ನಿಜಕ್ಕೂ ಅಪಾಯಕಾರಿ ರಾಷ್ಟ್ರವನ್ನಾಗಿ ಮಾಡಿರುವುದು, ಕೊಲೆಗಳೇ ಹೊರತು ಭಯೋತ್ಪಾದನೆಯಲ್ಲ’’ ಎಂಬುದಾಗಿ ಶೋಭಾ ಸಕ್ಸೇನಾ ಬರೆದಿರುವ ಈ ಲೇಖನವು ಹೇಳಿದೆ.

 2012ರಲ್ಲಿ ಭಾರತದಲ್ಲಿ ಸುಮಾರು 252 ನಾಗರಿಕರು, ಭಯೋತ್ಪಾದನೆ ಹಾಗೂ ಬಂಡುಕೋರ ಚಟುವಟಿಕೆಗಳಿಗೆ ಸಂಬಂಧಿಸಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಆ ವರ್ಷವೇ, 43,335 ಮಂದಿ ಕ್ರಿಮಿನಲ್‌ಗಳಿಂದ ಅಥವಾ ತಮಗೆ ಪರಿಚಿತರಾಗಿರುವ ಸಾಮಾನ್ಯಜನರಿಂದ ಕೊಲೆಯಾಗಿದ್ದಾರೆ. ಕೊಲೆಯಾದ ವ್ಯಕ್ತಿಗಳ ಸಂಖ್ಯೆಯು ಭಯೋತ್ಪಾದಕ ದಾಳಿಗಳಿಂದ ಸಾವನ್ನಪ್ಪಿರುವವರ ಸಂಖ್ಯೆಗಿಂತ 170 ಪಟ್ಟು ಅಧಿಕವಾಗಿದೆ. ಈ ವರ್ಷವೂ ಅದಕ್ಕೆ ಹೊರತಲ್ಲ. 2000ನೇ ಇಸವಿಯಿಂದಲೂ ಇದೇ ಪ್ರವೃತ್ತಿ ಮುಂದುವರಿದಿದೆ. ಅತ್ಯಧಿಕವಾಗಿ ಉದ್ದೇಶಪೂರ್ವಕ ಕೊಲೆಗಳು ನಡೆಯುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಜಗತ್ತಿಲ್ಲೇ ದ್ವಿತೀಯ ಸ್ಥಾನದಲ್ಲಿದೆ. 2012ರಲ್ಲಿ 58 ಸಾವಿರ ಕೊಲೆ ಪ್ರಕರಣಗಳು ವರದಿಯಾಗಿರುವ ಬ್ರೆಝಿಲ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ.

ಎಲ್ಲಾ ಮಾಧ್ಯಮಗಳಲ್ಲಿಯೂ ಅವುಗಳ ಸುದ್ದಿಕವರೇಜ್‌ನಲ್ಲಿ ಹಾಗೂ ಸಾರ್ವಜನಿಕ ಚರ್ಚೆಗಳಲ್ಲಿ ಭಯೋತ್ಪಾದನೆ ವಿಷಯವು ಪ್ರಾಮುಖ್ಯತೆಯನ್ನು ಪಡೆದು ಕೊಂಡಿದೆಯಾದರೂ, ವಿಶ್ವದಾದ್ಯಂತದ ಕೊಲೆ ಪ್ರಕರಣಗಳ ಮೇಲೆ ನಿಗಾವಿರಿಸುವ ಬ್ರೆಝಿಲ್‌ನ ಚಿಂತನಚಿಲುಮೆ ಇಗಾರ್ಪೆ ಸಿದ್ಧಪಡಿಸಿರುವ ‘ಮರ್ಡರ್ ಮ್ಯಾಪ್’ ಪ್ರಕಾರ ಭಾರತದಲ್ಲಿ ವ್ಯಕ್ತಿಯೊಬ್ಬನು ವೈಯಕ್ತಿಕ ದ್ವೇಷಕ್ಕೆ ಬಲಿಪಶುವಾಗುವ ಸಾಧ್ಯತೆ ಆತ ಭಯೋತ್ಪಾದನೆಗೆ ಬಲಿಯಾಗುವುದಕ್ಕಿಂತ ತುಂಬಾ ಅಧಿಕವಾಗಿದೆ.

ಜನರು ಕೊಲೆಯಾಗುವ ಸಾಧ್ಯತೆ ಹೆಚ್ಚು ಅಧಿಕವಾಗಿರುವ ದೇಶಗಳನ್ನು ಗುರುತಿಸಿರುವ ಈ ನಕ್ಷೆಯು ಭಾರತವು ಅಪಾಯಕಾರಿ ವಲಯದಲ್ಲಿರುವುದನ್ನು ತೋರಿಸುತ್ತದೆ. ಆದರೆ ಈ ವಿಷಯವನ್ನು ಮಾಧ್ಯಮಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಚರ್ಚಿಸುವುದು ತೀರಾ ಅಪರೂಪ ಎಂದು ‘ಇಗಾರ್ಪೆ’ಯ ಸ್ಥಾಪಕ ಹಾಗೂ ಸಂಶೋಧನಾ ನಿರ್ದೇಶಕ ರಾಬರ್ಟ್ ಮುಗ್ಗಾಹ್ ಹೇಳುತ್ತಾರೆ. ಆನ್‌ಲೈನ್ ಪತ್ರಿಕೆ ‘ದಿ ವೈರ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮುಗ್ಗಾಹ್ ಅವರು ಭಯೋತ್ಪಾದನೆ ಹಾಗೂ ಬಂಡುಕೋರ ಕೃತ್ಯಗಳು ಅತ್ಯಂತ ಹಿಂಸಾತ್ಮಕವಾದ ಸಾವುಗಳಿಗೆ ಕಾರಣವಾಗುತ್ತವೆಂಬುದು ಸಾಮಾನ್ಯವಾದ ವಾಖ್ಯಾನ ವಾಗಿದೆ. ಜನಸಮೂಹದ ಮೇಲೆ ಗುಂಡು ಹಾರಾಟದ ಘಟನೆಗಳಿಗೆ ಬಲಿಯಾಗುವವರಿಗಿಂತ, ವೈಯಕ್ತಿಕ ದ್ವೇಷದಿಂದ ಕೊಲೆಯಾಗುವವರ ಸಂಖ್ಯೆ 20 ಪಟ್ಟು ಅಧಿಕವಾಗಿರುವ ಅಮೆರಿಕದಲ್ಲಿಯೂ ಕೂಡಾ ಇಂತಹದೇ ತಪ್ಪು ಅಭಿಪ್ರಾಯವಿದೆ ಎಂದು ಹೇಳಿದ್ದಾರೆ. ಸಾಮಾನ್ಯ ಕೊಲೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಯಾವಾಗಲಾದರೊಮ್ಮೆ ಮಾತ್ರವೇ ಸಾರ್ವಜನಿಕರು ಆತಂಕ ಪಡುತ್ತಾರೆ. ಮಾಧ್ಯಮಗಳು ಕೂಡಾ ಇದೇ ಅನಿಸಿಕೆಯನ್ನು ಹೊಂದಿವೆ. ವಿರಳವಾದ, ಆದರೆ ಅತ್ಯಂತ ಹೆಚ್ಚು ದೃಗ್ಗೋಚರವಾಗುವ ಹಿಂಸಾಚಾರದ ಘಟನೆಗಳು ಪ್ರಾಮುಖ್ಯತೆಯನ್ನು ಪಡೆಯುತ್ತವೆ ಎಂದು ಮುಗ್ಗಾಹ್ ಹೇಳುತ್ತಾರೆ.

ಕೊಲೆ ಪ್ರಕರಣಗಳ ಕುರಿತಾದ ಬೃಹತ್ ಅಂಕಿಅಂಶಗಳು ಬಹಿರಂಗಗೊಂಡಿರುವ ಹೊರತಾಗಿಯೂ, ಅವುಗಳನ್ನು ನಿಯಂತ್ರಿಸುವಲ್ಲಿ ನಮ್ಮ ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲವಾಗಿರುವ ಬಗ್ಗೆ ಯಾವತ್ತೂ ಬಹಿರಂಗ ಚರ್ಚೆಯಾಗಲೇ ಇಲ್ಲ. ಭಾರತದಲ್ಲಿ ಲಕ್ಷಾಂತರ ಪೊಲೀಸರು ಹಾಗೂ ನ್ಯಾಯವಾದಿಗಳು ಮತ್ತು ಸಾವಿರಾರು ನ್ಯಾಯಾಧೀಶರಿದ್ದಾರೆ. ಆದರೆ ಅಪರಾಧದ ಪ್ರಮಾಣಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿವೆ. ನ್ಯಾಯವಾದಿಗಳು ಉತ್ತಮ ಆದಾಯ ಸಂಪಾದಿಸುತ್ತಿದ್ದಾರೆ. ಕಾನೂನು ಉದ್ಯಮದ ಬೆಳವಣಿಗೆ ಜಿಗಿಯುತ್ತಾ ಸಾಗಿದೆ. ಕಾರಾಗೃಹಗಳು ಕೂಡಾ ದೊಡ್ಡ ಕೈಗಾರಿಕೆಗಳಾಗಿ ಬಿಟ್ಟಿವೆ. ಅಬ್ಬಬ್ಬಾ ಎಂದರೆ ಶೇ.10ರಷ್ಟು ಕೊಲೆ ಪ್ರಕರಣಗಳಲ್ಲಿ ಮಾತ್ರವೇ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿದೆ. ಮರಣದಂಡನೆ ತೀರ್ಪು ವಿಧಿಸಲ್ಪಟ್ಟರೂ ಬಹುಮಟ್ಟಿಗೆ ಯಾರೂ ಕೂಡಾ ಗಲ್ಲಿಗೇರುವುದಿಲ್ಲ. ಉಳಿದವರು ಜೈಲುಗಳಲ್ಲಿ ಹೆಚ್ಚು ಹೆಚ್ಚು ಸವಲತ್ತುಗಳನ್ನು ಅನುಭವಿಸುತ್ತಾ ಹಾಯಾಗಿ ಜೀವನವನ್ನು ಅನುಭವಿಸುತ್ತಿದ್ದಾರೆ. ಜೈಲಿನ ಜನಸಂಖ್ಯೆ ಬೆಳೆಯುತ್ತಾ ಹೋಗುತ್ತಿದೆ ಹಾಗೂ ಆಹಾರ, ಬಟ್ಟೆಗಳು ಹಾಗೂ ಇತರ ಆವಶ್ಯಕ ಸಾಮಗ್ರಿಗಳನ್ನು ಜನರು ಪಾವತಿಸಿದ ತೆರಿಗೆ ಹಣದಿಂದ ಅವು ಪಡೆದುಕೊಳ್ಳುತ್ತಿವೆ. ರ್ಯಾನ್ ಶಾಲೆಯ ಬಾಲಕನ ಕೊಲೆ ಘಟನೆಯ ಬಳಿಕ ಸಿಸಿಟಿವಿ ಕ್ಯಾಮರಾ ಉದ್ಯಮಕ್ಕೆ ಶುಕ್ರದೆಸೆ ಬಂದಿದ್ದು, ಅವು ಒಂದೇ ಸಮನೆ ಹಣ ಎಣಿಸುವುದರಲ್ಲೇ ಮಗ್ನವಾಗಿಬಿಟ್ಟಿವೆ.

 ಅತ್ಯಾಚಾರದ ಘಟನೆಗಳಲ್ಲಿಯೂ ಇಂತಹದೇ ಪರಿಸ್ಥಿತಿಯಿದೆ. 1990 ಹಾಗೂ 2008ರ ನಡುವೆ ಭಾರತದಲ್ಲಿ ಅತ್ಯಾಚಾರದ ಪ್ರಕರಣಗಳಲ್ಲಿ ದುಪ್ಪಟ್ಟು ಏರಿಕೆಯಾಗಿರುವುದನ್ನು ಅಧಿಕೃತ ಮೂಲಗಳು ಬಹಿರಂಗಪಡಿಸಿವೆ. 2013ನೇ ಸಾಲಿನ ರಾಷ್ಟೀಯ ಅಪರಾಧ ದಾಖಲೆಗಳ ಬ್ಯುರೋ ಪ್ರಕಾರ 2012ರಲ್ಲಿ ಭಾರತದಾದ್ಯಂತ 24,923 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ದೇಶವನ್ನೇ ಬೆಚ್ಚಿಬೀಳಿಸಿದ ನಿರ್ಭಯಾ ಅತ್ಯಾಚಾರ ಪ್ರಕರಣದ ಬಳಿಕ ಮಾಧ್ಯಮಗಳು ಅತ್ಯಾಚಾರ ಪಿಡುಗಿನ ಬಗ್ಗೆ ವಿಸ್ತೃತವಾದ ಚರ್ಚೆ ನಡೆಸಿವೆ. ಆದರೆ ನೈಜ ತಪ್ಪಿತಸ್ಥರಾದ ದುರ್ಬಲ ಕಾನೂನು ವ್ಯವಸ್ಥೆ, ಪ್ರಚೋದನಕಾರಿ ಸಾಮಾಜಿಕ ಜಾಲತಾಣ ಹಾಗೂ ಅಲ್ಕೋಹಾಲ್ ಮೇಲೆ ಯಾವತ್ತೂ ಗುರಿಯಿಡಲಾಗಿಲ್ಲ. ಸುದ್ದಿಪತ್ರಿಕೆಗಳು, ಟಿವಿ, ಇಂಟರ್‌ನೆಟ್ ಪೂರ್ಣವಾಗಿ ಲೈಂಗಿಕ ಪ್ರಚೋದನಕಾರಿ ಸರಕುಗಳಿಂದ ತುಂಬಿವೆ ಹಾಗೂ ಹೀಗಿದ್ದೂ ವ್ಯಕ್ತಿಗಳು ತಮ್ಮ ಇಂದ್ರಿಯಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕೆಂದು ನಿರೀಕ್ಷಿಸಲಾಗುತ್ತಿದೆ ಕೊಲೆಪಾತಕ ಹಾಗೂ ಲೈಂಗಿಕ ಹಲ್ಲೆಗಳು ಹಾಗೂ ರಸ್ತೆ ಅಪಘಾತಗಳು ಸೇರಿದಂತೆ ಬಹುದೊಡ್ಡ ಶೇಕಡವಾರು ಪ್ರಕರಣಗಳಲ್ಲಿ ಅಲ್ಕೊಹಾಲ್ ಮುಖ್ಯ ಪಾತ್ರವಹಿಸಿರು ತ್ತದೆಯೆಂಬ ವಾಸ್ತವಿಕಾಂಶ ಎಲ್ಲರಿಗೆ ತಿಳಿದಿರುವ ಹೊರತಾಗಿಯೂ ದೇಶದಲ್ಲಿ ಮದ್ಯ ಉದ್ಯಮದ ಬೆಳವಣಿಗೆ ಅಬಾಧಿತವಾಗಿ ಮುಂದುವರಿದಿದೆ. ಜನರನ್ನು ಹೆಲ್ಮೆಟ್ ಧರಿಸುವಂತೆ ಕಡ್ಡಾಯಗೊಳಿಸುವುದು ರಸ್ತೆ ಅಪಘಾತಗಳಲ್ಲಿ ಜನರ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಲು ಇರುವ ಮಾದರಿ ಪರಿಹಾರವಾಗಿದೆ.

 ದುರದೃಷ್ಟವಶಾತ್ ಆಡಳಿತಾರೂಢ ಪಕ್ಷವು ಒಂದಲ್ಲ ಒಂದು ರೀತಿಯಲ್ಲಿ ಮುಸ್ಲಿಮರನ್ನು ಹಾಗೂ ಕ್ರೈಸ್ತರನ್ನು ಗುರಿಯಿಡುವ ಮೂಲಕ ಹಿಂದೂಧರ್ಮದ ಮೇಲಿನ ತನ್ನ ಮೋಹವನ್ನು ಪ್ರದರ್ಶಿಸುತ್ತಿದೆ. ಆದರೆ ಹಿಂದೂಧರ್ಮ ಸೇರಿದಂತೆ ಎಲ್ಲಾ ಧರ್ಮಗಳ ಘೋರ ಪಿಡುಗಾಗಿರುವ ಸಾಮಾಜಿಕ ದುರ್ಗುಣಗಳು,ಜೂಜು, ಹಿಂಸಾಚಾರ ಮತ್ತು ಅನೈತಿಕ ಸಂಬಂಧದಂತಹ ಎಲ್ಲಾ ರೀತಿಯ ದುಶ್ಚಟಗಳ ಮೂಲೋತ್ಪಾಟನೆ ಮಾಡುವ ವಿಷಯದಲ್ಲಿ ಅದು ತನ್ನ ‘ಧರ್ಮ’ವನ್ನು ಮರೆತಿದೆ. ಧಾರ್ಮಿಕ ಗುರುತುಗಳೇ ಮತ ಹಾಗೂ ಹಣವನ್ನು ತಂದುಕೊಡುತ್ತವೆಯೇ ಹೊರತು ಧಾರ್ಮಿಕ ನೈತಿಕತೆಯಲ್ಲವೆಂಬುದು ಅದಕ್ಕೆ ಚೆನ್ನಾಗಿ ತಿಳಿದಿದೆ. ಇತ್ತ ಬಹುತೇಕ ಮುಸ್ಲಿಂ ಸಂಘಟನೆಗಳು ಕೂಡಾ ಧಾರ್ಮಿಕ ನೈತಿಕತೆಗೆ ಉತ್ತೇಜನ ನೀಡಲು ಹೆಚ್ಚು ಶ್ರಮಿಸದಿರುವುದು ದುರದೃಷ್ಟಕರ. ಮಾಧ್ಯಮಗಳು ಕೂಡಾ ಕೆಲವೇ ವಿಷಯಗಳನ್ನು ಧ್ರುವೀಕರಿಸಿಕೊಂಡು ಹಾಗೂ ಅತಿರಂಜಿತವಾದ ಸುದ್ದಿಗಳನ್ನು ಪ್ರಸಾರ ಮಾಡಿ ಬೆಳೆಯುತ್ತಿವೆ. ದಿನಂಪ್ರತಿ ವರದಿಯಾಗುತ್ತಿರುವ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳು, ಆರ್ಥಿಕ ಅಸಮಾನತೆ, ಆರೋಗ್ಯ ಸಮಸ್ಯೆ ಮತ್ತಿತರ ವಿಷಯಗಳು ಅವುಗಳನ್ನು ಕಾಡುವುದು ತೀರಾ ಕಡಿಮೆ. ರಾಜಕೀಯ ಪರಿಣಾಮಗಳಾಗುವ ಸಾಧ್ಯತೆಯಿದ್ದಲ್ಲಿ ಮಾತ್ರವೇ ಅವು ಹಿಂಸೆ ಹಾಗೂ ಆಡಳಿತ ನಿರ್ಲಕ್ಷಕ್ಕೆ ಸಂಬಂಧಿಸಿದ ವಿಷಯಗಳನ್ನು ಎತ್ತಿಕೊಳ್ಳುತ್ತವೆ. ತಮ್ಮ ರಾಜಕೀಯ ಒಲವು ಹಾಗೂ ತಮಗೆ ಹಣ ಸುರಿಯುವ ಕಾರ್ಪೊರೇಟ್ ಧಣಿಗಳ ಆಯ್ಕೆಗೆ ಅನುಸಾರವಾಗಿ ಅವು ವರದಿಗಳನ್ನು ಪ್ರಸಾರ ಮಾಡುತ್ತಿವೆ.

ಕೃಪೆ: ದಿ ವೈರ್

Writer - ಡಾ. ಜಾವೇದ್ ಜಮೀಲ್

contributor

Editor - ಡಾ. ಜಾವೇದ್ ಜಮೀಲ್

contributor

Similar News

ಜಗದಗಲ
ಜಗ ದಗಲ