ಶರೀಫ್ ಖಾತೆಗಳ ಸ್ತಂಭನ, ಆಸ್ತಿ ಮುಟ್ಟುಗೋಲು

Update: 2017-09-22 17:58 GMT

ಇಸ್ಲಾಮಾಬಾದ್, ಸೆ. 22: ಭ್ರಷ್ಟಾಚಾರ ಮತ್ತು ಕಪ್ಪುಹಣ ಬಿಳುಪು ಮಾಡಿದ ಆರೋಪಗಳನ್ನು ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಮತ್ತು ಅವರ ಕುಟುಂಬ ಸದಸ್ಯರ ಎಲ್ಲ ಬ್ಯಾಂಕ್ ಖಾತೆಗಳನ್ನು ದೇಶದ ಅತ್ಯುನ್ನತ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ‘ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೊ’ ಶುಕ್ರವಾರ ಸ್ಥಗಿತಗೊಳಿಸಿದೆ ಹಾಗೂ ಅವರ ಸೊತ್ತುಗಳನ್ನು ಮುಟ್ಟುಗೋಲು ಹಾಕಿದೆ.

ರೈವಿಂಡ್‌ನಲ್ಲಿರುವ ಶರೀಫ್ ನಿವಾಸದ ಬಾಗಿಲಿಗೆ ಖಾತೆ ಸ್ತಂಭನ ಮತ್ತು ಆಸ್ತಿ ಮುಟ್ಟುಗೋಲಿಗೆ ಸಂಬಂಧಿಸಿದ ನೋಟಿಸ್‌ಗಳನ್ನು ಅಂಟಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News