ನೀವು ಮಧುಮೇಹಿಗಳೇ? ದಿನಕ್ಕೊಂದು ಬೇಯಿಸಿದ ಮೊಟ್ಟೆ ತಿಂದು ನೋಡಿ ಏನಾಗುತ್ತದೆ ಎನ್ನುವುದನ್ನು.....

Update: 2017-09-24 08:05 GMT

ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಕೇವಲ ಒಂದು ಬೇಯಿಸಿದ ಮೊಟ್ಟೆ ಸಾಕು ಎನ್ನುವುದು ನಿಮಗೆ ಗೊತ್ತೇ? ವಿಶ್ವಾದ್ಯಂತ ಬಹಳಷ್ಟು ಜನರು ಮಧುಮೇಹದಿಂದ ನರಳುತ್ತಿದ್ದಾರೆ. ಭಾರತವಂತೂ ಮಧುಮೇಹದ ‘ರಾಜಧಾನಿ’ ಎಂದೇ ಕುಖ್ಯಾತಿಯನ್ನು ಪಡೆದಿದೆ. ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದನೆಯನ್ನು ನಿಲ್ಲಿಸಿದಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಳಗೊಂಡು ನಾವು ಮಧುಮೇಹಕ್ಕೆ ತುತ್ತಾಗುತ್ತೇವೆ. ಉತ್ಪತ್ತಿಯಾದ ಇನ್ಸುಲಿನ್‌ನ ಅಸಮರ್ಪಕ ಬಳಕೆಯೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ.

 ತ್ವರಿತ ತೂಕ ಇಳಿಕೆ, ದಣಿವು, ಮಬ್ಬಾದ ದೃಷ್ಟಿ, ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕೆಂಂಬ ತುಡಿತ, ನಿರಂತರ ಬಾಯಾರಿಕೆ ಮತ್ತು ಗುಪ್ತಾಂಗಗಳ ಸುತ್ತ ತುರಿಕೆಯ ಅನುಭವ ಇವು ಮಧುಮೇಹದ ಸಾಮಾನ್ಯ ಲಕ್ಷಣಗಳಾಗಿವೆ. ಮಧುಮೇಹಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳದೆ ನಿರ್ಲಕ್ಷಿಸಿದರೆ ಅದು ಮೂತ್ರಪಿಂಡ ವೈಫಲ್ಯ, ಹೃದ್ರೋಗ, ಅಂಧತ್ವ, ನರಗಳಿಗೆ ಹಾನಿ ಮತ್ತು ನಿಮಿರುವಿಕೆ ದೌರ್ಬಲ್ಯದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

  ದಿನಕ್ಕೊಂದು ಬೇಯಿಸಿದ ಮೊಟ್ಟೆಯ ಸೇವನೆ ಮಧುಮೇಹಕ್ಕೆ ಉತ್ತಮ ಚಿಕಿತ್ಸೆ ಯಾಗಿದೆ. ಆದರೆ ಇದರೊಂದಿಗೆ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವ ಆಹಾರ ಗಳನ್ನು ಸೇವಿಸಕೂಡದು.

ಮೊಟ್ಟೆಯೊಂದನ್ನು ಬೇಯಿಸಿ ಅದರ ಸಿಪ್ಪೆಯನ್ನು ತೆಗೆಯಿರಿ. ಬಳಿಕ ಮುಳ್ಳುಚಮಚ (ಫೋರ್ಕ್)ದಿಂದ ಅದರ ಮೇಲೆ ಹಲವಾರು ಬಾರಿ ಚುಚ್ಚಿ, ಅದನ್ನು ಪಾತ್ರೆಯಲ್ಲಿರಿಸಿ. ಮೊಟ್ಟೆಯ ಮೇಲೆ ಸ್ವಲ್ಪ ವಿನೆಗರ್ ಚಿಮುಕಿಸಿ ರಾತ್ರಿಯಿಡೀ ಹಾಗೆಯೇ ಇಡಿ. ಬೆಳಿಗ್ಗೆ ಈ ಮೊಟ್ಟೆಯನ್ನು ಒಂದು ಚಮಚ ವಿನೆಗರ್ ಬೆರೆಸಿದ ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. ಹಲವಾರು ದಿನಗಳ ಕಾಲ ಹೀಗೆ ಮಾಡಿದರೆ ನಿಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟ ಇಳಿದಿರುವುದು ನಿಮಗೇ ಗೊತ್ತಾಗುತ್ತದೆ. ಹೀಗಾಗಿ ಇದು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News