ಹಸ್ತಲಾಘವದಿಂದ, ಮೊಬೈಲ್ ಫೋನ್ ಬಳಕೆಯಿಂದ ಏಡ್ಸ್ ಹರಡುತ್ತದೆ !

Update: 2017-09-25 11:13 GMT

ಹೊಸದಿಲ್ಲಿ, ಸೆ. 25: ಏಡ್ಸ್ ಸೋಂಕು ಇರುವ ವ್ಯಕ್ತಿಗೆ ಹಸ್ತಲಾಘವ ಮಾಡಿದರೆ, ಒಂದೇ ಮೊಬೈಲ್ ಫೋನ್ ಬಳಸಿದರೆ ಏಡ್ಸ್ ಹರಡಬಹುದೇ?. ಈ ರೀತಿ ಏಡ್ಸ್ ಹರಡುವ ಸಾಧ್ಯತೆ ಇದೆ ಎಂದು ಪಂಜಾಬ್‍ನ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಹೇಳುತ್ತಿದೆ.

ಏಡ್ಸ್ ಜಾಗೃತಿ ಗುರಿಯೊಂದಿಗೆ ಹೊರಡಿಸಲಾದ ಕರಪತ್ರದಲ್ಲಿ ಎಡ್ಸ್ ಕಂಟ್ರೋಲ್ ಸೊಸೈಟಿ ಈ ಪ್ರಮಾದ ಮಾಡಿದೆ. ಏಡ್ಸ್ ರೋಗ ಹರಡುವ ಕುರಿತು ಸೊಸೈಟಿ ನೀಡಿರುವ ಮಾಹಿತಿ ಸಂಪೂರ್ಣ ನಿರಾಧಾರವಾದುದು. ಅವೆಲ್ಲ ಬಹಳ ಹಿಂದೆ ಜನರ ನಡುವೆ ಚಾಲ್ತಿಯಲ್ಲಿದ್ದ ಸುಳ್ಳುಗಳಾಗಿವೆ.

ಏಡ್ಸ್ ಇರುವ ವ್ಯಕ್ತಿಗೆ ಹಸ್ತಲಾಘವ ಮಾಡಿದರೆ ರೋಗ ಹರಡುತ್ತದೆ, ಏಡ್ಸ್ ಪೀಡಿತರ ಪಾತ್ರೆಗಳು, ಮೊಬೈಲ್‍ಫೋನ್, ಕಂಪ್ಯೂಟರ್,ಶೌಚಾಲಯಗಳನ್ನು ಉಪಯೋಗಿಸಿದರೆ ರೋಗ ಹರಡುತ್ತದೆ ಎಂದು ಸೊಸೈಟಿಯ ಕರಪತ್ರಗಳು ವಿವರಿಸುತ್ತಿವೆ.

ನಿರಾಧಾರ ವಿವರಗಳನ್ನು ಹರಡಿ ಹೆದರಿಸುವ ಸೊಸೈಟಿಯ ಕೆಲಸಕ್ಕೆ ಎಲ್ಲೆಡೆಯಿಂದ ಟೀಕೆಗಳು ವ್ಯಕ್ತವಾಗಿವೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News