ರುಚಿಕರ ಚಿಕನ್ ಚಿಲ್ಲಿ ಮಸಾಲ ಮಾಡುವ ವಿಧಾನ

Update: 2017-09-27 14:34 GMT

ಸಾಮಾನ್ಯವಾಗಿ ಚಿಕನ್ ಚಿಲ್ಲಿ ಅಥವಾ ಚಿಕನ್ ಮಸಾಲಾವನ್ನು ಎಲ್ಲರೂ ಟೇಸ್ಟ್ ಮಾಡಿರುತ್ತಾರೆ. ಆದರೆ ಈ ಎರಡಕ್ಕೂ ಹೋಲಿಸಿದರೆ 'ಚಿಕನ್ ಚಿಲ್ಲಿ ಮಸಾಲಾ' ಇನ್ನಷ್ಟು ಸ್ವಾದಿಷ್ಟವಾಗಿದೆ. ಚಿಕನ್ ಚಿಲ್ಲಿ ಮಸಾಲಾ ತಯಾರಿಗೆ ಹೆಚ್ಚೇನು ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆಯಿಲ್ಲ. ಕೆಲ ಅವಶ್ಯಕ ಸಾಮಗ್ರಿಗಳಿದ್ದರೆ 'ಚಿಕನ್ ಚಿಲ್ಲಿ ಮಸಾಲಾ'ವನ್ನು ಮನೆಯಲ್ಲೇ ರೆಡಿ ಮಾಡಬಹುದು. ಚಿಕನ್ ಚಿಲ್ಲಿ ಮಸಾಲಾ ತಯಾರಿಸುವ ಸರಳ ವಿಧಾನ ಇಲ್ಲಿದೆ.

ಒಟ್ಟು ತಯಾರಿ ಸಮಯ 1 ಗಂಟೆ 15 ನಿಮಿಷ

ಬೇಕಾಗುವ ಸಾಮಗ್ರಿಗಳು (ನಾಲ್ಕು ಜನರಿಗೆ ಸಾಕಾಗುವಷ್ಟು)

ಕೋಳಿ ಮಾಂಸ -500 ಗ್ರಾಂ

ಈರುಳ್ಳಿ - 3 ದೊಡ್ಡದು

ಕೊತ್ತಂಬರಿ ಸೊಪ್ಪು- ಒಂದು ಕಟ್ಟ

ಹಸಿ ಮೆಣಸಿನಕಾಯಿ -10

2 ಟೀಸ್ಪೂನ್ ಪೆಪ್ಪರ್ ಕಾರ್ನ್

1 ಟೀಸ್ಪೂನ್ ಜೀರಿಗೆ

ಸ್ವಲ್ಪ ಕರಿಬೇವಿನ ಸೊಪ್ಪು

1 ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್

3 ಟೀ ಚಮಚ ಎಣ್ಣೆ

ಉಪ್ಪು -ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಶುಂಠಿ, ಕರಿಬೇವಿನ ಸೊಪ್ಪು, ಜೀರಿಗೆ, ಪೆಪ್ಪರ್ ಕಾರ್ನ್ ಹಾಗೂ ಹಸಿ ಮೆಣಸು ಸೇರಿಸಿ ಚೆನ್ನಾಗಿ ರುಬ್ಬಿ

ಈರುಳ್ಳಿ ಪೇಸ್ಟ್ ತಯಾರಿಸಿ

ಕೋಳಿ ಮಾಂಸ ತೊಳೆದು ನೀರನ್ನು ಸೋಸಿ

ರುಬ್ಬಿದ ಪೇಸ್ಟ್ ಅನ್ನು ಒಂದು ಟೀಸ್ಪೂನ್ ಎಣ್ಣೆಯೊಂದಿಗೆ ಕೋಳಿ ಮಾಂಸದೊಂದಿಗೆ ಮಿಶ್ರಣ ಮಾಡಿ. ಅರ್ಧ ಗಂಟೆ ಹಾಗೆಯೇ ಇಟ್ಟು ಬಿಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಪೇಸ್ಟ್ ಹಾಕಿ ಒಣ ಪರಿಮಳ ಹೋಗುವ ತನಕ ಹುರಿಯಿರಿ. ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆಯೇ ರುಬ್ಬಿದ ಪೇಸ್ಟ್ ಹಾಗು ಟೀಸ್ಪೂನ್ ಎಣ್ಣೆಯೊಂದಿಗೆ ಮಿಶ್ರಣ ಮಾಡಲ್ಪಟ್ಟ ಕೋಳಿ ಮಾಂಸವನ್ನು ಸೇರಿಸಿ ಸಣ್ಣಗಿನ ಉರಿಯಲ್ಲಿ ಬೇಯಿಸಿ. ಅಗತ್ಯ ಬಿದ್ದರೆ ಆಗಾಗ ಸ್ವಲ್ಪ ನೀರು ಸೇರಿಸಿ. ಮಾಂಸ ಬೆಂದ ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ಹೊತ್ತು ಮತ್ತೆ ಬೇಯಿಸಿ. ಬೇಯಿಸುವಾಗ ಪಾತ್ರೆಯ ಮುಚ್ಚಳ ಹಾಕಬೇಡಿ. ಈಗ ಸ್ವಾದಿಷ್ಟ ಚಿಕನ್ ಚಿಲ್ಲಿ ಮಸಾಲ ತಿನ್ನಲು ರೆಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News