ಹಫೀಝ್ ಪಕ್ಷಕ್ಕೆ ಮಾನ್ಯತೆ ಬೇಡ: ಪಾಕ್
Update: 2017-09-28 23:16 IST
ಇಸ್ಲಾಮಾಬಾದ್, ಸೆ. 28: ಮುಂಬೈ ದಾಳಿ ಸೂತ್ರಧಾರ ಹಫೀಝ್ ಸಯೀದ್‌ನ ಜಮಾಅತುದಅವಾ ರಚಿಸಿರುವ ನೂತನ ರಾಜಕೀಯ ಪಕ್ಷ ಮಿಲಿ ಮುಸ್ಲಿಮ್ ಲೀಗ್ (ಎಂಎಂಎಲ್)ಅನ್ನು ನೋಂದಾಯಿಸಬಾರದು ಎಂದು ಪಾಕಿಸ್ತಾನದ ಆಂತರಿಕ ಸಚಿವಾಲಯ ಚುನಾವಣಾ ಆಯೋಗಕ್ಕೆ ಹೇಳಿದೆ.
ಇಂಥ ಕ್ರಮವು ರಾಜಕೀಯದಲ್ಲಿ ಹಿಂಸೆಯನ್ನು ಸೃಷ್ಟಿಸುತ್ತದೆ ಎಂಬುದಾಗಿ ಗುಪ್ತಚರ ವರದಿಗಳು ಹೇಳಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ.