ಕಾಬೂಲ್ ಮಸೀದಿ ಬಳಿ ಆತ್ಮಾಹುತಿ ಬಾಂಬ್ ದಾಳಿ: 22 ಬಲಿ
Update: 2017-09-29 18:01 IST
ಕಾಬೂಲ್, ಸೆ.29: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಶಿಯಾ ಮಸೀದಿ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆದ ಪರಿಣಾಮವಾಗಿ 22 ಮಂದಿ ಮೃತಪಟ್ಟು, ಹಲವರಿಗೆ ಗಾಯವಾಗಿರುವ ಘಟನೆ ಶುಕ್ರವಾರ ಸಂಭವಿಸಿದೆ.
ಅಫ್ಘಾನಿಸ್ತಾನದ ಹುಸೈನಿಯಾ ಮಸೀದಿಯಿಂದ 100 ಮೀಟರ್ ಪಕ್ಕದಲ್ಲಿ ದಾಳಿ ನಡೆದಿದೆ. ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಝ್ ಮುಗಿಸಿ ಜನರು ಹೊರಬರುತ್ತಿದಂತೆ ಅವರ ಮೇಲೆ ಉಗ್ರರ ದಾಳಿ ನಡೆದಿದೆ ಎಂದು ವರದಿ ತಿಳಿಸಿದೆ.
ಯಾವುದೇ ಸಂಘಟನೆಯೂ ತಕ್ಷಣ ಈ ದಾಳಿಯ ಹೊಣೆಹೊತ್ತುಕೊಂಡಿಲ್ಲ.