ಐದನೆ ಏಕದಿನ: ಭಾರತದ ಗೆಲುವಿಗೆ 243 ರನ್ ಗುರಿ

Update: 2017-10-01 11:47 GMT

ನಾಗ್ಪುರ, ಅ.1: ಡೇವಿಡ್ ವಾರ್ನರ್(53) ಹಾಗೂ ಮಾರ್ಕಸ್ ಸ್ಟೋನಿಸ್(46) ನೆರವಿನಿಂದ ಆಸ್ಟ್ರೇಲಿಯ ತಂಡ ಭಾರತಕ್ಕೆ ಐದನೆ ಹಾಗೂ ಅಂತಿಮ ಏಕದಿನ ಪಂದ್ಯದ ಗೆಲುವಿಗೆ 243 ರನ್ ಗುರಿ ನೀಡಿದೆ.

 ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

ವಾರ್ನರ್ ಹಾಗೂ ಫಿಂಚ್(32) ಮೊದಲ ವಿಕೆಟ್‌ಗೆ 66 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಆದರೆ, ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್(3-38) ಹಾಗೂ ವೇಗಿ ಜನಸ್‌ಪ್ರಿತ್ ಬುಮ್ರಾ(2-51) ಆಸ್ಟ್ರೇಲಿಯವನ್ನು 9 ವಿಕೆಟ್‌ಗಳ ನಷ್ಟಕ್ಕೆ 242 ರನ್‌ಗೆ ನಿಯಂತ್ರಿಸಲು ಯಶಸ್ವಿಯಾದರು.

ಆಸೀಸ್‌ನ ಪರ ಟ್ರೆವಿಡ್ ಹೆಡ್(42), ಮ್ಯಾಥ್ಯೂ ವೇಡ್(32) ಎರಡಂಕೆಯ ಸ್ಕೋರ್ ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News