ಜಾಗತಿಕ ಪರಮಾಣು ಶಕ್ತಿಯಾಗುತ್ತೇವೆ: ಉತ್ತರ ಕೊರಿಯ ಪ್ರತಿಜ್ಞೆ
ವ್ಯೊಂಗ್‌ಯಾಂಗ್, ಆ.1: ಉತ್ತರಕೊರಿಯದ ಶಸ್ತ್ರಾಸ್ತ್ರ ಕಾರ್ಯಕ್ರಮಗಳ ಮೇಲೆ ನಿರ್ಬಂಧಗಳನ್ನು ಹೇರಲು ಅಮೆರಿಕ ನೇತೃತ್ವದಲ್ಲಿ ನಡೆಯುವ ಪ್ರಯತ್ನಗಳು ವಿಫಲವಾಗಲಿವೆಯೆಂದು ಆ ದೇಶದ ಸರಕಾರಿ ಸುದ್ದಿ ಏಜೆನ್ಸಿಯೊಂದು ತಿಳಿಸಿದೆ. ಏನೇ ಆದರೂ ಉತ್ತರ ಕೊರಿಯವು ಜಾಗತಿಕ ಮಟ್ಟದ ಪರಮಾಣು ಶಕ್ತಿಯಾಗುವುದು ಖಚಿತವೆಂದು ಅದು ಪ್ರತಿಪಾದಿಸಿದೆ.
‘‘ ನಿರ್ಬಂಧಗಳು ಹಾಗೂ ಒತ್ತಡಗಳು ಉತ್ತರ ಕೊರಿಯ ಗಣರಾಜ್ಯವನ್ನು ಅಣ್ವಸ್ತ್ರ ಶಕ್ತಿಯಾಗಿ ರೂಪಿಸುವ ಗುರಿಯನ್ನು ತಡೆಯಬಲ್ಲದೆಂದು ಅಮೆರಿಕ ಹಾಗೂ ದಕ್ಷಿಣ ಕೊರಿಯದ ಕೈಗೊಂಬೆ ಶಕ್ತಿಗಳು ಭಾವಿಸಿದ್ದರೆ, ಅದು ಅವರ ತಪ್ಪು ಕಲ್ಪನೆ’’ ಎಂದು ಕೆಸಿಎನ್‌ಎ ಸುದ್ದಿಸಂಸ್ಥೆ ಹೇಳಿದೆ.
ಹತಾಶೆಯಿಂದ ಹೇರಿರುವ ನಿರ್ಬಂಧಗಳು ಅಂತಿಮವಾಗಿ ತಮಗೆ ಮುಳುವಾಗಲಿದೆಯೆಂಬುದನ್ನು ಅಮೆರಿಕ ಹಾಗೂ ಗುಲಾಮಿ ಶಕ್ತಿಗಳಿಂದ ಸಲಹೆ ನೀಡಲಾಗಿದೆ’’ ಎಂದು ಅದು ಹೇಳಿದೆ.
ಉತ್ತರ ಕೊರಿಯದ ಅಣ್ವಸ್ತ್ರ ಬಿಕ್ಕಟ್ಟಿಗೆ ಸಂಬಂಧಿಸಿ ಅಮೆರಿಕದ ವಿದೇಶಾಂಗ ಸಚಿವ ರೆಕ್ಸ್ ಟಿಲ್ಲರ್‌ಸನ್, ರವಿವಾರ ಬೀಜಿಂಗ್‌ನಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮಾತುಕತೆ ನಡೆಸಿದ ಬೆನ್ನಲ್ಲೇ ಕೆಸಿಎನ್‌ಎ ಹೇಳಿಕೆ ನೀಡಿದೆ.