ಸಿಂಧು,ಸೈನಾ, ಶ್ರೀಕಾಂತ್‌ಗೆ ಕ್ವಾ. ಫೈನಲ್‌ಗೆ ನೇರ ಪ್ರವೇಶ

Update: 2017-10-01 18:22 GMT

ಬೆಂಗಳೂರು, ಅ.1: ಬಿಡಬ್ಲುಎಫ್ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರ-50ರಲ್ಲಿ ಸ್ಥಾನ ಪಡೆದಿರುವ ಎಲ್ಲ ಆಟಗಾರರಿಗೆ ಮುಂಬರುವ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ನೇರ ಪ್ರವೇಶ ನೀಡಲು ಭಾರತದ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ) ನಿರ್ಧರಿಸಿದೆ.

ಇದೇ ಮೊದಲ ಬಾರಿ ಟೂರ್ನಮೆಂಟ್‌ನಲ್ಲಿ ವಿಜೇತರಿಗೆ 1 ಕೋಟಿ.ರೂ. ಬಹುಮಾನ ನೀಡಲಾಗುತ್ತದೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು(2ನೆ ರ್ಯಾಂಕ್), ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್(ವಿಶ್ವದ ನಂ.12) ಮಹಿಳೆಯರ ಸಿಂಗಲ್ಸ್‌ನಲ್ಲಿ ನೇರವಾಗಿ ಅಂತಿಮ-8ರ ಸುತ್ತಿನಲ್ಲಿ ಆಡಲಿದ್ದಾರೆ.

ಕೆ.ಶ್ರೀಕಾಂತ್(ನಂ.8), ಎಚ್.ಎಸ್. ಪ್ರಣಯ್(ನಂ.15), ಸಾಯಿ ಪ್ರಣೀತ್(ನಂ.17), ಸಮೀರ್ ವರ್ಮ(ನಂ.19) ಹಾಗೂ ಅಜಯ್ ಜಯರಾಮ್(ನಂ.20)ಪುರುಷರ ವಿಭಾಗದಲ್ಲಿ ನೇರ ಪ್ರವೇಶ ಪಡೆದಿದ್ದಾರೆ. ‘‘ಪ್ರಸ್ತುತ ಟೂರ್ನಿಯಲ್ಲಿ ಆಡುವುದು ಎಲ್ಲ ಅಗ್ರ ಆಟಗಾರರಿಗೆ ಕಡ್ಡಾಯವಾಗಿದೆ. ವಿಶ್ವದ ಅಗ್ರ-50ರಲ್ಲಿರುವ ಆಟಗಾರರು ಕ್ವಾರ್ಟರ್‌ಫೈನಲ್‌ಗೆ ನೇರ ಪ್ರವೇಶ ಪಡೆಯಲಿದ್ದಾರೆ. ಒಟ್ಟು 16 ಆಟಗಾರರಲ್ಲಿ 8 ಆಟಗಾರರಿಗೆ ಮಾತ್ರ ಈ ಅವಕಾಶ ಪಡೆಯಲಿದ್ದಾರೆ’’ ಎಂದು ಬಿಎಐ ಅಧ್ಯಕ್ಷ ಹಿಮಂತ ಬಿಸ್ವಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News