ನೂಕುನುಗ್ಗಲಿನಡಿ ಹೂತು ಹೋದ ಪರೇಲ್ ನ ಬದಲಾವಣೆಯ ಕಥೆ

Update: 2017-10-02 04:34 GMT

ಶುಕ್ರವಾರ ಇಲ್ಲಿಯ ಪರೇಲ್ ಮತ್ತು ಎಲ್ಫಿನ್‌ಸ್ಟನ್ ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸುವ ಕಿರಿದಾದ ಪಾದ ಚಾರಿ ಸೇತುವೆಯಲ್ಲಿ ಸಂಭವಿಸಿದ ನೂಕುನುಗ್ಗಲಿಗೆ ಬಲಿಯಾಗು ವವರೆಗೆ 24ರ ಹರೆಯದ ಹಿಲೋನಿ ದೆಧಿಯಾ ಸಾವಿರಾರು ಕನಸುಗಳನ್ನು ಬಿತ್ತಿರುವ ಗಾಜು ಮತ್ತು ಉಕ್ಕಿನ ಗೋಪುರ ಗಳಂತಹ ಅಲ್ಲಿಯ ಕಟ್ಟಡಗಳಲ್ಲಿಯ ಕಚೇರಿ ಗಳಲ್ಲಿ ದುಡಿಯುತ್ತಿರುವ, ಮಹತ್ವಾ ಕಾಂಕ್ಷೆ ಗಳನ್ನು ಹೊಂದಿರುವ ಯುವಜನರ ಪ್ರತೀಕ ವಾಗಿದ್ದಳು.

ಪ್ರತೀದಿನ ಲಕ್ಷಾಂತರ ಜನರನ್ನು ಸೆಳೆಯು ತ್ತಿರುವ ಮಧ್ಯ ಮುಂಬೈನ ಈ ಗಾಜು ಮತ್ತು ಉಕ್ಕಿನ ಗಗನಚುಂಬಿ ಕಟ್ಟಡಗಳು ಶುಕ್ರವಾರದ ದುರಂತವನ್ನೂ ವಿವರಿಸುತ್ತವೆ.

ಇಂದಿನಷ್ಟು ಜನದಟ್ಟಣೆ ಇಲ್ಲದಿದ್ದ ಅಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿದ್ದ ಜವಳಿ ಮಿಲ್‌ಗಳು ಮುಂಬೈ ಮಹಾನಗರಕ್ಕೆ ‘ಪೂರ್ವದ ಮ್ಯಾಂಚೆಸ್ಟರ್’ ಎಂಬ ಹೆಗ್ಗಳಿಕೆಯನ್ನು ನೀಡಿದ್ದವು. ಆಕಾಶಕ್ಕೆ ಚಾಚಿದ್ದ ಚಿಮಣಿಗಳು ಹೊಗೆಯುಗುಳುತ್ತಿದ್ದರೆ, ಪಾಳಿ ಬದಲಾವ ಣೆಯನ್ನು ಸೂಚಿಸುವ ಸೈರನ್‌ಗಳು ಭೋರಿ ಡುತ್ತಿದ್ದರೆ ಈ ಬಟ್ಟೆ ಮಿಲ್‌ಗಳಲ್ಲಿ ಕಾರ್ಮಿಕರು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದರು. 1980ರ ದಶಕದ ಬಳಿಕ ಮುಂಬೈ ನಗರದ ವಸತಿ ಬೇಡಿಕೆ ಗಳನ್ನು ಪೂರೈಸಲು ಇಲ್ಲಿಯ ಮಿಲ್‌ಗಳು ಗಗನ ಚುಂಬಿಗಳ ನಿರ್ಮಾಣಕ್ಕೆ ಅವಕಾಶಗಳನ್ನು ಸೃಷ್ಟಿಸಿದ್ದವು.

ದೆಧಿಯಾ ಆಕ್ಸಿಸ್ ಬ್ಯಾಂಕ್‌ನ ಕಾರ್ಪೊರೇಟ್ ರಿಲೇಷನ್ಸ್ ವಿಭಾಗದಲ್ಲಿ ದುಡಿಯುತ್ತಿದ್ದು, ದುರಂತ ಸಂಭವಿಸಿದಾಗ ಘಾಟ ಕೋಪರ್‌ನ ತನ್ನ ಮನೆಯಿಂದ ಹೊರಟು ಎಲ್ಫಿನ್‌ಸ್ಟನ್ ರೋಡ್ ನಿಲ್ದಾಣದಲ್ಲಿಳಿದು ತನ್ನ ಕಚೇರಿಯತ್ತ ನಡೆದುಕೊಂಡು ಹೋಗುತ್ತಿದ್ದಳು.

ರೈಲ್ವೆ ನಿಲ್ದಾಣದಿಂದ ಕೂಗಳತೆಯ ದೂರದಲ್ಲಿರುವ ಬಾಂಬೆ ಡೈಯಿಂಗ್ ಮಿಲ್ಸ್‌ನ ಆವರಣದಲ್ಲಿ ಆಕ್ಸಿಸ್ ಬ್ಯಾಂಕಿನ ಕಾರ್ಪೊ ರೇಟ್ ಕೇಂದ್ರ ಕಚೇರಿಯಿದೆ. ಇದೇ ಆವರಣದಲ್ಲಿ ಗೋಏರ್, ರಿಪಬ್ಲಿಕ್ ಟಿವಿ ಮತ್ತು ದೇಶದ ಮೊದಲ ಹಾರ್ಡ್ ರಾಕ್ ಕೆಫೆ ಕಚೇರಿಗಳು ಇವೆ.

ಸಮೀಪದ ಸೆಂಚುರಿ ಮಿಲ್ಸ್ ಆವರಣದಲ್ಲಿ ಐಡಿಯಾ ಸೆಲ್ಯುಲರ್ ಮತ್ತು ಪ್ಲೇಬಾಯ್ ಕ್ಯಾಫ್ ಕಚೇರಿಗಳಿವೆ. ಇಲ್ಲಿ ಇಂತಹ ಹಲವಾರು ‘ಮಿಲ್ ಕಾಂಪೌಂಡ್’ಗಳಿವೆ.

ದೆಧಿಯಾ ಹುಟ್ಟುವುದಕ್ಕೆ ಒಂದು ದಶಕದ ಮೊದಲು ನಡೆ ದಿದ್ದ ಜವಳಿ ಮುಷ್ಕರವು ಮಿಲ್ ಗಳ ಬೆನ್ನುಮೂಳೆಯನ್ನೇ ಮುರಿದು ಅವುಗಳ ಅವಸಾನಕ್ಕೆ ಕಾರಣವಾಗಿತ್ತು. ಆದರೆ ಮುಂಬೈ ಮಹಾ ನಗರದ ಹೃದಯಭಾಗದಲ್ಲಿನ ಈ ಮಿಲ್‌ಗಳು ಹೊಂದಿದ್ದ ಭೂಮಿ ಅಕ್ಷರಶಃ ಚಿನ್ನದ ಗಣಿಯಾಗಿ ಪರಿವರ್ತನೆಗೊಂಡಿತ್ತು. 2005ರಲ್ಲಿ ವಾಣಿಜ್ಯಿಕ ಅಭಿವೃದ್ಧಿಗಾಗಿ ಮೊದಲ ಮಿಲ್ ಭೂಮಿಗೆ ಮಂಜೂರಾತಿ ದೊರೆತ ಬಳಿಕ ಈ ಪ್ರದೇಶದ ಚಿತ್ರಣವೇ ಬದಲಾಗತೊಡಗಿತ್ತು.

ಮಿಲ್‌ಗಳ ಮಾಲಕರು ಔಷಧಿ ತಯಾರಿಕೆ, ವಾಯು ಯಾನ, ರಿಯಾಲ್ಟಿಯಂತಹ ಕ್ಷೇತ್ರಗಳತ್ತ ಮುಖ ಮಾಡಿದರೆ ಕೆಲವರು ತಮ್ಮ ಭೂಮಿಯನ್ನು ರಿಯಲ್ ಎಸ್ಟೇಟ್ ಕಂಪೆನಿಗಳಿಗೆ ಮಾರಾಟ ಮಾಡಿದ್ದರು. ನೋಡನೋಡುತ್ತಲೇ ಈ ಪ್ರದೇ ಶವಿಡೀ ಗಗನಚುಂಬಿ ಕಟ್ಟಡಗಳಾಗಿ ರೂಪಾಂತರಗೊಂಡಿತ್ತು.

                                  (ಹಿಲೋನಿ ದೆಧಿಯಾ)

ಇಂದು ಈ ಪ್ರದೇಶವು 13.5 ಮಿಲಿಯನ್ ಚದರಡಿಗಳಷ್ಟು ‘ಗ್ರೇಡ್ ಎ’ ಬಿಲ್ಟ್ ಅಪ್ ಕಚೇರಿ ಸ್ಥಳಾವಕಾಶವನ್ನು ಹೊಂದಿದೆ. 2005ರಲ್ಲಿ ಇದು 2.96 ಮಿ.ಚದರಡಿಗಳಷ್ಟಿತ್ತು. ಪ್ರತೀ 100 ಚದರಡಿಗೆ ಓರ್ವ ವ್ಯಕ್ತಿಯಂತೆ ಲೆಕ್ಕ ಹಾಕಿದರೂ ಈ ಪ್ರದೇಶದ ಲ್ಲಿಂದು ದುಡಿಯುತ್ತಿರುವವರ ಸಂಖ್ಯೆ 1.35 ಲಕ್ಷ ಆಗಬಹುದು ಎನ್ನುತ್ತಾರೆ ಆಸ್ತಿ ಸಲಹಾ ಸಂಸ್ಥೆ ಜೆಎಲ್‌ಎಲ್‌ನ ಸಂಶೋಧನಾ ಮುಖ್ಯಸ್ಥ ಅಶುತೋಷ್ ಲಿಮಯೆ.

ಇನ್ನೂ ಬಹಳಷ್ಟು ಗಾಜು-ಉಕ್ಕಿನ ಗೋಪುರಗಳು ಇಲ್ಲಿ ತಲೆಯೆತ್ತುತ್ತಿದ್ದು, ಈ ಪ್ರದೇಶವೀಗ ಮುಂಬೈನ ಅತ್ಯಂತ ವ್ಯಸ್ತ ನಿರ್ಮಾಣ ಕಾಮಗಾರಿಗಳ ತಾಣವಾಗಿದೆ. ಆದರೆ ಮೂಲ ಸೌಕರ್ಯಗಳು ಮಾತ್ರ ಮೊದಲಿನಂತೆಯೇ ಇವೆ.

ಆಗ ಮಿಲ್‌ಗಳು ಇಷ್ಟೊಂದು ಎತ್ತರವಾಗಿರಲಿಲ್ಲ ಮತ್ತು ಬೇಕಾದಷ್ಟು ಬಯಲು ಪ್ರದೇಶಗಳಿದ್ದವು. ಈಗಿನಷ್ಟು ಜನರೂ ಇಲ್ಲಿ ಕೆಲಸ ಮಾಡುತ್ತಿರಲಿಲ್ಲ. ಪಾಳಿ ಬದಲಾವಣೆಗಳು ನಡೆ ಯುತ್ತಿದ್ದವು. ಹೀಗಾಗಿ ದಿನದ ಯಾವುದೇ ಸಮಯದಲ್ಲಿಯೂ ಇಂದಿನಂತೆ ದಟ್ಟಣೆ ಇರುತ್ತಿರಲಿಲ್ಲ ಎಂದು 70ರ ಪ್ರಾಯದ ಸ್ಥಳೀಯರೋರ್ವರು ನೆನಪಿಸಿಕೊಂಡರು.

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಇಲ್ಲಿಯ ಸೇತುವೆಯಲ್ಲಿ ಯುದ್ಧ ಸದೃಶ ಸ್ಥಿತಿಯಿರುತ್ತದೆ. ನಿಲ್ದಾಣವನ್ನು ಪ್ರವೇಶಿಸಲು ಅಥವಾ ಹೊರ ಬರಲು ಜನರಲ್ಲಿ ಯುದ್ಧಗಳೇ ನಡೆಯುತ್ತವೆ ಎಂದು ಮಾರ್ಕೆಟಿಂಗ್ ಕಂಪೆನಿಯೊಂದರ ಅಧಿಕಾರಿ ಅರುಣ ತಿವಾರಿ ಹೇಳಿದರು.

ಶುಕ್ರವಾರ ದುರಂತ ಸಂಭವಿಸಿದ್ದ ಸ್ಥಳದಲ್ಲಿ ಶನಿವಾರ ಜನ ದಟ್ಟಣೆ ಎಂದಿನಂತಿದ್ದು, ತಿವಾರಿಯವರ ಮಾತನ್ನು ನೆನಪಿಸಿತ್ತು. ಇವೆಲ್ಲದರ ಮಧ್ಯೆ ಕೇವಲ ಎರಡು ಕಿ.ಮೀ. ದೂರದ ಕೆಇಎಂ ಆಸ್ಪತ್ರೆಯಲ್ಲಿ ದೆಧಿಯಾಳ ಶವವನ್ನು ಪಡೆದುಕೊಳ್ಳಲು ಆಕೆಯ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಕಾದು ನಿಂತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ