ಹೊಟ್ಟೆಯಲ್ಲಿ ವಾಯು ಉತ್ಪತ್ತಿ ತಡೆಯುವುದು ಹೇಗೆ?

Update: 2017-10-02 10:43 GMT

ಹೊಟ್ಟೆ ಉಬ್ಬರಿಸಿದಂತಾಗುವುದು, ತೇಗು, ಅಪಾನವಾಯು ಬಿಡುಗಡೆ ಇವುಗಳೆಲ್ಲ ನಾವು ಗಾಳಿಯನ್ನು ನುಂಗುವುದರಿಂದ ಉಂಟಾಗುವ ಕಿರಿಕಿರಿಗಳು. ಕೆಲವು ಸಂದರ್ಭ ಗಳಲ್ಲಿ ಪಚನಕ್ರಿಯೆಯ ವೇಳೆ ಆಹಾರ ವಿಭಜಿಲ್ಪಡುವಾಗಲೂ ವಾಯು ಉತ್ಪತ್ತಿಯಾಗು ತ್ತದೆ. ಆಗಾಗ್ಗೆ ಅಥವಾ ದಿನದಲ್ಲಿ ಪದೇಪದೇ ವಾಯು ಉಪಟಳ ಮತ್ತು ವಾಯುವಿನಿಂದ ಸೊಂಟ, ಬೆನ್ನು ಇತ್ಯಾದಿ ಕಡೆ ನೋವು ಕಾಣಿಸಿಕೊಳ್ಳುತ್ತಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ. ಆದರೆ ಕೆಲವು ಸರಳ ಉಪಾಯಗಳನ್ನು ಅನುಸರಿ ಸುವ ಮೂಲಕ ನಿಮ್ಮ ವಾಯು ಸಮಸ್ಯೆಯಿಂದ ದೂರವಿರಲು ಸಾಧ್ಯವಿದೆ.

ಹೊಟ್ಟೆಯಲ್ಲಿ ವಾಯು ಉತ್ಪತ್ತಿ ಮತ್ತು ಅದರಿಂದಾಗುವ ಕಿರಿಕಿರಿಯಿಂದ ಪಾರಾಗಲು ಈ ಕೆಳಗಿನ ಸಲಹೆಗಳನ್ನು ಪಾಲಿಸುವ ಜೊತೆಗೆ ನೀವು ಏನನ್ನು ತಿನ್ನುತ್ತಿದ್ದೀರಿ ಎನ್ನುವ ಬಗ್ಗೆಯೂ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಊಟಕ್ಕ ಮುನ್ನ ನೀರಿನ ಸೇವನೆ ಅಥವಾ ಊಟದ ಸಂದರ್ಭ ಮಸಾಲೆಭರಿತ ಆಹಾರದ ವರ್ಜನೆಯಂತಹ ಸರಳ ಕ್ರಮಗಳಿಂದ ಹೊಟ್ಟೆಯಲ್ಲಿ ವಾಯು ಉತ್ಪತ್ತಿಯಾಗುವುದನ್ನು ತಪ್ಪಿಸಬಹುದು.

 ವಾಯುವಿಗೆ ಕಾರಣವಾಗುವ ಆಹಾರಗಳು, ಅವಸರದ ಊಟ, ಒತ್ತಡ, ಖಿನ್ನತೆ ಮತ್ತು ಹೆಚ್ಚಿನ ಪ್ರಕರಣಗಳಲ್ಲಿ ಕರುಳಿನಲ್ಲಿಯ ಚಟುವಟಿಕೆಗಳು ಹೊಟ್ಟೆಯಲ್ಲಿ ವಾಯುವಿನ ಸಮಸ್ಯೆಯನ್ನುಂಟು ಮಾಡುತ್ತವೆ.

ಚ್ಯೂಯಿಂಗ್ ಗಮ್ ತಿನ್ನುವುದನ್ನು ನಿಲ್ಲಿಸಿ

ಕೆಲವರಿಗೆ ಚ್ಯೂಯಿಂಗ್ ಗಮ್ ಅಗಿಯುತ್ತ ಮಾತನಾಡುವ ಅಭ್ಯಾಸವಿರುತ್ತದೆ. ಈ ವೇಳೆ ಅವರು ಹೆಚ್ಚಿನ ಪ್ರಮಾಣದಲ್ಲಿ ಗಾಳಿಯನ್ನೂ ನುಂಗುತ್ತಿರುತ್ತಾರೆ. ಹೀಗಾಗಿ ವಾಯು ವಿನ ಸಮಸ್ಯೆಯಿಂದ ಪಾರಾಗಲು ಒಬ್ಬರೇ ಇದ್ದಾಗ ಚ್ಯೂಯಿಂಗ್ ಗಮ್ ಅಗಿಯುವುದು ಒಳ್ಳೆಯದು.

ಡೇರಿ ಉತ್ಪನ್ನಗಳ ಬಗ್ಗೆಯೂ ಗಮನವಿರಲಿ

ನೀವು ದಿನಕ್ಕೆ ಎಷ್ಟು ಡೇರಿ ಉತ್ಪನ್ನಗಳನ್ನು ಸೇವಿಸುತ್ತೀರಿ ಎಂಬ ಬಗ್ಗೆ ಎಚ್ಚರಿಕೆ ವಹಿಸಿ. ಹೆಚ್ಚು ವಾಯುವಿಗೆ ಕಾರಣವಾಗುವ ಸೂಕ್ಷ್ಮ ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಮೊಸರಿ ನಂತಹ ಹಾಲಿನ ಉತ್ಪನ್ನಗಳ ಅತಿಯಾದ ಸೇವನೆ ಒಳ್ಳೆಯದಲ್ಲ.

ಹರ್ಬಲ್ ಪೇಯಗಳಿಗೆ ಆದ್ಯತೆಯಿರಲಿ

ಹೊಟ್ಟೆಯಲ್ಲಿನ ವಾಯು ಸಮಸ್ಯೆಯನ್ನು ನಿವಾರಿಸಲು ಹರ್ಬಲ್ ಅಥವಾ ಗಿಡ ಮೂಲಿಕೆಗಳಿಂದ ತಯಾರಾದ ಪೇಯಗಳಿಗೆ ನಿಮ್ಮ ಆದ್ಯತೆಯಿರಲಿ. ಪಚನನಾಳದ ಒಳಪದರಕ್ಕೆ ಹಿತವನ್ನುಂಟು ಮಾಡುವ ದಾಲ್ಚಿನ್ನಿ ಈ ಪೇಯಗಳಲ್ಲಿರಬೇಕು ಎನ್ನುವುದನ್ನು ನೆನಪಿನಲ್ಲಿಡಿ.

ಆರಾಮವಾಗಿ ಆಹಾರ ಸೇವಿಸಿ

ಅವಸರದ ಊಟ ಬಲೂನಿನಂತೆ ಹೊಟ್ಟೆ ಉಬ್ಬಿಕೊಳ್ಳಲು ಇನ್ನೊಂದು ಕಾರಣವಾಗಿದೆ. ಹೀಗಾಗಿ ಊಟವನ್ನು ಮಾಡುವಾಗ ಅವಸರ ಬೇಡವೇ ಬೇಡ. ನಿಧಾನವಾಗಿ ಊಟ ಮಾಡಿ. ಇದು ಹೊಟ್ಟೆಯಲ್ಲಿ ವಾಯು ಉತ್ಪತ್ತಿಯನ್ನು ತಡೆಯಲು ಪರಿಪೂರ್ಣ ಕ್ರಮವಾಗಿದೆ.

ಕೊಬ್ಬಿನಿಂದ ಕೂಡಿದ ಆಹಾರಕ್ಕೆ ‘ಗುಡ್ ಬೈ’ ಹೇಳಿ

ಕೊಬ್ಬು ಪಚನಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಹೊಟ್ಟೆಯಲ್ಲಿ ವಾಯು ಉತ್ಪತ್ತಿಯಾಗುವಂತೆ ಮಾಡುತ್ತದೆ. ಹೀಗಾಗಿ ಕೊಬ್ಬಿನಿಂದ ಕೂಡಿದ ಆಹಾರದಿಂದ ದೂರವುಳಿಯುವುದು ಹೊಟ್ಟೆಯುಬ್ಬರವನ್ನು ನಿವಾರಿಸಲು ಸರಳ ಉಪಾಯವಾಗಿದೆ.

ವಾಯುವನ್ನುಂಟು ಮಾಡುವ ಆಹಾರ ಬೇಡ

ನಿಮ್ಮ ಊಟದ ಬಟ್ಟಲಿನಲ್ಲಿ ವಾಯುವನ್ನುಂಟು ಮಾಡುವ ಆಹಾರ ಇರದಂತೆ ನೋಡಿಕೊಳ್ಳಿ. ಅವರೆ, ಬೇಳೆ, ಕ್ಯಾಬೇಜ್, ಮೂಲಂಗಿಯಂತಹ ಆಹಾರಗಳನ್ನು ಸೇವಿಸ ಬೇಡಿ.

ಕಾರ್ಬೋರೇಟೆಡ್ ಪಾನೀಯಗಳಿಂದ ದೂರವಿರಿ

ಸೋಡಾದಂತಹ ಅನಿಲೀಕೃತ ಪಾನೀಯಗಳ ಸೇವನೆಯಿಂದ ಅವು ಬಿಡುಗಡೆ ಗೊಳಿಸುವ ಅಂಗಾರಾಮ್ಲವು ಹೊಟ್ಟೆಯಲ್ಲಿ ವಾಯು ಉತ್ಪತ್ತಿಯಾಗಲು ಕಾರಣವಾಗು ತ್ತದೆ. ನಿಯಮಿತವಾಗಿ ಈ ಪಾನೀಯಗಳ ಸೇವನೆ ವಾಯು ಸಮಸ್ಯೆಯನ್ನು ಹೆಚ್ಚಿಸುತ್ತದೆ.

ಧೂಮ್ರಪಾನ ಬೇಡ

ಸಿಗರೇಟ್, ಬೀಡಿ ಇತ್ಯಾದಿಗಳನ್ನು ಸೇದುವಾಗ ನಾವು ಉಸಿರಾಟದ ಜೊತೆಗೆ ಗಾಳಿಯನ್ನೂ ನುಂಗುತ್ತಿರುತ್ತೇವೆ. ಹೊಟ್ಟೆ ಉಬ್ಬರಿಕೆಗೆ ಇದು ಪ್ರಮುಖ ಕಾರಣವಾಗಿದೆ. ಆದರೆ ದುರಂತವೆಂದರೆ ಹೆಚ್ಚಿನ ಧೂಮ್ರಪಾನಿಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ.

ಊಟಕ್ಕೆ ಮುನ್ನ ನೀರು ಸೇವನೆ

ಊಟಕ್ಕೆ ಕುಳಿತುಕೊಳ್ಳುವ ಮುನ್ನ ಕನಿಷ್ಠ ಒಂದು ಅಥವಾ ಅರ್ಧ ಗ್ಲಾಸ್ ನೀರು ಸೇವಿಸಿ. ಇದು ನಾವು ಸೇವಿಸಿದ ಆಹಾರ ಪಚನ ವ್ಯವಸ್ಥೆಯಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ.

ಊಟ ಮತ್ತು ಮಾತು ಒಟ್ಟಿಗೆ ಬೇಡ

ಊಟ ಮಾಡುವಾಗ ಎಂದೂ ಮಾತನಾಡಲೇಬೇಡಿ. ಇದು ಪ್ರತಿಯೊಬ್ಬರೂ ತಿಳಿದು ಕೊಳ್ಳಬೇಕಾದ ಟೇಬಲ್ ಮ್ಯಾನರ್ಸ್‌ನ ಮೂಲಪಾಠವಾಗಿದೆ. ಊಟ ಮತ್ತು ಮಾತು ಜತೆಯಾಗಿ ಸಾಗುತ್ತಿದ್ದರೆ ಆಹಾರಕ್ಕಿಂತ ಹೆಚ್ಚು ಗಾಳಿ ಹೊಟ್ಟೆಯನ್ನು ಸೇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News