ಇನ್ನೂ 10,000 ರೊಹಿಂಗ್ಯರು ಮ್ಯಾನ್ಮಾರ್ ಗಡಿಯಲ್ಲಿ

Update: 2017-10-03 17:15 GMT

ಯಾಂಗನ್ (ಮ್ಯಾನ್ಮಾರ್), ಅ. 3: ಮ್ಯಾನ್ಮಾರ್‌ನಲ್ಲಿ ಆಹಾರ ಪೂರೈಕೆಯಲ್ಲಿ ಕಡಿತ ಹಾಗೂ ತಮ್ಮ ವಿರುದ್ಧದ ದ್ವೇಷ ಸಾಧನೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರೊಹಿಂಗ್ಯ ಮುಸ್ಲಿಮರ ಸಾಮೂಹಿಕ ವಲಸೆ ಮುಂದುವರಿದಿದ್ದು, ಮಂಗಳವಾರ ಬಾಂಗ್ಲಾದೇಶದೊಂದಿಗಿನ ಮ್ಯಾನ್ಮಾರ್ ಗಡಿಯಲ್ಲಿ 10,000ಕ್ಕೂ ಅಧಿಕ ನಿರಾಶ್ರಿತರು ಜಮಾಯಿಸಿದ್ದಾರೆ ಎಂದು ಮ್ಯಾನ್ಮಾರ್ ಮಾಧ್ಯಮಗಳು ವರದಿ ಮಾಡಿವೆ.

ಆಗಸ್ಟ್ 25ರಂದು ಹೊಸದಾಗಿ ಸಂಭವಿಸಿದ ಹಿಂಸಾಚಾರದ ಬಳಿಕ, ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ಈಗಾಗಲೇ 5 ಲಕ್ಷಕ್ಕೂ ಅಧಿಕ ರೊಹಿಂಗ್ಯ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಇದು ರೊಹಿಂಗ್ಯ ಮುಸ್ಲಿಮರನ್ನು ವಾಪಸ್ ಕರೆಸಿಕೊಳ್ಳುವ ಮ್ಯಾನ್ಮಾರ್‌ನ ಭರವಸೆಯ ಸಾಚಾತನವನ್ನು ಸಂಶಯದಿಂದ ನೋಡುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News