×
Ad

ಕಿಮ್ ಜಾಂಗ್ ನಾಮ್ ಹತ್ಯೆ ಪ್ರಕರಣ: ಆರೋಪಿ ಮಹಿಳೆಯರ ಬಟ್ಟೆಯಲ್ಲಿ ರಾಸಾಯನಿಕ ಪತ್ತೆ

Update: 2017-10-05 22:27 IST

ಶಾ ಆಲಂ (ಮಲೇಶ್ಯ), ಅ. 5: ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್‌ರ ಸಹೋದರ ಕಿಮ್ ಜಾಂಗ್ ನಾಮ್‌ರ ಹತ್ಯೆಯಲ್ಲಿ ಬಳಸಲಾದ ನರ್ವ್ ಏಜಂಟ್‌ನ ತುಣುಕುಗಳು ಇಬ್ಬರು ಆರೋಪಿ ಮಹಿಳೆಯರ ಬಟ್ಟೆಗಳಲ್ಲಿ ಪತ್ತೆಯಾಗಿವೆ ಎಂದು ರಾಸಾಯನಿಕ ಪರಿಣತರೊಬ್ಬರು ಗುರುವಾರ ಸಾಕ್ಷ ನುಡಿದಿದ್ದಾರೆ.

 ಮಲೇಶ್ಯದ ರಾಜಧಾನಿ ಕೌಲಾಲಂಪುರದ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಕಿಮ್ ಜಾಂಗ್ ನಾಮ್‌ರ ಮೇಲೆ ಇಬ್ಬರು ಮಹಿಳೆಯರು 'ವಿಎಕ್ಸ್' ಎಂಬ ನರ್ವ್ ಏಜಂಟನ್ನು ಪ್ರಯೋಗಿಸಿದ್ದರು.

ಇಂಡೋನೇಶ್ಯದ ಸೀಟಿ ಐಸ್ಯಾ ಮತ್ತು ವಿಯೆಟ್ನಾಮ್‌ನ ಡೋನ್ ತಿ ಹುವೊಂಗ್ ಮಾರಕ ವಿಕ್ಸ್ ರಾಸಾಯನಿಕವನ್ನು ಕಿಮ್‌ರ ಮುಖಕ್ಕೆ ಲೇಪಿಸಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಶೀತಲ ಸಮರದ ಮಾದರಿಯಲ್ಲಿ ನಡೆದ ಘಟನೆ ಜಗತ್ತನ್ನು ಬೆಚ್ಚಿಬೀಳಿಸಿತ್ತು. ಈ ರಾಸಾಯನಿಕವನ್ನು ವಿಶ್ವಸಂಸ್ಥೆಯು ಸಾಮೂಹಿಕ ನಾಶದ ಅಸ್ತ್ರ ಎಂಬುದಾಗಿ ಘೋಷಿಸಿತ್ತು.

ದಾಳಿ ನಡೆದ 20 ನಿಮಿಷಗಳಲ್ಲೇ ನಾಮ್ ಯಾತನಾದಾಯಕ ಸಾವನ್ನು ಅನುಭವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News