×
Ad

ದಿಲ್ಲಿ ಶಾಲೆಯಲ್ಲಿ 6 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ

Update: 2017-10-05 23:47 IST

ಹೊಸದಿಲ್ಲಿ, ಅ. 2: ದಕ್ಷಿಣ ದಿಲ್ಲಿಯ ಮಾಲ್ವಿಯಾ ನಗರ ಪ್ರದೇಶದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ 6 ವರ್ಷದ ಬಾಲಕಿಗೆ ಮೇಲೆ 23 ವರ್ಷದ ನೌಕರ ಲೈಂಗಿಕ ಕಿರುಕುಳ ನೀಡಿದ ಘಟನೆ ಬುಧವಾರ ಅಪರಾಹ್ನ ಬೆಳಕಿಗೆ ಬಂದಿದೆ.

  1ನೇ ತರಗತಿ ವಿದ್ಯಾರ್ಥಿನಿ ತರಗತಿ ಮಧ್ಯೆ ವಾಶ್ ರೂಮ್‌ಗೆ ಬಂದಾಗ ನೌಕರ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಶಾಲೆಗೆ ಕೆಲಸಕ್ಕೆ ಸೇರಿಕೊಂಡ ನೌಕರನನ್ನು ಬಂಧಿಸಲಾಗಿದೆ.

 ಬಾಲಕಿ ಈ ವಿಷಯದ ಬಗ್ಗೆ ತನ್ನ ಅಧ್ಯಾಪಕಿಯಲ್ಲಿ ಏನನ್ನೂ ಹೇಳಿಲ್ಲ. ಆದರೆ, ಮನೆಗೆ ತೆರಳಿದ ಮೇಲೆ ತಾಯಿಯಲ್ಲಿ ಎಲ್ಲ ವಿಚಾರ ಹೇಳಿದ್ದಾಳೆ. ಕೂಡಲೇ ತಾಯಿ ಶಾಲೆಗೆ ಧಾವಿಸಿ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಅಧ್ಯಾಪಕಿಗೆ ಮಾಹಿತಿ ನೀಡಿದ್ದಾರೆ. ಅನಂತರ ಅಧ್ಯಾಪಕಿಯರು ಆರೋಪಿ ರಾಕೇಶ್ ಎಂಬಾತನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷದಿಂದ ಪುರುಷರು ಮಹಿಳಾ ಶೌಚಾಲಯ ಪ್ರವೇಶಿಸುತ್ತಿದ್ದಾರೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News