ಭಾರತಕ್ಕೆ ನೇಪಾಳ ರಾಯಭಾರಿ ರಾಜೀನಾಮೆ
Update: 2017-10-06 22:29 IST
ಕಠ್ಮಂಡು, ಅ. 6: ಭಾರತಕ್ಕೆ ನೇಪಾಳದ ರಾಯಭಾರಿ ದೀಪ್ ಕುಮಾರ್ ಉಪಾಧ್ಯಾಯ ಶುಕ್ರವಾರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಅವರು ಈ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಉಪಾಧ್ಯಾಯ ತನ್ನ ರಾಜೀನಾಮೆಯನ್ನು ಉಪ ಪ್ರಧಾನಿ ಕೃಷ್ಣ ಬಹಾದುರ್ ಮಹಾರರಿಗೆ ಸಲ್ಲಿಸಿದರು ಹಾಗೂ ತನಗೆ ‘ಸಾಮಾಜಿಕ ಜೀವನಕ್ಕೆ ಮರಳುವ’ ಇಚ್ಛೆಯಿದೆ ಎಂದು ಹೇಳಿದರು.