ಭಾರತೀಯ ಹಡಗನ್ನು ಕಡಲ್ಗಳ್ಳರಿಂದ ರಕ್ಷಿಸಿದ ಐಎನ್‌ಎಸ್ ತ್ರಿಶೂಲ್
Update: 2017-10-06 22:35 IST
ಗಲ್ಫ್ ಆಫ್ ಏಡನ್, ಅ. 6: ಅರಬ್ಬಿ ಸಮುದ್ರದದಲ್ಲಿರುವ ಏಡನ್ ಕೊಲ್ಲಿಯಲ್ಲಿ ಭಾರತೀಯ ಸರಕು ಹಡಗೊಂದನ್ನು ದೋಚುವ ಕಡಲ್ಗಳ್ಳಯ ಪ್ರಯತ್ನವನ್ನು ಭಾರತೀಯ ನೌಕಾಪಡೆಯ ಐಎನ್‌ಎಸ ತ್ರಿಶೂಲ್ ನೌಕೆ ಶುಕ್ರವಾರ ವಿಫಲಗೊಳಿಸಿದೆ.
ಭಾರತೀಯ ಹಡಗು ಎಂವಿ ಜಗ್ ಅಮರ್‌ನ್ನು ದೋಚುವ ಯತ್ನವನ್ನು ಮಧ್ಯಾಹ್ನ 12:30ಕ್ಕೆ ಮಾಡಲಾಯಿತು. ಆಗ ಕಡಲ್ಗಳ್ಳತನ ನಿವಾರಣೆಗಾಗಿ ಈ ವಲಯದಲ್ಲಿ ನಿಯೋಜಿಸಲ್ಪಟ್ಟಿರುವ ಐಎನ್‌ಎಸ್ ತ್ರಿಶೂಲ್ ತಕ್ಷಣ ಮಧ್ಯಪ್ರವೇಶಿಸಿತು ಎಂದು ನೌಕಾಪಡೆ ವಕ್ಗಾರ ಕ್ಯಾಪ್ಟನ್ ಡಿ.ಕೆ. ಶರ್ಮ ಹೇಳಿದರು.
85,000 ಟನ್ ಸರಕು ಹಡಗಿನ ದರೋಡೆಗೆ ಮುಂದಾಗಿದ್ದ 12 ಕಡಲ್ಗಳ್ಳರ ತಂಡ ಪರಾರಿಯಾಯಿತು.