ಅಮೆರಿಕ: ಚಂಡಮಾರುತಗಳಿಂದಾಗಿ 1.11 ಲಕ್ಷ ಉದ್ಯೋಗ ನಷ್ಟ
Update: 2017-10-07 22:55 IST
ವಾಶಿಂಗ್ಟನ್, ಅ. 7: ಹಾರ್ವೆ ಮತ್ತು ಇರ್ಮಾ ಚಂಡಮಾರುತಗಳು ಕಾರ್ಮಿಕ ಮಾರುಕಟ್ಟೆಯ ಮೇಲೆ ಭಾರೀ ಆಘಾತ ಉಂಟುಮಾಡಿವೆ ಹಾಗೂ ಸೆಪ್ಟಂಬರ್‌ನಲ್ಲಿ ಮನರಂಜನೆ ಮತ್ತು ಆತಿಥ್ಯ ಕ್ಷೇತ್ರದಲ್ಲಿ 1,11,000 ಉದ್ಯೋಗಗಳು ನಷ್ಟವಾಗಿವೆ ಎಂದು ಕಾರ್ಮಿಕ ಇಲಾಖೆ ಶುಕ್ರವಾರ ತನ್ನ ಸೆಪ್ಟಂಬರ್ ಉದ್ಯೋಗ ವರದಿಯಲ್ಲಿ ಹೇಳಿದೆ.
ಚಂಡಮಾರುತಗಳು ಅಪ್ಪಳಿಸಿರುವ ಫ್ಲೋರಿಡ ಮತ್ತು ಟೆಕ್ಸಾಸ್ ರಾಜ್ಯಗಳಲ್ಲಿ ಹೊಟೇಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಉದ್ಯೋಗ ನಷ್ಟವಾಗಿದೆ ಎಂದು ಇಲಾಖೆ ಹೇಳಿದೆ.