×
Ad

ಸೊರಬ: ಬಲೆಗೆ ಸಿಲುಕಿದ ಚಿರತರ ರಕ್ಷಣೆ

Update: 2017-10-08 00:19 IST

ಸೊರಬ, ಅ.7: ತಾಲೂಕಿನ ಚಂದ್ರಗುತ್ತಿ ಹೋಬಳಿಯ ಕೆಂಚಿಕೊಪ್ಪ-ಈಡೂರು ಗ್ರಾಮದ ಸರ್ವೇ ನಂ.35 ರಲ್ಲಿ ಅರಣ್ಯ ಪ್ರದೇಶದ ಅಂಚಿನಲ್ಲಿ ಕಾಡು ಪ್ರಾಣಿಗಳು ಬೆಳೆ ಹಾಳುಮಾಡಬಾರದೆಂದು ಹಾಕಿದ್ದ ಬಲೆಗೆ ಚಿರತೆಯೊಂದು ಸಿಕ್ಕಿಬಿದ್ದ ಘಟನೆ ಶನಿವಾರ ನಡೆದಿದೆ.

 ಬಲೆಗೆ ಸಿಕ್ಕಿಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ರಕ್ಷಿಸಿದ್ದಾರೆ. ಇದು ಅಂದಾಜು ಸುಮಾರು 5 ವರ್ಷ ಪ್ರಾಯದ ಗಂಡು ಚಿರತೆಯಾಗಿದೆ. ಶಿವಮೊಗ್ಗ ವನ್ಯಜೀವಿ ವಿಭಾಗದ ಅರವಳಿಕೆ ತಜ್ಞ ಡಾ. ವಿನಯ್ ಸಹಾಯದಿಂದ ಚಿರತೆಗೆ ಅರವಳಿಕೆ ಮದ್ದು ನೀಡಿ, ಚಿಕಿತ್ಸೆ ನೀಡಿ ಶಿವಮೊಗ್ಗದ ಲಯನ್ ಸಫಾರಿಗೆ ಕಳುಹಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದೆ.

ಡಿಎಫ್‌ಒ ಮೋಹನ್ ಗಂಗೊಳ್ಳಿ ನೇತೃತ್ವದಲ್ಲಿ ಎಸಿಎಫ್ ಶ್ರೀನಿವಾಸ ಎರಡೋಣಿ, ಆರ್‌ಎಫ್‌ಒ ಅಜಯ್‌ಕುಮಾರ್ ಹಾಗೂ ಸಿಬ್ಬಂದಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ

ಜಗ ದಗಲ