ಮಾಟಗಾತಿ ಎಂಬ ಹಣೆಪಟ್ಟಿ ಅಂಟಿಸಿ ನರಕಕ್ಕೆ ತಳ್ಳುವ ನಮೂನೆ

Update: 2017-10-08 18:24 GMT

ಇತ್ತೀಚೆಗೆ ನಡೆದ ದೆವ್ವ-ಬೇಟೆಯ ಎರಡು ಪ್ರಕರಣಗಳು ಮೂಢನಂಬಿಕೆಗಳ ತೀವ್ರತೆಯನ್ನು ಸ್ಪಷ್ಟಪಡಿಸಿವೆ: ಆಗಸ್ಟ್ 2ರಂದು ಅಜ್ಮೀರ್‌ನ ಕದೇರ ಹಳ್ಳಿಯಲ್ಲಿ 40ರ ಹರೆಯದ ದಲಿತ ಮಹಿಳೆಯೊಬ್ಬಳನ್ನು ದೆವ್ವಪೀಡಿತೆ ಎಂದು ಘೋಷಿಸಿ, ಅವಳನ್ನು ಬೆತ್ತಲೆಗೊಳಿಸಿ, ಕ್ರೂರವಾಗಿ ಥಳಿಸಿ, ಮಲ ತಿನ್ನುವಂತೆ ಅವಳನ್ನು ಬಲಾತ್ಕಾರಿಸಲಾಯಿತು. ಅವಳನ್ನು ಕೆಂಡದ ಮೇಲೆ ನಡೆಸಿ ಅವಳ ಕಣ್ಣುಗಳಿಗೆ ಕೆಂಡಗಳಿಂದ ತಿವಿಯಲಾಯಿತು.

ರಾಜಸ್ತಾನದ ಮೆವಾರ್‌ನಲ್ಲಿ ಪ್ರಭಾವೀ ಜಾಟ್ ಕುಟುಂಬವೊಂದು 75 ವರ್ಷ ವಯಸ್ಸಿನ ಮುದುಕಿಯೊಬ್ಬಳಿಗೆ ಮಾಟಗಾತಿ, ದೆವ್ವ ಹಿಡಿದವಳು ಎಂಬ ಹಣೆಪಟ್ಟಿ ಅಂಟಿಸಿ ಅವಳದ್ದೇ ಕೋಣೆಯಲ್ಲಿ ಅವಳನ್ನು ಬಂಧನದಲ್ಲಿಟ್ಟಿತ್ತು. ಕೊನೆಗೊಂದು ದಿನ ಆಗಸ್ಟ್ ತಿಂಗಳಲ್ಲಿ ಸರಕಾರದ ಅಧಿಕಾರಿಗಳ ತಂಡವೊಂದು ಆಕೆಯನ್ನು ಬಂಧನದಿಂದ ಬಿಡಿಸಿ ಬಚಾವ್ ಮಾಡಿತು. ಆಗ ಮಧ್ಯಯುಗದ ಶೈಲಿಯ ಮಾಟಗಾತಿ ಬೇಟೆಯ ಎಚ್-ಹಂಟಿಗನ್ ಕೊಳಕುಮುಖ ಬಹಿರಂಗವಾಯಿತು.

ಕಿಟಕಿಯಿಲ್ಲದ 10x10 ಅಳತೆಯ ಕೋಣೆಯಲ್ಲಿ 15 ದಿನಗಳನ್ನು ಕಳೆದಿದ್ದ ಸುನೀತಾ ದೇವಿ(ಹೆಸರು ಬದಲಾಯಿಸಲಾಗಿದೆ), ಜಾಟ್ ಸಮುದಾಯದ ಮನೆಯೊಂದರಿಂದ ಶಾಲೆಗೆ ಹೋಗುತ್ತಿದ್ದ ಹುಡುಗಿಯೊಬ್ಬಳ ಅನಾರೋಗ್ಯಕ್ಕೆ ಕಾರಣವೆಂದು ಹೇಳಿ ಆಕೆಯನ್ನು ಕೋಣೆಯಲ್ಲಿ ಕೂಡಿಹಾಕಲಾಗಿತ್ತು. ಒಬ್ಬಂಟಿ ಭೋಪಾ(ಮಂತ್ರವಾದಿ) ಸುನೀತಾ ಒಬ್ಬಳು ದೆವ್ವಹಿಡಿದಾಕೆ, ಮಾಟಗಾತಿ ಎಂದು ಹೇಳಿದಳು. ಇದಕ್ಕೆ ಪ್ರತಿಕ್ರಿಯೆಯಾಗಿ ಆ ಜಾಟ್ ಕುಟುಂಬದ ಸದಸ್ಯರು ಆ ಹಳ್ಳಿಯಲ್ಲಿದ್ದ ಹಿಂದುಳಿದ ಡಾಲ್ ಸಮುದಾಯಕ್ಕೆ ಸೇರಿದ ಅವಳ ಏಕೈಕ ಮನೆಯ ಮೇಲೆ ದಾಳಿ ನಡೆಸಿ ಅವಳನ್ನು, ಅವಳ ಗಂಡನನ್ನು ಮತ್ತು ಅವಳ ಗಂಡು ಮಕ್ಕಳನ್ನು ಥಳಿಸಿದರು. ಇನ್ನೊಂದು ಪ್ರಕರಣದಲ್ಲಿ 65ರ ಹರೆಯದ ಲಕ್ಷ್ಮೀಬಾಯಿ (ಹೆಸರು ಬದಲಾಯಿಸಲಾಗಿದೆ) ಯನ್ನು, ಆಕೆ ಒಬ್ಬಳು ಮಾಟಗಾತಿಯೆಂದು ಅನುಮಾನಿಸಿ ಅವಳ ಸ್ವಂತ ಹಳ್ಳಿ ದರಿಬಾದಿಂದ ಬಲಾತ್ಕಾರಪೂರ್ವಕವಾಗಿ ಹೊರಗೆ ಅಟ್ಟಿಸಿ, ಆಕೆ 12 ವರ್ಷಗಳ ಕಾಲ ಭಿಲ್ವಾರದಲ್ಲಿ ವಾಸಿಸುವಂತೆ ಮಾಡಲಾಯಿತು. ಓರ್ವ ಸಮಾಜಭ್ರಷ್ಟೆಯಾಗಿ ತನ್ನ ಗಂಡನ ಜೊತೆ ಬದುಕುತ್ತಿರುವ ಆಕೆ 5 ಬಾರಿ ಗ್ರಾಮ ಪಂಚಾಯತ್ ಸಭೆಗೆ ಹಾಜರಾಗಿ ತನಗೆ ಅಂಟಿಸಿರುವ ಈ ಕಳಂಕದಿಂದ ಮುಕ್ತಿ ನೀಡಬೇಕೆಂದು ಬೇಡಿಕೊಂಡಳು. ಆದರೆ ಅವಳ ಬೇಡಿಕೆಯನ್ನು ನಿರಾಕರಿಸಲಾಯಿತು.

ಸಾಮಾಜಿಕ ಕಾರ್ಯಕರ್ತೆ ತಾರಾ ಅಹುಲಿವಾಲಿಯಾ ಕುಟುಕು(ಸ್ಟಿಂಗ್ ಆಪರೇಶನ್) ಕಾರ್ಯಾಚರಣೆಯೊಂದರ ಮೂಲಕ ‘ಭೋಪಾ’ಗಳ ಮಂತ್ರಮಾಟ ಆಚರಣೆಗಳನ್ನು ಬಹಿರಂಗಗೊಳಿಸಿದರು. ಆ ಬಳಿಕ ರಾಜಸ್ತಾನ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸುಮನ್ ಶರ್ಮಾರವರಲ್ಲಿ ತಮ್ಮ ಯಾತನೆಗಳನ್ನು ಹೇಳಿಕೊಳ್ಳಲು ಸುನೀತಾ ದೇವಿ ಮತ್ತು ಲಕ್ಷ್ಮೀಬಾಯಿ ಸೆಪ್ಟಂಬರ್ ಕೊನೆಯ ವಾರದಲ್ಲಿ ಜೈಪುರಕ್ಕೆ ಬಂದರು. ‘ಭೋಪಾ’ಗಳು ಮುಗ್ಧ ಮಹಿಳೆಯರಿಗೆ ನೀಡುತ್ತಿದ್ದ ಹಿಂಸೆ ಹಾಗೂ ಅವರ ವಿರುದ್ಧ ನಡೆಸುತ್ತಿದ್ದ ದೌರ್ಜನ್ಯಗಳು ಬೆಳಕಿಗೆ ಬಂದ ಬಳಿಕ, ರಾಜಸ್ತಾನದ ಭಿಲ್ವಾರಾ ಚಿತ್ತೋರ್‌ಗರ್, ರಾಜಸಮಂದ್ ಮತ್ತು ಉದಯಪುರದಲ್ಲಿ ನೂರಾರು ‘ಭೋಪಾ’ಗಳು ತಲೆಮರೆಸಿಕೊಂಡಿದ್ದಾರೆ.

ದೌರ್ಜನ್ಯ ಎಸಗುವಾಗಲೇ ಸಿಕ್ಕಿಬಿದ್ದರು: ‘ಬಾಲ್ ಇಮ್ರಾಮ್ ಮಹಿಳಾ ಚೇತನಾ ಸಮಿತಿ’ಯ ಅಧ್ಯಕ್ಷೆ ಅಹುಲುವಾಲಿಯವರ ನೇತೃತ್ವದಲ್ಲಿ ಸೆಪ್ಟಂಬರ್ ತಿಂಗಳಲ್ಲಿ ಕುಟುಕು ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆಯ ತಂಡದಲ್ಲಿ ಇಬ್ಬರು ಮಹಿಳಾ ಸ್ವಯಂಸೇವಕಿಯರು ಮತ್ತು ಪತ್ರಕರ್ತರ ಒಂದು ತಂಡವೂ ಇತ್ತು. ಹಳ್ಳಿಗರ ಹಾಗೆ ವೇಷತೊಟ್ಟು ಅವರು ಭೋಪಾಗಳನ್ನು ಸಂಪರ್ಕಿಸಿ ಕೆಲವು ಹೆಂಗಸರಿಗೆ ಚಿಕಿತ್ಸೆ ಮಾಡಬೇಕಾಗಿದೆ ಎಂದು ಹೇಳಿದರು. ‘ಮಂತ್ರವಾದಿ’ಗಳು (‘ಭೋಪಾ’ಗಳು) ಆ ಹೆಂಗಸರಿಗೆ ದೆವ್ವ, ಪಿಶಾಚಿ ಹಿಡಿದಿದೆ ಎಂದು ಹೇಳಿ, ತಮ್ಮ ದೆವ್ವ ಬಿಡಿಸುವ ಕೆಲಸ ಆರಂಭಿಸಿದರು. ಆಗ ಕಾರ್ಯಾಚರಣೆಯ ತಂಡ ಅವರ ಭೂತಪ್ರೇತ ಬಿಡಿಸುವ ವಿಧಿವಿಧಾನಗಳಲ್ಲಿ ಆಚರಣೆಗಳನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡಿತು.

ಅವರ ದೆವ್ವ ಬಿಡಿಸುವ ಆಚರಣೆಗಳಲ್ಲಿ ದೆವ್ವ ಹಿಡಿದಿದೆ ಎನ್ನಲಾದ ಮಹಿಳೆಯರ ಕೂದಲನ್ನು ಕ್ರೂರವಾಗಿ ಎಳೆಯಲಾಗುತ್ತದೆ. ಆ ಮಹಿಳೆಯರಿಗೆ ಕಸಬರಿಕೆಯಿಂದ ಹೊಡೆಯಲಾಗುತ್ತದೆ. ಪೊರಕೆಯಷ್ಟೇ ಅಲ್ಲದೆ ಕಬ್ಬಿಣದ ರಾಡ್‌ನಿಂದಲೂ ಥಳಿಸಲಾಗುತ್ತದೆ, ಕಟಿಂಗ್ ಪ್ಲಯರ್‌ಗಳಿಂದಲೂ ಅವರನ್ನು ಹಿಂಸಿಸಲಾಗುತ್ತದೆ. ಅವರನ್ನು ದೆವ್ವದಿಂದ ಬಿಡುಗಡೆಗೊಳಿಸುವಂತೆ ಕೋರಿ ಅರ್ಥವಾಗದ ಪದಗಳನ್ನು ಪಠಿಸುತ್ತ ಅದರ ಮುಂದೆ ನರ್ತಿಸಲಾಗುತ್ತದೆ. ಜುಯ್ರೆ ಕಲ್‌ಬೇಲಿಯಾ ಎಂಬ ಹೆಸರಿನ ಓರ್ವ ಮಂತ್ರವಾದಿ (ಮಹಿಳಾ ‘ಭೋಫಾ’ಳು) ಬಣ್ಣಬಣ್ಣದ ಉಡುಪು ತೊಟ್ಟಿದ್ದಳು. ಅವಳು ಓರ್ವ ಸ್ವಯಂಸೇವಕಿ ಯೊಡನೆ ಸಿಗರೆಟ್ ನೀಡುವಂತೆ ಬೇಡಿಕೆ ಇಟ್ಟಳು ಮತ್ತು ಆ ಸ್ವಯಂಸೇವಕಿಯನ್ನು ಒಂದು ಹೊಗೆ-ಬೆಂಕಿಯ ಬಳಿಗೆ ಎಳೆದೊಯ್ದಳು. ಬಳಿಕ ಆ ಮಂತ್ರವಾದಿಯು ಸ್ವಯಂಸೇವಕಿಯ ಕುತ್ತಿಗೆಗೆ ಚೂರಿಯೊಂದನ್ನು ಇಟ್ಟು, ‘ಅವಳ ದೇಹದಲ್ಲಿ’ ಅಡಗಿ ಕುಳಿತಿರುವ ದೆವ್ವವನ್ನು ಬೆದರಿಸಿದಳು.

ಸುನೀತಾದೇವಿಯ ಮನೆಯ ಮೇಲೆ ದಾಳಿ ನಡೆಸಿದವರನ್ನು ರಾಜಸ್ತಾನದ ಪ್ರಿವೆನ್ಶನ್ ಆಫ್ ಎಚ್-ಹಂಟಿಂಗ್ ಆ್ಯಕ್ಟ್ 2015ರ ಪ್ರಕಾರ ಬಂಧಿಸಲಾಯಿತು. ಆದರೆ ಅವರು ಜಾಮೀನು ಪಡೆದು ಹೊರಬಂದರು. ದೆವ್ವ-ಬೇಟೆ ತಡೆ ಕಾಯ್ದೆಯನ್ನು ಜಾರಿಗೊಳಿಸಿರುವ ಐದನೆ ರಾಜ್ಯ ರಾಜಸ್ತಾನ. ಆದರೆ 2005ರಿಂದ ಇಂದಿನವರೆಗೆ ದಾಖಲಾದ 86 ಪ್ರಕರಣಗಳಲ್ಲಿ ಒಂದೇ ಒಂದು ಪ್ರಕರಣದಲ್ಲಿ ಕೂಡ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ . ಈ 86ರಲ್ಲಿ ಮೂರು ಪ್ರಕರಣಗಳಲ್ಲಿ ಕೊಲೆಯ ಆಪಾದನೆಗಳು ಕೂಡ ಒಳಗೊಂಡಿವೆ, ಎನ್ನುತ್ತಾರೆ ಅಹುಲುವಾಲಿಯಾ.

 ಸಂತ್ರಸ್ತ ಮಹಿಳೆಯರಿಗಾಗಿ 35ವರ್ಷಗಳಿಂದ ಕೆಲಸ ಮಾಡುತ್ತಿರುವ ಚೇತನಾ ಸಮಿತಿಯ ಅಧ್ಯಕ್ಷೆ ಅಹುಲುವಾಲಿಯಾ ಹೇಳಿರುವಂತೆ, ಮಹಿಳೆಯರ ದೇಹದೊಳಕ್ಕೆ ದೆವ್ವಗಳು ಪ್ರವೇಶಿಸುತ್ತವೆ ಎಂಬ ಮೂಢನಂಬಿಕೆಯನ್ನಾಧರಿಸಿದ ಈ ದೆವ್ವ ಬಿಡಿಸುವ ಆಚರಣೆ ಹೆಚ್ಚಾಗಿ ಮೆವಾರ್ ಪ್ರದೇಶದಲ್ಲಿ ಕಂಡುಬರುತ್ತದೆ.

60ರ ಹರೆಯದ ಕಾರ್ಯಕರ್ತೆ ಅಹುಲುವಾಲಿಯಾ ಇನ್ನೊಂದು ವಿಷಯವನ್ನು ಬಯಲುಮಾಡಿದ್ದಾರೆ: ದೆವ್ವಹಿಡಿದಿದೆ ಎಂದು ಘೋಷಿಸಿ, ಆ ಬಳಿಕ ಮಹಿಳೆಯರನ್ನು ಥಳಿಸಿ, ಅವರ ವಿರುದ್ಧ ದೌರ್ಜನ್ಯ ಎಸಗಿ ಅಥವಾ ಒಮ್ಮಾಮ್ಮೆ ಅವರನ್ನು ಕೊಂದು ನಂತರ, ‘ಭೋಪಾ’ಗಳು, ದೌರ್ಜನ್ಯಕ್ಕೊಳಗಾದ ಮಹಿಳೆಯ ಸಂಬಂಧಿಕರು ಮತ್ತು ನೆರೆಹೊರೆಯವರು ಆ ಮಹಿಳೆಯರ ಆಸ್ತಿಕೊಳ್ಳೆ ಹೊಡೆಯಲು ಮುಂದಾಗುತ್ತಾರೆ. ಇಷ್ಟೇ ಅಲ್ಲ, ಹೀಗೆ ದೆವ್ವ ಪೀಡಿತರೆಂದು ಹಣೆಪಟ್ಟಿ ಅಂಟಿಸಲಾಗುವ ಮಹಿಳೆಯರಲ್ಲಿ ಬಹುಪಾಲು ಎಲ್ಲ ಮಹಿಳೆಯರೂ ದಲಿತರು, ಬಡವರು ಮತ್ತು ವಿಧವೆಯರು. ತಥಾಕಥಿತ ದೆವ್ವ-ವೈದ್ಯೆಯರ ಪಾತ್ರವು ಕುಟುಕು ಕಾರ್ಯಾಚರಣೆಯ ಬಳಿಕ ಬಯಲಾದಾಗ, ನಾಗರಿಕ ಸಮಾಜ ಪೊಲೀಸರ ನಿಷ್ಕ್ರಿಯೆಯ ಬಗ್ಗೆ ಆಕ್ರೋಶಗೊಂಡಿತು. ಆಗ, ಕ್ರಿಮಿನಲ್ ಪ್ರೊಸೀಸರ್ ಕೋಡ್‌ನ 151ನೆ ಸೆಕ್ಟರ್ ಅನ್ವಯ ಏಳುಮಂದಿ ದೆವ್ವವೈದ್ಯೆಯರನ್ನು ಒಂದು ರಾತ್ರಿಯ ಮಟ್ಟಿಗೆ ಜೈಲಿನಲ್ಲಿ ಬಂಧಿಸಿಟ್ಟು, ಮರುದಿನ ಅವರಿಗೆ ಎಚ್ಚರಿಕೆ ನೀಡಿ ಅವರನ್ನು ಬಿಡುಗಡೆ ಮಾಡಲಾಯಿತು.

 ನಾಗರಿಕ ಹಕ್ಕು ಸಂಘಟನೆಗಳ ಪ್ರತಿಭಟನೆಯ ಬಳಿಕ, ಪೊಲೀಸರು ಕಾರ್ಯಾಚರಣೆ ನಡೆಸಿದರು. ಅಹುಲುವಾಲಿಯಾ ದೂರು ನೀಡಿದನ್ನು ಅನುಸರಿಸಿ, ತಾನು ಒಂಬತ್ತು ದೇವತೆಗಳ ಅವತಾರ ಎನ್ನುವ ಜುಮಿರಿ ಕಬೆಲಿಯಾಳ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು. ಅವಳ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದರು.

ದೆವ್ವ-ಬೇಟೆ ಕಾಯ್ದೆಯ ಸೆಕ್ಷನ್8ರ ಪ್ರಕಾರ ರಾಜ್ಯಸರಕಾರವು, ಒಂದು ಪ್ರದೇಶದಲ್ಲಿ ಮಹಿಳೆಯರ ವಿರುದ್ಧ ದೆವ್ವಪೀಡಿತೆ ಎಂಬ ನೆಲೆಯಲ್ಲಿ ದೌರ್ಜನ್ಯ ಎಸಗಲು ಸಹಕರಿಸುವ ಅಥವಾ ದೌರ್ಜನ್ಯ ಕೃತ್ಯದಲ್ಲಿ ಭಾಗವಹಿಸುವ ಆ ಪ್ರದೇಶದ ನಿವಾಸಿಗಳಿಗೆ, ಸರಕಾರವು ಒಂದು ಸಾಮೂಹಿಕ ದಂಡ ವಿಧಿಸಬಹುದಾಗಿದೆ. ಈ ದಂಡದ ಮೊತ್ತವನ್ನು ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ ನೀಡಲು ಬಳಸಬೇಕು. ಆದರೆ ಇಷ್ಟರವರೆಗೆ ಇಂತಹ ಯಾವ ದಂಡವನ್ನು ವಿಧಿಸಲಾಗಿಲ್ಲ.

 ಇತ್ತೀಚೆಗೆ ನಡೆದ ದೆವ್ವ-ಬೇಟೆಯ ಎರಡು ಪ್ರಕರಣಗಳು ಮೂಢನಂಬಿಕೆಗಳ ತೀವ್ರತೆಯನ್ನು ಸ್ಪಷ್ಟಪಡಿಸಿವೆ: ಆಗಸ್ಟ್ 2ರಂದು ಅಜ್ಮೀರ್‌ನ ಕದೇರ ಹಳ್ಳಿಯಲ್ಲಿ 40ರ ಹರೆಯದ ದಲಿತ ಮಹಿಳೆಯೊಬ್ಬಳನ್ನು ದೆವ್ವಪೀಡಿತೆ ಎಂದು ಘೋಷಿಸಿ, ಅವಳನ್ನು ಬೆತ್ತಲೆಗೊಳಿಸಿ, ಕ್ರೂರವಾಗಿ ಥಳಿಸಿ, ಮಲ ತಿನ್ನುವಂತೆ ಅವಳನ್ನು ಬಲಾತ್ಕಾರಿಸಲಾಯಿತು. ಅವಳನ್ನು ಕೆಂಡದ ಮೇಲೆ ನಡೆಸಿ ಅವಳ ಕಣ್ಣುಗಳಿಗೆ ಕೆಂಡಗಳಿಂದ ತಿವಿಯಲಾಯಿತು. ಪರಿಣಾಮವಾಗಿ ಅವಳು ಕುರುಡಿಯಾದಳು. ದೌರ್ಜನ್ಯದಿಂದಾಗಿ ಅವಳು ಸತ್ತ ಬಳಿಕ, ಅಪಾದಿತರು ‘‘ತಮ್ಮ ಪಾಪ ಪರಿಹಾರಕ್ಕಾಗಿ’’ ಪುಷ್ಕರದ ಪವಿತ್ರಕೊಳದಲ್ಲಿ ಮುಳುಗು ಹಾಕಿ ಹಸುಗಳಿಗೆ ಮೇವು ತಿನಿಸುವಂತೆ ಸ್ಥಳೀಯ ಪಂಚಾಯತು ಹೇಳಿತು. ಸೆಪ್ಟಂಬರ್ 23ರಂದು ಉದಯಪುರ ಜಿಲ್ಲೆಯಲ್ಲಿ 70ವರ್ಷದ ಮುದುಕಿಯೊಬ್ಬಳನ್ನು ದೆವ್ವಪೀಡಿತೆ ಎಂದು ಥಳಿಸಿ ಕೊಲ್ಲಲಾಯಿತು.

Writer - ಮುಹಮ್ಮದ್ ಇಕ್ಬಾಲ್

contributor

Editor - ಮುಹಮ್ಮದ್ ಇಕ್ಬಾಲ್

contributor

Similar News

ಜಗದಗಲ
ಜಗ ದಗಲ