ಮೂತ್ರಪಿಂಡ ಕಾಯಿಲೆಯನ್ನು ತಗ್ಗಿಸಬಲ್ಲ ಬೇಕಿಂಗ್ ಸೋಡಾ

Update: 2017-10-09 09:12 GMT

ಬೇಕಿಂಗ್ ಸೋಡಾ ಅಥವಾ ಅಡಿಗೆ ಸೋಡಾ ಒಂದು ರಾಸಾಯನಿಕ ಸಂಯುಕ್ತ ವಾಗಿದ್ದು, ಅಡಿಗೆಯಲ್ಲಿ ಬಳಸಲಾಗುವ ಅದು ಬಿಳಿಯ ಪುಡಿಯ ರೂಪದಲ್ಲಿರುತ್ತದೆ. ಕ್ಷಾರೀಯ ಮತ್ತು ಉಪ್ಪಿನ ರುಚಿಯನ್ನು ಹೊಂದಿರುವ ಬೇಕಿಂಗ್ ಸೋಡಾ ನಮ್ಮ ಆರೋಗ್ಯಕ್ಕೆ ಅತ್ಯಗತ್ಯವಾಗಿದೆ. ಅದು ನಮ್ಮ ಶರೀರದ ಪಿಎಚ್ ಮಟ್ಟಗಳನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.

 ಮೂತ್ರಪಿಂಡಗಳ ವೈಫಲ್ಯಕ್ಕೆ ಗುರಿಯಾಗಿರುವ ರೋಗಿಗಳ ಚಿಕಿತ್ಸೆಯಲ್ಲಿ ಬೇಕಿಂಗ್ ಸೋಡಾದ ಬಳಕೆಯು ಕಾಯಿಲೆಯು ಇನ್ನಷ್ಟು ಉಲ್ಬಣಗೊಳ್ಳುವುದನ್ನು ತಡೆಯುತ್ತದೆ ಎನ್ನುವುದು ಸಂಶೋಧನೆಯಿಂದ ಸಾಬೀತಾಗಿದೆ.

  ಸೋಡಿಯಂ ಬೈಕಾರ್ಬನೇಟ್ ನಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯವಾಗಿದೆ. ನಮ್ಮ ಶರೀರದಲ್ಲಿ ಮೇದೋಜೀರಕ ಗ್ರಂಥಿ ಮತ್ತು ಮೂತ್ರಪಿಂಡಗಳು ಸೋಡಿಯಂ ಬೈಕಾರ್ಬನೇಟ್‌ನ್ನು ಉತ್ಪಾದಿಸುತ್ತವೆ ಮತ್ತು ಇದು ಮೂತ್ರಪಿಮಡಗಳಿಗೆ ರಕ್ಷಣೆಯನ್ನು ನೀಡುತ್ತದೆ. ಈ ಎರಡು ಅಂಗಗಳು ಉತ್ಪಾದಿಸುವ ಸೋಡಿಯಂ ಬೈಕಾರ್ಬನೇಟ್‌ನ ಪ್ರಮಾಣದಲ್ಲಿ ಕೊರತೆಯುಂಟಾದರೆ ಆಮ್ಲಗಳು ಶೇಖರಗೊಳ್ಳುತ್ತವೆ ಮತ್ತು ಅವುಗಳನ್ನು ನಿವಾರಿಸುವುದು ನಮ್ಮ ಶರೀರಕ್ಕೆ ಕಷ್ಟವಾಗುತ್ತದೆ. ಈ ಹಂತದಲ್ಲಿ ಜೀವಕೋಶಗಳಿಗೆ ಹಾನಿಯಾಗುತ್ತದೆ ಮತ್ತು ಈ ಆಮ್ಲ ಶೇಖರಣೆಯನ್ನು ತೆಗೆದು ಹಾಕಲು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ. ಮೂತ್ರಪಿಂಡಗಳ ಸಮಸ್ಯೆಗಳನ್ನು ತಗ್ಗಿಸಲು ಬೇಕಿಂಗ್ ಸೋಡಾವನ್ನು ಬಳಸುವ ವಿಧಾನವಿಲ್ಲಿದೆ.

ಬೇಕಾಗುವ ಸಾಮಗ್ರಿಗಳು

►ಬೇಕಿಂಗ್ ಸೋಡಾ ಮತ್ತು ಉಪ್ಪು

 ಸೇವನೆ: ಮೊದಲ ದಿನ ಅರ್ಧ ಚಮಚ ಬೇಕಿಂಗ್ ಸೋಡಾವನ್ನು ನಾಲಗೆಯ ಕೆಳಗೆ ಇಟ್ಟುಕೊಳ್ಳಬೇಕು ಮತ್ತು ಅದು ಅಲ್ಲಿಯೇ ಕರಗಿ ಹೊಟ್ಟೆಯನ್ನು ಸೇರುತ್ತದೆ. ಎರಡನೇ ದಿನ ಅರ್ಧ ಚಮಚ ಬೇಕಿಂಗ್ ಸೋಡಾ ಮತ್ತು ಅರ್ಧ ಚಮಚ ಉಪ್ಪನ್ನು 1.5 ಲೀ.ನೀರಿನೊಂದಿಗೆ ಬೆರೆಸಿ, ಅದನ್ನು 2-3 ದಿನಗಳ ಕಾಲ ನಿಯಮಿತವಾಗಿ ಸೇವಿಸಿದರೆ ಮೂತ್ರಪಿಂಡ ಸಮಸ್ಯೆಗಳು ಕಡಿಮೆಯಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News