ಜನಾಂಗೀಯವಾದಿ ಜಾಹೀರಾತಿಗಾಗಿ ಕ್ಷಮೆ ಕೋರಿದ ಡವ್
Update: 2017-10-09 22:36 IST
ನ್ಯೂಯಾರ್ಕ್, ಅ. 9: ಕಪ್ಪು ಮಹಿಳೆಯೊಬ್ಬರು ಬಿಳಿಯಾಗಿ ಪರಿವರ್ತನೆಯಾಗುವುದನ್ನು ತೋರಿಸುವ ಜಾಹೀರಾತಿಗಾಗಿ ‘ಸೌಂದರ್ಯವರ್ಧಕ’ ಉತ್ಪನ್ನಗಳ ತಯಾರಿಕಾ ಕಂಪೆನಿ ಡವ್ ಕ್ಷಮೆ ಕೋರಿದೆ.
ಈ ಜಾಹೀರಾತು ಜನಾಂಗೀಯವಾದಿಯಾಗಿದೆ ಎಂಬುದಾಗಿ ಸಾಮಾಜಿಕ ತಾಣಗಳಲ್ಲಿ ಹಲವಾರು ಮಂದಿ ಟೀಕಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಡವ್ ಈ ಜಾಹೀರಾತನ್ನು ತನ್ನ ಫೇಸ್‌ಬುಕ್ ಪುಟದಿಂದ ಶನಿವಾರ ಅಳಿಸಿಹಾಕಿದೆ ಹಾಗೂ ‘‘ಬಿಳೆಯೇತರ ಮಹಿಳೆಯರನ್ನು ಬಿಂಬಿಸುವಾಗ ನಾವು ಸಾಕಷ್ಟು ಗಮನ ನೀಡಿಲ್ಲ’’ ಎಂದು ಅದು ಹೇಳಿದೆ.
ಈ ಜಾಹೀರಾತಿನಲ್ಲಿ ಕಪ್ಪು ಮಹಿಳೆಯೊಬ್ಬರು ತನ್ನ ಕಂದು ಅಂಗಿಯನ್ನು ತೆಗೆದಾಗ ಬಿಳಿ ಮಹಿಳೆಯಾಗಿ ಕಾಣುತ್ತಾರೆ ಹಾಗೂ ಬಳಿಕ ಅವರು ತನ್ನ ತಿಳಿ ಬಣ್ಣದ ಅಂಗಿಯನ್ನು ತೆಗೆದಾಗ ಬಿಳಿ ಮತ್ತು ಕಪ್ಪು ಎರಡೂ ಅಲ್ಲದ (ಕಂದು) ಬಣ್ಣದ ಮಹಿಳೆಯಾಗಿ ಗೋಚರಿಸುತ್ತಾರೆ.