×
Ad

ಕೈಕೊಟ್ಟ ಎಟಿಎಂ: ದೇವಾಲಯದ ಮುಂದೆ ಕುಳಿತ ರಶ್ಯಾ ಪ್ರವಾಸಿ ಮಾಡಿದ್ದೇನು ಗೊತ್ತೇ ?

Update: 2017-10-10 23:46 IST

ಕಾಂಚಿಪುರಂ, ಅ. 10: ತಮಿಳುನಾಡಿನ ಕಾಂಚಿಪುರಂ ನ ಶ್ರೀ ಕುಮಾರಕೊಟ್ಟಂ ದೇವಾಲಯದ ಪ್ರವೇಶ ದ್ವಾರದಲ್ಲಿ ರಶ್ಯನ್ ಪ್ರವಾಸಿಯೋರ್ವರು ಭಿಕ್ಷೆಗೆ ಕುಳಿತ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಸಮರ್ಪಕ ವೀಸಾ ಹಾಗೂ ಪಾಸ್‌ಪೋರ್ಟ್ ಹೊಂದಿದ್ದ ರಶ್ಯಾ ಪ್ರವಾಸಿ ಇವಾಂಗೆಲಿನ್ (24) ಸೆಪ್ಟಂಬರ್ 24ರಂದು ಭಾರತಕ್ಕೆ ಆಗಮಿಸಿದ್ದರು. ಮಂಗಳವಾರ ಬೆಳಗ್ಗೆ ಚೆನ್ನೈಗೆ ತಲುಪಿದ್ದರು.

  ನಗರದ ಕೆಲವು ದೇವಾಲಯಗಳಿಗೆ ಭೇಟಿ ನೀಡಿದ ಬಳಿಕ ಪಶ್ಚಿಮ ರಾಜಾ ಸೀಟ್‌ನಲ್ಲಿರುವ ಎಟಿಎಂಗೆ ಹಣ ತೆಗೆಯಲು ತೆರಳಿದರು. ಆದರೆ, ಪಿನ್ ನಂಬರ್ ಲಾಕ್ ಆದ ಕಾರಣಕ್ಕಾಗಿ ಅವರಿಗೆ ಹಣ ತೆಗೆಯಲು ಸಾಧ್ಯವಾಗಲಿಲ್ಲ. ಇದರಿಂದ ಖಿನ್ನರಾದ ಇವಾಂಗೆಲಿನ್ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಕುಳಿತು ಭಿಕ್ಷೆ ಬೇಡಿ ಹಣ ಗಳಿಸಲು ನಿರ್ಧರಿಸಿದರು. ಕೂಡಲೇ ಶಿವ ಕಾಂಚಿ ಠಾಣೆ ಪೊಲೀಸರು ಆಗಮಿಸಿ ಅವರನ್ನು ಠಾಣೆಗೆ ಕರೆದೊಯ್ದರು. ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ಇವಾಂಗೆಲಿನ್‌ಗೆ ಚೆನ್ನೈಗೆ ತೆರಳಲು ಹಣಕಾಸಿನ ನೆರವು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News