×
Ad

ಕೊರಿಯ ಪರ್ಯಾದ ದ್ವೀಪದಲ್ಲಿ ಅಮೆರಿಕದ ಬಾಂಬರ್‌ಗಳ ಹಾರಾಟ

Update: 2017-10-11 22:34 IST

ಸಿಯೋಲ್, ಅ. 11: ಉತ್ತರ ಕೊರಿಯ ವಿರುದ್ಧದ ಬಲಪ್ರದರ್ಶನದ ಭಾಗವಾಗಿ ಅಮೆರಿಕ ಮಂಗಳವಾರ ಎರಡು ಸೂಪರ್‌ಸಾನಿಕ್ ಬೃಹತ್ ಬಾಂಬರ್ ವಿಮಾನಗಳನ್ನು ಕೊರಿಯ ಪರ್ಯಾಯ ದ್ವೀಪದ ಮೇಲೆ ಹಾರಿಸಿದೆ.

ಜಪಾನ್ ಮತ್ತು ದಕ್ಷಿಣ ಕೊರಿಯಗಳೊಂದಿಗೆ ಅಮೆರಿಕ ಪ್ರಥಮ ಬಾರಿ ರಾತ್ರಿ ವೇಳೆಯ ಜಂಟಿ ವಿಮಾನ ಹಾರಾಟ ಕಸರತ್ತನ್ನು ಅಮೆರಿಕ ಮಂಗಳವಾರ ನಡೆಸಿತು. ಗ್ವಾಮ್‌ನಲ್ಲಿ ನೆಲೆ ಹೊಂದಿರುವ ಎರಡು ಬಿ-1ಬಿ ಲ್ಯಾನ್ಸರ್ ವಿಮಾನಗಳು ಈ ಸಂದರ್ಭದಲ್ಲಿ ಜಪಾನ್ ಸಮುದ್ರದ ಸಮೀಪ ಹಾರಾಟ ನಡೆಸಿದವು ಎಂದು ಯುಎಸ್ ಪೆಸಿಫಿಕ್ ಏರ್ ಫೋರ್ಸಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ನಮ್ಮ ಮಿತ್ರ ದೇಶಗಳೊಂದಿಗೆ ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ರಾತ್ರಿ ಹೊತ್ತು ಹಾರಾಟ ನಡೆಸುವುದು ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಗಳ ಮಹತ್ವದ ಸಾಧನೆಯಾಗಿದೆ. ಇದು ಈ ದೇಶಗಳ ವಿಮಾನ ಹಾರಾಟ ನೈಪುಣ್ಯವನ್ನು ಹೆಚ್ಚಿಸುತ್ತದೆ’’ ಎಂದು ಮೇಜರ್ ಪ್ಯಾಟ್ರಿಕ್ ಆ್ಯಪಲ್‌ಗೇಟ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News