ಯೂಸುಫ್ ಭರ್ಜರಿ ಸೆಂಚುರಿಗೆ ಇರ್ಫಾನ್ ಸಂಭ್ರಮಿಸಿದ್ದು ಹೀಗೆ..

Update: 2017-10-12 10:41 GMT

ಇಂದೋರ್,ಅ.12:ರಣಜಿ ಟ್ರೋಫಿಯ ಆರಂಭಿಕ ಮಧ್ಯಪ್ರದೇಶ ಹಾಗೂ ಇಂದೋರ್ ನಡುವಣ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ದೊಡ್ಡ ಸ್ಕೋರ್ ದಾಖಲಿಸಿದ ಬರೋಡಾ ನಂತರ ತಮ್ಮ ಪ್ರಮುಖ ಬ್ಯಾಟ್ಸ್ ಮ್ಯಾನ್ ಗಳನ್ನು ಕಳೆದುಕೊಂಡು  ಫಾಲೋ ಆನ್ ಭೀತಿಯಲ್ಲಿದ್ದಾಗ ಪಠಾಣ್ ಸಹೋದರರು ಜತೆಗೂಡಿ ಐದನೇ ವಿಕೆಟ್ ಗೆ 188 ರನ್ ಪೇರಿಸಿ  ತಮ್ಮ ತಂಡಕ್ಕೆ ಆಶಾವಾದ ಮೂಡಿಸಿದ್ದರು. ಆದರೂ ಅವರ ತಂಡ 302ರ ಮೊತ್ತಕ್ಕೆ ಆಲೌಟ್ ಆಗಿತ್ತು.

ಯೂಸುಫ್ ಪಠಾಣ್ ಮಾತ್ರ 125 ಬಾಲುಗಳಲ್ಲಿ 111 ರನ್ ಬಾರಿಸಿ  ತಂಡದ ಟಾಪ್ ಸ್ಕೋರರ್ ಆಗಿ ಬಿಟ್ಟಿದ್ದರು. ಸಹೋದರ ಇರ್ಫಾನ್ ಪಠಾಣ್ ಅವರಿಗೆ ಉತ್ತಮ ಬೆಂಬಲ ನೀಡಿದರೂ  80 ರನ್ನಿಗೇ ಔಟ್ ಆಗಿದ್ದರು. ಎರಡನೇ ಇನ್ನಿಂಗ್ಸ್ ನಲ್ಲೂ ಯೂಸುಫ್ ಅಜೇಯ ಶತಕ ಬಾರಿಸಿಯೇ ಬಿಟ್ಟರು. ಅವರ ತಂಡ ಪಂದ್ಯದಲ್ಲಿ ಸೋತರೂ ಯೂಸುಫ್ ಪಠಾಣ್ ಅವರ ಎರಡು ಶತಕಗಳು ಸ್ಮರಣೀಯವಾಗಿತ್ತು. ಸಹೋದರನ ಈ ಸಾಧನೆಯನ್ನು ಕೊಂಡಾಡಲು ಇರ್ಫಾನ್ ಟ್ವೀಟ್ ಒಂದನ್ನೂ ಮಾಡಿದರಲ್ಲದೆ  ಅವರು ಶತಕ ಬಾರಿಸಿದ ಕ್ಷಣದ  ವೀಡಿಯೋ ಕೂಡ ಪೋಸ್ಟ್ ಮಾಡಿದ್ದರು, ನಂತರ ಒಂದು ಅನಿಮೇಶನ್ ಚಿತ್ರದಲ್ಲಿ ಇರ್ಫಾನ್ ತಮ್ಮ ಬ್ಯಾಟ್ ಅನ್ನು ನಾನ್-ಸ್ಟ್ರೈಕರ್ಸ್ ಎಂಡ್ ನಲ್ಲಿರಿಸಿ ಯೂಸುಫ್ ಅವರತ್ತ ನಡೆದು ಅವರನ್ನು ಬಿಗಿದಪ್ಪಿದ್ದು ಕಾಣಿಸುತ್ತದೆ.

ಈ ವೀಡಿಯೋ ಅಂತೂ ಭಾರೀ ವೈರಲ್ ಆಗಿ ಬಿಟ್ಟಿದೆ. "ದ್ಯಾಟ್ಸ್ ಹೌ ದಿ ಬಿಗ್ ಮ್ಯಾನ್ ಗಾಟ್ ಟು ಹಿಸ್ 100,'' "ಬ್ಯಾಕ್ ಟು ಬ್ಯಾಕ್ 100 ಇನ್ ಅ ಗೇಮ್. ಔಟ್ ಸ್ಟ್ಯಾಂಡಿಂಗ್ ಬ್ಯಾಟಿಂಗ್ ಲಾಲಾ,'' ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ.

ತನ್ನ ಸೋದರ ಶತಕ ಬಾರಿಸಿದ್ದಕ್ಕೆ ಚಪ್ಪಾಳೆ ತಟ್ಟಿ ಇರ್ಫಾನ್ ಸಂಭ್ರಮಿಸಿದರೂ ಅವರ ಶತಕ ತಂಡಕ್ಕೆ ಪಂದ್ಯವನ್ನು ಗೆಲ್ಲಿಸಿ ಕೊಡಲಾಗಲಿಲ್ಲವೆಂಬುದು ನಿಜ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News