ವಕೀಲರಿಗೆ ‘ಹಿರಿಯ ನ್ಯಾಯವಾದಿ’ ಸ್ಥಾನ ನೀಡಲು ಸರ್ವೋಚ್ಚ ನ್ಯಾಯಾಲಯದಿಂದ ಕಠಿಣ ಮಾರ್ಗಸೂಚಿ

Update: 2017-10-12 15:24 GMT

ಹೊಸದಿಲ್ಲಿ,ಅ.12: ಯಾವ ವಕೀಲರಿಗೆ ಹಿರಿಯ ನ್ಯಾಯವಾದಿ ಎಂಬ ಸ್ಥಾನಮಾನ ನೀಡಬೇಕು ಎನ್ನುವುದನ್ನು ನಿರ್ಧರಿಸಲು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಶಾಶ್ವತ ಸಮಿತಿಯೊಂದನ್ನು ತಾನು ರಚಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಗುರುವಾರ ಹೇಳಿತು. ಐವರು ಸದಸ್ಯರ ಈ ಸಮಿತಿಯು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ಅತ್ಯಂತ ಹಿರಿಯ ನ್ಯಾಯಾಧೀಶರು ಹಾಗೂ ಸಂಬಂಧಿತ ವಕೀಲರ ಸಂಘದ ಪ್ರತಿನಿಧಿಯನ್ನೊಳಗೊಂಡಿರಲಿದೆ.

 ಹಿರಿಯ ನ್ಯಾಯವಾದಿ ಸ್ಥಾನಮಾನ ನೀಡುವುದು ಇನ್ನು ಮುಂದೆ ಕೇವಲ ನ್ಯಾಯಾಧೀಶರ ವಿವೇಚನಾಧಿಕಾರವಾಗಿರುವುದಿಲ್ಲ. ಉನ್ನತ ಸ್ಥಾನಮಾನಕ್ಕೆ ಅರ್ಹರೇ ಎನ್ನುವುದನ್ನು ನಿರ್ಧರಿಸಲು ಶಾಶ್ವತ ಸಮಿತಿಯು ವಕೀಲರ ಅರ್ಜಿಗಳನ್ನು ಪರಿಶೀಲಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠವು ಹೇಳಿತು.

ಸಮಿತಿಯು ಆಯ್ಕೆ ಮಾಡಿದ ವಕೀಲರ ಪಟ್ಟಿಯನ್ನು ಮತದಾನಕ್ಕಾಗಿ ನ್ಯಾಯಾಧೀಶರ ಪೂರ್ಣ ಮಂಡಳಿಗೆ ಸಲ್ಲಿಸಲಾಗುವುದು. ತಿರಸ್ಕೃತಗೊಂಡವರ ಹೆಸರುಗಳನ್ನು ಎರಡು ವರ್ಷಗಳ ವಿರಾಮದ ನಂತರವೇ ಮರುಪರಿಶೀಲಿಸಲಾಗುವುದು ಎಂದು ಪೀಠವು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News