ಕ್ರೀಡಾಪಟುಗಳು ಕಿಟೋನ್ ಸಾಲ್ಟ್ ಸೇವಿಸಕೂಡದು ಎನ್ನುವುದಕ್ಕೆ ಕಾರಣಗಳಿಲ್ಲಿವೆ

Update: 2017-10-13 09:10 GMT

ನೀವು ಕ್ರೀಡಾಪಟುವಾಗಿದ್ದಲ್ಲಿ ನಿಯಮಿತ ವ್ಯಾಯಾಮದೊಂದಿಗೆ ನೀವು ಸೇವಿಸುವ ಆಹಾರದ ಬಗ್ಗೆ ಎಚ್ಚರಿಕೆ ವಹಿಸುವುದೂ ಮುಖ್ಯವಾಗಿದೆ. ಕೇವಲ ಫಿಟ್‌ನೆಸ್ ಕಾಯ್ದುಕೊಳ್ಳುವುದರಿಂದ ದೈಹಿಕ ಕ್ಷಮತೆ ಬಲಗೊಳ್ಳುವುದಿಲ್ಲ, ಆರೋಗ್ಯಕರವಾದ ಆಹಾರದ ಆಯ್ಕೆಯೂ ಅಷ್ಟೇ ಮುಖ್ಯವಾಗಿದೆ.

ಪೌಷ್ಟಿಕಾಂಶಭರಿತ ಉಪ್ಪು ಒಳ್ಳೆಯದು ಎಂದುಕೊಂಡು ಕ್ರೀಡಾಪಟುಗಳು ಹಲವೊಮ್ಮೆ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.ಕಿಟೋನ್ ಸಾಲ್ಟ್ ತೀವ್ರ ದೈಹಿಕ ಕಸರತ್ತಿನ ಸಂದರ್ಭ ಕ್ರೀಡಾಪಟುವಿನ ಸಾಮರ್ಥ್ಯವನ್ನು ವೃದ್ಧಿಸುವ ಬದಲು ಕುಗ್ಗಿಸುತ್ತದೆ ಎಂದು ನೂತನ ಅಧ್ಯಯನವೊಂದು ಬಹಿರಂಗಗೊಳಿಸಿದೆ. ಕಿಟೋನ್ ಸಾಲ್ಟ್ ರಕ್ತದಲ್ಲಿಯ ಕಿಟೋನ್ ಮಟ್ಟವನ್ನು ಕೃತಕವಾಗಿ ಹೆಚ್ಚಿಸುತ್ತದೆ ಮತ್ತು ಇದರಿಂದಾಗಿ ನಮ್ಮ ಶರೀರವು ಇಂಧನವನ್ನಾಗಿ ಕೊಬ್ಬಿನ ಬಳಕೆಯನ್ನು ಅವಲಂಬಿಸುವುದು ಅನಿವಾರ್ಯ ವಾಗುತ್ತದೆ.

ಅಂದ ಹಾಗೆ ಕಿಟೋನ್ ಸಾಲ್ಟ್ ಎಂದರೇನು? ಕಿಟೋನ್ ಸಾಲ್ಟ್‌ಗಳು ಬಿಟಾ ಹೈಡ್ರೊಕ್ಸಿಬುಟಿರೇಟ್(ಬಿಎಚ್‌ಬಿ) ಹಾಗೂ ಸೋಡಿಯಂ, ಕ್ಯಾಲ್ಶಿಯಂ, ಮ್ಯಾಗ್ನೇಷಿಯಂ ಅಥವಾ ಪೊಟ್ಯಾಷಿಯಂ ಅನ್ನು ಒಳಗೊಂಡ ಪೂರಕಗಳಾಗಿವೆ. ಶರೀರದ ಹೀರುವಿಕೆಯ ವೇಗವನ್ನು ಹೆಚ್ಚಿಸಲು ಈ ಸಾಲ್ಟ್‌ನ್ನು ಬಳಸಲಾಗುತ್ತದೆ.

ಅಧ್ಯಯನಕ್ಕಾಗಿ ಸಂಶೋಧಕರು ಒಂದೇ ಬಗೆಯ ಬಾಡಿ ಮಾಸ್ ಇಂಡೆಕ್ಸ್(ವ್ಯಕ್ತಿಯ ಎತ್ತರಕ್ಕನುಗುಣವಾಗಿ ದೇಹತೂಕದ ಸೂಚಿ)ಗಳನ್ನು ಹೊಂದಿದ್ದ ಪುರುಷ ಕ್ರೀಡಾಪಟುಗಳ ಎರಡು ಗುಂಪುಗಳನ್ನು ಆಯ್ದಕೊಂಡಿದ್ದರು. ಮೊದಲ ಗುಂಪು ಕಿಟೋನ್ ಸಾಲ್ಟ್ ಸೇವಿಸಿದ್ದರೆ, ಎರಡನೇ ಗುಂಪು ಅಂತಹುದೇ ರುಚಿ ಹೊಂದಿದ್ದ ಮಾತ್ರೆಗಳನ್ನು ಸೇವಿಸಿತ್ತು. ಎರಡೂ ಗುಂಪುಗಳಿಗೆ ನಿಗದಿತ ಅವಧಿಗೆ ಸೈಕಲ್ ಚಲಾಯಿಸುವ ಕಸರತ್ತನ್ನು ನೀಡಲಾ ಗಿತ್ತು. ಕಿಟೋನ್ ಸಾಲ್ಟ್ ಸೇವಿಸಿದ್ದ ಗುಂಪಿನ ನಿರ್ವಹಣೆಯು ಇನ್ನೊಂದು ಗುಂಪಿನ ನಿರ್ವಹಣೆಗಿಂತ ಶೇ.7ರಷ್ಟು ಕಡಿಮೆಯಾಗಿತ್ತು. ಅಧ್ಯಯನ ವರದಿಯು ‘ಅಪ್ಲೈಡ್ ಫಿಜಿಯಾಲಜಿ, ನ್ಯೂಟ್ರಿಷನ್ ಆ್ಯಂಡ್ ಮೆಟಾಬಾಲಿಸಂ’ ಜರ್ನಲ್‌ನಲ್ಲಿ ಇತ್ತೀಚಿಗೆ ಪ್ರಕಟಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News